18 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಹೇಗೆ ಗೊತ್ತೇ? ಎಪ್ರಿಲ್ 28ರಿಂದ ನೋಂದಣಿ ಆರಂಭ!
18 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಹೇಗೆ ಗೊತ್ತೇ? ಎಪ್ರಿಲ್ 28ರಿಂದ ನೋಂದಣಿ ಆರಂಭ!
Advertisement
18 ವರ್ಷದ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಪಡೆಯಲು ನೋಂದಣಿ ಕಡ್ಡಾಯವಾಗಿದ್ದು, ನೋಂದಣಿ ಮಾಡಿಕೊಳ್ಳುವ ವಿಧಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ!
18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದ ಬೆನ್ನಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಈ ಕುರಿತು ರಾಜ್ಯ ಸರ್ಕಾರದ ನಡೆಯನ್ನು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದರು.
ಈ ನಡುವೆ ರಾಜ್ಯ ಸರ್ಕಾರ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 14 ದಿನಗಳ ಕಾಲ ಇಡೀ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಹಾಗೂ ಇದೇ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದೆ. ಈ ಹಿಂದೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಲಸಿಕೆಯನ್ನು ಉಚಿತವಾಗಿ ನೀಡಲಾಗುತಿತ್ತು.
ಇದೀಗ 18ರಿಂದ 44 ವರ್ಷದ ಒರೆಗಿನ ವಯೋಮಾನದವರು ಲಸಿಕೆಯನ್ನು ಹಾಕಿಸಿಕೊಳ್ಳಲು ಇದೇ ಏಪ್ರಿಲ್ 28ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಲಸಿಕೆಗೆ ನೋಂದಣಿ ಮಾಡುವ ವಿಧಾನ ಇಂತಿದೆ:
ಹಂತ ೧) ಮೊದಲಿಗೆ ಕೋವಿನ್ ಪೋರ್ಟಲ್ ( www.cowin.gov.in.) ಅಥವಾ ಆ್ಯಪ್ ನಲ್ಲಿ ಲಾಗಿನ್ ಆಗಬೇಕು.
ಹಂತ ೨) ಮೊಬೈಲ್ ಸಂಖ್ಯೆ ಎಂಟರ್ ಮಾಡಿ
ಹಂತ ೩) ಅಕೌಂಟ್ ಓಪನ್ ಮಾಡಲು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಪಡೆದು ಅದನ್ನು ನಮೂದಿಸಿ 'ವೆರಿಪೈ' ಬಟನ್ ಒತ್ತಿ
ಹಂತ ೪) ಈ ಲಸಿಕೆ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಬಳಿ ಇರುವ ಯಾವುದಾದರೂ ಒಂದು ಫೋಟೋ ಐಡಿ ಆಯ್ಕೆ ಮಾಡಬೇಕು.
ಹಂತ ೫) ನಿಮ್ಮ ಹೆಸರು, ವಯಸ್ಸು, ಲಿಂಗ, ಮೊದಲಾದ ಮಾಹಿತಿ ತುಂಬಬೇಕು
ಹಂತ ೬) ಮಾಹಿತಿ ತುಂಬಿದ ನಂತದ 'ರಿಜಿಸ್ಟರ್' ಬಟನ್ ಒತ್ತಿ
ಹಂತ ೭) ನೋಂದಣಿ ಕಾರ್ಯ ಮುಗಿದ ನಂತರ ನಿಮ್ಮ ಅಕೌಂಟ್ ವಿವರಗಳನ್ನು ತೋರಿಸುತ್ತದೆ.
ಹಂತ ೮) ಒಂದೇ ಖಾತೆಗೆ 'Add More' ಬಟನ್ ಮೂಲಕ ಮತ್ತೆ 3 ಜನ ಸದಸ್ಯರನ್ನು ಸೇರಿಸಬಹುದಾಗಿದೆ.
ಹಂತ ೯) ಆ ನಂತರ Schedule appointment ಬಟನ್ ಒತ್ತಿ, ಯಾವ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬೇಕು ಎಂಬುದನ್ನು ಆಯ್ಕೆ ಮಾಡಿ.
ಹಂತ ೧೦) ಆ ನಂತರ ಯಾವ ದಿನಾಂಕದದಂದು ಲಸಿಕೆ ಲಭ್ಯವಾಗಲಿದೆ ಎಂಬುದನ್ನು ತೋರಿಸುತ್ತದೆ. ಆಗ 'book' ಬಟನ್ ಒತ್ತುವ ಮೂಲಕ ಆ ದಿನಾಂಕಕ್ಕೆ ನಿಮ್ಮ ಒಪ್ಪಿಗೆ ನೀಡಬಹುದು.
ಹಂತ ೧೧) ಲಸಿಕೆ ಬುಕಿಂಗ್ ಯಶಸ್ವಿಯಾದ ನಂತರ ನಿಮಗೆ ಒಂದು ಮೆಸೇಜ್ ಬರುತ್ತದೆ.
ಹಂತ ೧೨) ಮೆಸೇಜ್‌ನ ಆದಾರದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.