ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸುತ್ತಿರುವುದು ಅಕ್ಷಮ್ಯ: ನವೀನ್ ಸಾಲ್ಯಾನ್
ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸುತ್ತಿರುವುದು ಅಕ್ಷಮ್ಯ: ನವೀನ್ ಸಾಲ್ಯಾನ್
Advertisement
'ಕೋವಿಡ್ 19ರ ಸಂಕಷ್ಟದಲ್ಲಿರುವ ಜನರ ಜೀವನ ಅಸ್ತವ್ಯಸ್ತವಾಗಿರುವ ಈ ಸಮಯದಲ್ಲಿ ಸರ್ಕಾರ ಬಡಜನರ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡಿಗೆ ಬದಲಾವಣೆ ತಂದು ತನ್ನ ದುಷ್ಟ ಆಡಳಿತ ವ್ಯವಸ್ಥೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದೆ.
ಈಗಾಗಲೇ ಹಲವಾರು ಕುಟುಂಬಗಳ ಬಿಪಿಎಲ್ ಕಾರ್ಡನ್ನು ಕಿತ್ತುಕೊಂಡು ತನ್ನ ನೀಚತನವನ್ನು ತೋರಿದ ಸರ್ಕಾರ ಈ ಕಾರ್ಯವನ್ನು ಮುಂದುವರಿಸಿಕೊಂಡು ಸಾಗುತ್ತಿದೆ ಆನ್ಲೈನ್ ಮುಖಾಂತರ ಬಿಪಿಎಲ್ ಕಾರ್ಡ್ ರದ್ದು ಆಗುತ್ತಿರುವುದು ವ್ಯಾಪಕವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಬಡಜನರ ಪರವಾಗಿ ನಿಲ್ಲಬೇಕಾಗಿದ್ದ ಸರಕಾರ ಬಡಜನರ ಹೊತ್ತಿನ ಊಟದ ಮೇಲೆ ತನ್ನ ದುಷ್ಟ ಬುದ್ಧಿಯನ್ನು ತೋರಿಸುವಲ್ಲಿ ಯಶಸ್ಸು ಕಂಡಂತಿದೆ' ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲಿಯಾನ್ ಹೇಳಿದ್ದಾರೆ.
ಕೋವಿಡ್19 ಸಂದರ್ಭದಲ್ಲಿ ಆರೋಗ್ಯ ಬೀತಿ!
ಕೋವಿಡ್ 19 ಸಾಂಕ್ರಾಮಿಕ ರೋಗ ವ್ಯಾಪಕವಾಗಿರುವ ಸಮಯದಲ್ಲಿ ಪಡಿತರ ಚೀಟಿ ರದ್ದು ಮಾಡುವುದರ ಜೊತೆಗೆ ಬಿಪಿಎಲ್ ಕಾರ್ಡಿನಿಂದ ಸಿಗುತ್ತಿದ್ದ ಆರೋಗ್ಯ ಸೌಲಭ್ಯಕೆ ಕಲ್ಲು ಬಿದ್ದಂತಾಗಿದೆ, ಆಸ್ಪತ್ರೆಗಳಲ್ಲಿನ ದುಬಾರಿ ವೆಚ್ಚವನ್ನು ಸ್ವತಃ ಬಡಜನರು ಭರಿಸಬೇಕಾದ ಸಂಕಷ್ಟ ಎದುರಾಗಿದೆ. ರೈತರು, ದಿನಗೂಲಿ ನೌಕರರು ಹೊತ್ತು ಊಟಕ್ಕೂ ಕಷ್ಟಪಡುತ್ತಿರುವ ಈ ಸಮಯದಲ್ಲಿ ಸರ್ಕಾರದ ಅಮಾನುಷ ವರ್ತನೆ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ, ಈ ಮೂಲಕವಾದರೂ ಸರ್ಕಾರ ಎಚ್ಚೆತ್ತುಕೊಂಡು ಬಡಜನರ ಬಿಪಿಎಲ್ ಕಾರ್ಡ್ ರದ್ಧತಿಯನ್ನು ಕೂಡಲೇ ನಿಲ್ಲಿಸಬೇಕು ಎಂದವರು ಕಿಡಿ ಕಾರಿದ್ದಾರೆ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.