Advertisement

ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ವೀಕ್ಷಿಸಿ, ಜನಸಾಮಾನ್ಯರೊಂದಿಗೆ ಕುಳಿತು ಬೋಜನ ಸವಿದ ರಾಹುಲ್‌ ಗಾಂಧಿ: ಅತ್ಯಂತ ಅಪರೂಪದ ಹಾಗೂ ರೋಚಕ ಫೋಟೋಗಳು!

Advertisement

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ತಮಿಳುನಾಡಿನ ಅವನಿಯಪುರಂ ಗೆ ಆಗಮಿಸಿ ಅಲ್ಲಿನ ಐತಿಹಾಸಿಕ ‘ಜಲ್ಲಿಕಟ್ಟು’ ಕ್ರೀಡೆಯನ್ನು ವೀಕ್ಷಿಸಿ, ಆ ನಂತರ ಗ್ರಾಮೀಣ ಪ್ರದೇಶದ ಜನರೊಂದಿಗೆ ಕುಳಿತು ಊಟವನ್ನು ಮಾಡಿ ನೆರೆದ ಜನಸಮುದಾಯದಿಂದ ಸರಳ ಹಾಗೂ ಸಜ್ಜನ ನಾಯಕ ಎನ್ನಿಸಿಕೊಂಡರು. ಮಕರ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಎಂದು ಆಚರಿಸಲಾಗುತ್ತದೆ. ಈ ಪ್ರಯುಕ್ತ ರಾಜ್ಯದೆಲ್ಲೆಡೆ ಜಲ್ಲಿಕಟ್ಟು ಕ್ರೀಡೆ ನಡೆಯುತ್ತಿದ್ದು, ಈ ಪೈಕಿ ಮಧುರೈನ ಅವನಿಯಪುರಂನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು ಹಾಗೂ ಮಕರ ಸಂಕ್ರಾತಿ (ಪೊಂಗಲ್‌ ಹಬ್ಬ) ಆಚರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ದೆಹಲಿಯಿಂದ ತಮಿಳುನಾಡಿಗೆ ಆಗಮಿಸಿದ್ದರು. ತಮಿಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಇಲ್ಲಿನ ಜನರೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಇಲ್ಲಿನ ಜನರ ಇತಿಹಾಸ, ಭಾವನೆ ಮತ್ತು ಸಂಸ್ಕೃತಿಯನ್ನು ಕಲಿಯಲು ಇಲ್ಲಿಗೆ ಬಂದಿದ್ದೇನೆ.ಭಾರತದ ಭವಿಷ್ಯಕ್ಕಾಗಿ ತಮಿಳು ಸಂಸ್ಕೃತಿ, ಭಾಷೆ ಮತ್ತು ಇತಿಹಾಸ ಮುಖ್ಯವಾಗಿದೆ. ಇದನ್ನು ಗೌರವಿಸುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಬ್ಬರೂ ಇದನ್ನು ಗೌರವಿಸಬೇಕಿದೆ. ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ನಾವು ಮೂಲೆಗೆ ಸರಿಸಿದ್ದೇವೆ ಎಂಬ ಟೀಕೆ ಮಾಡುವವರಿಗೆ ಉತ್ತರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್‌, ಟಿಎನ್‌ಸಿಸಿ ಮುಖ್ಯಸ್ಥ ಕೆ.ಸಿ ಅಳಗಿರಿ, ಪುದುಚೇರಿಯ ಮುಖ್ಯಮಂತ್ರಿಗಳಾದ ವಿ.ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement