Advertisement

ಪರಿಷ್ಕೃತ ಲಾಕ್‌ಡೌನ್ ಮಾರ್ಗಸೂಚಿ ಅವೈಜ್ಞಾನಿಕ, ಗ್ರಾಮೀಣ ಪ್ರದೇಶದ ಜನರಿಗೆ ಇದರ ಪಾಲನೆ ಅಸಾಧ್ಯ: ದಿನೇಶ್ ಗುಂಡೂರಾವ್

Advertisement

ರಾಜ್ಯ ಸರ್ಕಾರಕ್ಕೆ ಪರಿಷ್ಕೃತ ಲಾಕ್‌ಡೌನ್ ಮಾರ್ಗಸೂಚಿಯನ್ನು ಮಾಡಿಕೊಟ್ಟ ಪುಣ್ಯಾತ್ಮ ಯಾರು? ಈ ಲಾಕ್‌ಡೌನ್ ನಿಯಮದ ಪ್ರಕಾರ ಬೆಳಗ್ಗೆ 10 ರ ವರೆಗೆ ಅಗತ್ಯ ವಸ್ತುಗಳು ಸಿಗುತ್ತವೆ. ಆದರೆ ಅವುಗಳನ್ನು ಕೊಳ್ಳಲು ಜನ ವಾಹನ ಬಳಸುವಂತಿಲ್ಲ. ಹಾಗಾದರೆ ವೃದ್ದರು, ಅಶಕ್ತರು ಏನು ಮಾಡಬೇಕು? ಜನ ಯಾವುದಾದರೂ ಮಾಯಾ ವಾಹನ ಬಳಸಿ ಅಗತ್ಯ ಸಾಮಾನು ತರಬೇಕೆ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಹೆಜ್ಜೆ ಹೆಜ್ಜೆಗೆ ಅಂಗಡಿ ಮುಂಗಟ್ಟು ಸಿಗುತ್ತವೆ. ಆದರೆ ಹಳ್ಳಿಗಳ ಪರಿಸ್ಥಿತಿ ಹಾಗಿಲ್ಲ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳು ಐದಾರು ಕಿ.ಮೀ.ದೂರ ಇದೆ. ವಾಹನ ಬಳಸದೆ ಇಷ್ಟು ದೂರ ನಡೆದು ತಲೆಯ ಮೇಲೆ ಸಾಮಾನು ಹೊತ್ತು ತರಬೇಕೆ? ಇಂತಹ ತಲೆ ಕೆಟ್ಟ ನಿಯಮಗಳನ್ನು ಮಾಡುವ ಸರ್ಕಾರಕ್ಕೆ ಕನಿಷ್ಟ ಜ್ಞಾನವೂ ಇಲ್ಲವಾಯಿತೆ? ಯಾವುದಾದರೂ ನಿಯಮ ಜಾರಿಗೆ ತರುವ ಮುನ್ನ,ಸರ್ಕಾರ ನಡೆಸುವವರು ಅದರ ಸಾಧಕ ಬಾಧಕಗಳನ್ನು ಪರಾಮರ್ಶಿಸಬೇಕು. ನೂತನ ಲಾಕ್‌ಡೌನ್ ನಿಯಮಗಳನ್ನು ಪೇಟೆವಾಸಿಗಳು ಪಾಲಿಸಬಹುದು.ಆದರೆ ಗ್ರಾಮೀಣ ಪ್ರದೇಶದಲ್ಲಿ ಜನ ಈ ನಿಯಮ ಪಾಲಿಸಲು ಸಾಧ್ಯವೇ ಇಲ್ಲ. ವಾಹನ ಬಳಸದೆ ಹಳ್ಳಿ ಜನರೇನು ಪುಷ್ಪಕ ವಿಮಾನದಲ್ಲಿ ಓಡಾಡಲು ಸಾಧ್ಯವೆ? ಮೊದಲು ಈ ಗೊಂದಲದ ನಿಯಮ ಬದಲಾಯಿಸಿ ಎಂದವರು ಒತ್ತಾಯಿಸಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement