Advertisement

ಅವೈಜ್ಞಾನಿಕವಾಗಿ 'ಮೂಗಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡ' ರಾಯಚೂರಿನ ಶಿಕ್ಷಕ ಮೃತ್ಯು!

Advertisement

ಮೂಗಿನೊಳಗೆ ನಿಂಬೆ ಹಣ್ಣಿನ ರಸವನ್ನು ಹಾಕಿಕೊಂಡ ಪರಿಣಾಮ ರಾಯಚೂರಿನ ಸರಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಸಿಂಧನೂರು ನಗರದ ನಟರಾಜ ಕಾಲನಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ರಾಯಚೂರಿನ ಶರಣಬಸವೇಶ್ವರ ಕಾಲೋನಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ(43) ಮೃತ ವ್ಯಕ್ತಿಯಾಗಿದ್ದಾರೆ. ಇವರು ಮೂಗಿನೊಳಗೆ ನಿಂಬೆ ರಸ ಬಿಟ್ಟುಕೊಂಡ ಸ್ವಲ್ಪವೇ ಸಮಯದಲ್ಲಿ ಕಡಿಮೆ ರಕ್ತದೊತ್ತಡ, ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆಂದು ಹೇಳಲಾಗಿದೆ. ಮೊನ್ನೆಯಷ್ಟೇ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಅವರು ಮೂಗಿನಲ್ಲಿ ನಾಲ್ಕು ಹನಿ ನಿಂಬೆ ರಸ ಹಾಕುವುದರಿಂದ ಕೊರೊನಾವನ್ನು ತಡಗಟ್ಟಬಹುದು ಅದರಿಂದ ಆಕ್ಸಿಜನ್ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಅವೈಜ್ಞಾನಿಕ ಹೇಳಿಕೆಯನ್ನು ನೀಡಿದ್ದರು. ಅವರ ಈ ಹೇಳಿಕೆಯನ್ನು ಆ ಬಳಿಕ ಹಲವು ತಜ್ಞರು, ಲೇಖಕರು, ಪತ್ರಕರ್ತರು ಮತ್ತು ಬುದ್ಧಿಜೀವಿಗಳು ವಿರೋಧಿಸಿದ್ದರು. ಆದರೆ ಸಂಕೇಶ್ವರ್ ಅವರನ್ನು ಸಮರ್ಥಿಸಿ ಬಿಜೆಪಿ ಪರ ಫೇಸ್‌ಬುಕ್‌ ಪೇಜ್ ಪೋಸ್ಟ್ ಕಾರ್ಡ್ ನಲ್ಲಿ ಇ- ಪೋಸ್ಟರ್ ಪ್ರಕಟಿಸಲಾಗಿತ್ತು ಮತ್ತು ಅದರಲ್ಲಿ ಸಂಕೇಶ್ವರ್ ಅವರ ಅವೈಜ್ಞಾನಿಕ, ಜೀವಹಾನಿಕರ ಹೇಳಿಕೆಯನ್ನು ವಿರೋಧಿಸಿದವರನ್ನು ಟೀಕಿಸಲಾಗಿತ್ತು. ಇದೀಗ ರಾಯಚೂರಿನ ಶಿಕ್ಷಕನ ಸಾವಿನಿಂದಾಗಿ ಫೇಸ್‌ಬುಕ್‌, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶ ವ್ಯಕ್ತವಾಗತೊಡಗಿದೆ. __________________________________

Advertisement
Advertisement
Recent Posts
Advertisement