ಶಿವಮೊಗ್ಗ ತಾಲೂಕಿನ ಹುಣಸೋಡುವಿನಲ್ಲಿ ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಸ್ಪೋಟಕಗಳು ತುಂಬಿದ್ದ ಲಾರಿಯೊಂದು ಸ್ಪೋಟಗೊಂಡಿದ್ದು. ಸ್ಥಳದಲ್ಲಿದ್ದ ಹಲವಾರು ಜನ ಕಾರ್ಮಿಕರ ಮತ್ತಿತರರು ಈ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ನಿಖರ ಅಂಕಿ ಅಂಶ ಇನ್ನಷ್ಟೆ ಬೆಳಕಿಗೆ ಬರಬೇಕಿದೆ. ಈ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಸ್ಪೋಟದ ಸದ್ದು ಸುಮಾರು ಐವತ್ತು ಕಿ.ಮೀಟರ್ ತನಕ ಕೇಳಿತ್ತು ಮತ್ತು ಮನೆಗಳು ನಡುಗಿದ್ದವು, ಸ್ಪೋಟದ ವಿಚಾರ ತಿಳಿದಿಲ್ಲದ ಕಾರಣಕ್ಕೆ ರಾತ್ರಿಯಿಡೀ ತಾವುಗಳು ಭೂಕಂಪದ ಭಯದಿಂದ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು.
ಶಿವಮೊಗ್ಗದ ಬಿಜೆಪಿ ನಾಯಕರುಗಳಿಗೆ ಸಂಬಂಧಿಸಿದ ಡೈನಮೈಟ್ಸ್ ತುಂಬಿದ ಲಾರಿ ಸ್ಪೋಟ- ಹಲವರ ಸಾವು: ಯಡಿಯೂರಪ್ಪ, ಈಶ್ವರಪ್ಪ ರಾಜೀನಾಮೆಗೆ ಹೆಚ್.ಎಸ್ ಸುಂದರೇಶ್ ಆಗ್ರಹ

