Advertisement

ಕರ್ನಾಟಕ ಕಾಂಗ್ರೆಸ್ ನಿಂದ 'ಬೆಡ್ ಬ್ಲಾಕಿಂಗ್ ಹಗರಣ'ದ ಆರೋಪಿ ಬಿಜೆಪಿ ಶಾಸಕನ ವಿರುದ್ಧ #ArrestBJPMLASatish ಹ್ಯಾಶ್​ಟ್ಯಾಗ್‌‌ನಡಿ ಟ್ವೀಟ್ ವಾರ್!

Advertisement

ಒಂದೆಡೆ ರಾಜ್ಯದ ಜನತೆ ಕೊರೊನಾ ಎರಡನೆಯ ಅಲೆಯ ಭಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಮತ್ತೊಂದೆಡೆ ಅದೇ ಜನ ಲಾಕ್‌ಡೌನ್ ಪರಿಣಾಮವಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಒಂದೊತ್ತಿನ‌ ಊಟಕ್ಕೂ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯದ ಫಲವಾಗಿ ಕೊರೊನಾ ಪೀಡಿತರು ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಅಥವಾ ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ.‌ ಇನ್ನೊಂದೆಡೆ ಆಕ್ಸಿಜನ್ ಇದ್ದರೂ ಸಮರ್ಪಕವಾಗಿ ಅದನ್ನು ಪೂರೈಕೆ ಮಾಡದೆ ಅಸಡ್ಡೆ ತೋರಿದ ಕಾರಣಕ್ಕಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಜನ ಅಮಾಯಕರು ಸತ್ತಿದ್ದಾರೆ. ಹಾಗೆಯೇ ಸರ್ಕಾರದ ಶಾಸಕರುಗಳೇ 'ಬೆಡ್ ಬ್ಲಾಕಿಂಗ್' ಮಾಡಿಸುವ ಮೂಲಕ ಗಂಭೀರ ಹಂತದಲ್ಲಿರುವ ಕೊರೊನಾ ರೋಗ ಪೀಡಿತರಿಗೆ ಹಾಸಿಗೆ ಸಿಗದಂತೆ ಮಾಡಿ ಅವರನ್ನು ಕೊಲ್ಲುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ಸತೀಶ್ ರೆಡ್ಡಿ ಮುಂತಾದ ಶಾಸಕರುಗಳು ಬೆಡ್ ಬ್ಯಾಕಿಂಗ್ ನಲ್ಲಿ ಹಗರಣದ ನಡೆದಿರುವ ಕುರಿತು ಪತ್ರಿಕಾಗೋಷ್ಠಿ ಮಾಡುತ್ತಾರೆ ಮತ್ತು ಬಿಬಿಎಂಪಿ ದಕ್ಷಿಣ ವಾರ್ ರೂಂ ಗೆ ತೆರಳಿ ಅಲ್ಲಿರುವ 200ಕ್ಕೂ ಹೆಚ್ಚು ಉದ್ಯೋಗಿಗಳ ಪೈಕಿ ಇರುವ 17ಜನ ಒಂದೇ ಧರ್ಮದ ಉದ್ಯೋಗಿಗಳ ಕುರಿತು ಇದೇನು ಬಿಬಿಎಂಪಿಯೋ, ಮದರಸವೋ ಎಂದು ಕೂಗಾಡುತ್ತಾರೆ. ಅವರುಗಳನ್ನು ಕೆಲಸದಿಂದಲೂ ಕಿತ್ತು ಹಾಕುತ್ತಾರೆ ಮತ್ತು ಪರೋಕ್ಷವಾಗಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಾರೆ. ಇದೆಲ್ಲ ನಡೆದ ಮುರುದಿನವೇ ಪತ್ರಿಕಾಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯನ‌ ಜೊತೆಗಿದ್ದು ಮಾತನಾಡಿದ್ದ ಸ್ಥಳೀಯ ಶಾಸಕ ಸತೀಶ್ ರೆಡ್ಡಿಯೇ ಬಿಬಿಎಂಪಿ ನೌಕರರಿಗೆ ಬೆದರಿಕೆ ಹಾಕಿ ಈ ಬೆಡ್ ಬ್ಲಾಕಿಂಗ್ ಮಾಡಿಸುತ್ತಿದ್ದುದು ಬೆಳಕಿಗೆ ಬಂದಿದೆ. ಆದರೆ ಸತೀಶ್ ರೆಡ್ಡಿ ' ತಾನು ಶಾಸಕನಾಗಿರುವ ಕಾರಣಕ್ಕಾಗಿ ತನಗೆ ಬೆಡ್ ಕೊಡಿಸುವಂತೆ ಕೋರಿ ಹಲವು ಕರೆಗಳು ಬರುತ್ತವೆ. ಅದರಂತೆ ಕೊಡಿಸಿದ್ದೇನೆಯೇ ಹೊರತೂ ತನಗೂ ಆ ಬೆಡ್ ಬ್ಲಾಕಿಂಗ್ ದಂದೆಗೂ ಸಂಬಂಧವಿಲ್ಲ' ಎಂದಿದ್ದಾರೆ. ಈ ಎಲ್ಲದರ ಕುರಿತು ಕರ್ನಾಟಕ ಕಾಂಗ್ರೆಸ್ ಇಂದು #ArrestBJPMLASatish ಎಂಬ ಹ್ಯಾಶ್​ಟ್ಯಾಗ್‌ ನಡಿ ಟ್ವೀಟ್ ವಾರ್ ನಡೆಸಿದೆ. ಟ್ವೀಟ್‌ನ ವಿವರಗಳು ಇಂತಿವೆ: *ಜನರು ಹಾಸಿಗೆ, ಆಕ್ಸಿಜನ್, ಚಿಕಿತ್ಸೆ ಸಿಗದೇ ಸಾಯುತ್ತಿದ್ದಾಗ ಜನರ ಜೀವದೊಂದಿಗೆ ಚೆಲ್ಲಾಟವಾಡಿದ, ಬೆಡ್ ಬ್ಲ್ಯಾಕಿಂಗ್ ಹಗರಣದ ಆರೋಪಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. *207 ಜನ ಕೆಲಸ ಮಾಡುತ್ತಿದ್ದ ಬಿಬಿಎಂಪಿ ವಾರ್‌ ರೂಂನಲ್ಲಿಯ ಕೇವಲ 17 ಮಂದಿ ವಿರುದ್ಧ ಬಿಜೆಪಿ ಶಾಸಕರು ಸಂಸದರು ಸುಳ್ಳು ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಕೋಮು ಬಣ್ಣ ಬಳೆಯುವ ಮೂಲಕ ಹಗರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಇಂಧವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ. *ಹಾಸಿಗೆ ಹಗರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ @mla_sudhakar ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಸಚಿವ ಸ್ಥಾನದಲ್ಲಿ ಒಂದೇ ಒಂದು ಕ್ಷಣವೂ ಮುಂದುವರೆಯಲು ಯೋಗ್ಯರಲ್ಲ. *ಬಿಜೆಪಿಯ ಕೆಲವರು ಬೆಡ್ ಬ್ಲ್ಯಾಕಿಂಗ್ ಹಗರಣವನ್ನು ಒಂದು ಕೋಮಿನ ಜನರ ತಲೆಗೆ ಕಟ್ಟುವ ಪಿತೂರಿ ನಡೆಸಿದ್ದಾರೆ. ಕೂಡಲೇ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ರಿಗೆ ಶಿಕ್ಷೆ ಆಗಬೇಕು.... ಅಲ್ಲಿಯವರೆಗೂ ಹಗರಣದ ಪ್ರಮುಖ ಆರೋಪಿ ಶಾಸಕ ಸತೀಶ್ ರೆಡ್ಡಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. *ಜನರು ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಔಷಧಿ, ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್ ‌ನಿರ್ವಹಣೆಯ ಹೆಸರಲ್ಲಿ 'ಕೊರೊನ ಹೆಣದ‌ ಮೇಲೆ ಹಣ ಮಾಡುವ ದಂದೆ' ಮಾಡುತ್ತಿದೆ. *ಜನರ‌ ಜೀವ ಉಳಿಸುವುದು ಕರ್ನಾಟಕ ಸರ್ಕಾರದ ಆದ್ಯತೆಯ ಕರ್ತವ್ಯ. ಇಂಥ ಸರ್ಕಾರದ ಶಾಸಕ ಸತೀಶ್ ರೆಡ್ಡಿ ಅವರೇ ಬೆಡ್ ಬ್ಲ್ಯಾಕಿಂಗ್ ದಂಧೆಯ ಪ್ರಮುಖ ಆರೋಪಿ ಆಗಿದ್ದಾರೆ. ಕೂಡಲೇ ಇವರನ್ನು ಬಂಧಿಸಿ. *ಕಳೆದ ಬಾರಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ₹2000 ಕೋಟಿ ಹಣ ಲೂಟಿ ಮಾಡಿತು. ಈ ಬಾರಿ ಹಾಸಿಗೆ ಹಗರಣ ಮಾಡುತ್ತಿದೆ. ಹೇಸಿಗೆ ತಿನ್ನುವುದೇ ಈ ಸರ್ಕಾರದ ಕೆಲಸವೇ? *ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ‌ ಅನ್ನೋದು ಹಾಸಿಗೆ ಹಗರಣದಲ್ಲೂ ಸಾಬೀತಾಗಿದೆ. ಆದರೆ ಜನರ ಜೀವಗಳನ್ನು ಬಲಿಕೊಟ್ಟಾದರೂ ದುಡ್ಡು ಮಾಡಬೇಕು ಎನ್ನುವ ಕೆಟ್ಟ ಸ್ಥಿತಿಗೆ ಇಳಿದಿದೆ. ನಿಮ್ಮಂಥವರಿಗೆ ಸರ್ಕಾರ ನಡೆಸುವ ನೈತುಕತೆ ಇಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ. *ಹಾಸಿಗೆ ಹಗರಣದ ಮೂಲಕ ಕೊರೊನ ಹೆಣದ ಮೇಲೆ ಹಣ ಮಾಡುತ್ತಿರುವವರು, ಶಾಸಕ ಸತೀಶ್ ರೆಡ್ಡಿ? ಸಂಸದ ತೇಜಸ್ವಿ? ಸಚಿವ ಆರ್. ಅಶೋಕ್? ಕೋತಿ ಮೊಸರು ತಾನು ತಿಂದು ಮೇಕೆ ಮೂತಿಗೆ ವರೆಸಿದಂತೆ, ಅದರಂತೆ ಈಗ ಈ ಬಿಜೆಪಿ ನಾಯಕರು ಎಲ್ಲವನ್ನು ತಾವು ತಿಂದು ಒಂದು ಕೋಮಿನ ಜನರ ತಲೆಗೆ ಕಟ್ಟುತ್ತಿದ್ದಾರೆ. ಎಲ್ಲವೂ ತನಿಖೆಯಾಗಲಿ. *ಬದುಕಿದ್ದವರಿಗೆ ಚಿಕಿತ್ಸೆ ಕೊಡಲಿಲ್ಲ, ಸತ್ತವರಿಗೆ ಒಳ್ಳೆಯ ಸಂಸ್ಕಾರ ಕೊಡಲಿಲ್ಲ, ಹೀಗಿದ್ದರೂ ದುಡ್ಡು ಮಾಡುವ ದಂಧೆಯನ್ನು ನಿಲ್ಲಿಸುತ್ತಿಲ್ಲ ಕರ್ನಾಟಕದ ಬಿಜೆಪಿ ಸರ್ಕಾರ. *"ಕೊರೊನ ನಿರ್ವಹಣೆಗೆ ಎಲ್ಲ ವ್ಯವಸ್ಥೆ ಇದೆ" ಎಂದು ಹಿಂದಿನಿಂದಲೂ ಸರ್ಕಾರ ಹೇಳಿಕೊಂಡೆ ಬರುತ್ತಿದೆ. ಆದರೂ ಜನರು ಸಾಯುತ್ತಿದ್ದಾರೆ. ಬಿಜೆಪಿ ಶಾಸಕರು, ಸಚಿವರು, ಸಂಸದರು ಮಾಡುತ್ತಿರುವ ಹಗರಣಗಳ ಕಡೆಗೆ ಜನರ ಗಮನ ಹೋಗಬಾರದು ಎನ್ನುವ ಕಾರಣಕ್ಕೇ ತಾವೇ ಮಾಡಿದ ಬೆಡ್ ಬ್ಯಾಕಿಂಗ್ ಹಗರಣದಲ್ಲಿ ಬೇರೆ ಯಾರನ್ನೋ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. # *ಬೆಡ್ ಬ್ಲಾಕಿಂಗ್ ಹಗರಣವನ್ನ ಸಂಸದ ತೇಜಸ್ವಿ ಸೂರ್ಯ ಅವರು ಬಯಲಿಗೆಳೆದರು, ಅವರ ಪಕ್ಕದಲ್ಲೇ, ಹಗರಣದ ಪ್ರಮುಖ ಆರೋಪಿ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕುಳಿತಿದ್ದರು. ಎಂಥ ನಾಟಕ ಈ ಬಿಜೆಪಿಯವರದು? #ArrestBJPMLASatish ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement