Advertisement

ಕೊರೊನಾಗೆ ನೀಡಲಾಗುತ್ತಿರುವ ಔಷಧ 'ಐವರ್‌ಮೆಕ್ಟಿನ್' ಪರಿಣಾಮಕಾರಿ ಅಲ್ಲ, ಅಡ್ಡ ಪರಿಣಾಮ ಬೀರುತ್ತದೆ. ಕೂಡಲೇ ಕ್ರಮ ಕೈಗೊಳ್ಳಿ: ಕರ್ನಾಟಕ ಸರ್ಕಾರಕ್ಕೆ ಡಾ. ಯತೀಂದ್ರ ಪತ್ರ.

Advertisement

ದೇಶದಲ್ಲಿ ಮತ್ತು ರಾಜ್ಯದಲ್ಲಿ ಇದೀಗ ಕೊರೊನಾ ಎರಡನೆಯ ಅಲೆ, ದಿನದಿಂದ ದಿನಕ್ಕೆ ಘೋರ ರೂಪ ತಾಳುತ್ತಿದ್ದು, ಆಸ್ಪತ್ರೆಗಳ ಮುಂದೆ, ಸ್ಮಶಾನಗಳ ಮುಂದೆ ಜನರ ಹಾಗೂ ಹೆಣಗಳ ಸರತಿ ಸಾಲು ಸಹಜವಾಗಿ ಹೋಗಿದೆ. ಈ ನಡುವೆ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಔಷಧ ಕೊರೊನಾಗೆ ಪರಿಣಾಮಕಾರಿ ಹೌದೇ ಅಥವಾ ಅಲ್ಲವೇ? ಅದರಿಂದ ಅಡ್ಡ ಪರಿಣಾಮಗಳು ಇಲ್ಲವೇ ಅಥವಾ ಉಂಟೇ? ಮುಂತಾದ ಸಂದೇಹಗಳು ಜನರಲ್ಲಿ ಮೊದಲಿನಿಂದಲೂ ಹೊಗೆಯಾಡುತ್ತಿದ್ದು ಆ ಸಂದೇಹಗಳಿಗೆ ಪುಷ್ಟಿ ನೀಡುವ ವರದಿಯೊಂದು ಇದೀಗ ಪ್ರಕಟಗೊಂಡಿದೆ. ಆ ವರದಿ ಏನೆಂದರೆ, ವರಣಾ ವಿಧಾನಸಭಾ ಕ್ಷೇತ್ರದ ಶಾಸಕರು, ಸ್ವತಃ ವೈಧ್ಯರೂ ಆಗಿರುವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಪುತ್ರ ಡಾ. ಯತೀಂದ್ರ ರವರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಕೆ ಸುಧಾಕರ್ ರವರಿಗೆ ಪತ್ರ ಬರೆದು 'ರೋಗ ಹೋಗಲಾಡಿಸಲು ಯಾವುದೇ ಉಪಯೋಗಕಾರಿಯಲ್ಲದ ಅಲ್ಲದೇ ರೋಗಿಯ ದೇಹದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುವ ಮತ್ತು ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆ ಉಂಟಾಗುವ ಹಾಗೂ ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ವೇಳೆ ಕೊಡಲಾಗುತ್ತಿರುವ 'ಐವರ್‌ಮೆಕ್ಟಿನ್' ಔಷಧವನ್ನು ನೀಡದಂತೆ ಮತ್ತು ಪರಿಣಾಮಕಾರಿ ಎಂದು ಸಾಭೀತಾದ ಸೂಕ್ತ ಔಷಧಗಳನ್ನು ಮಾತ್ರವೇ ನೀಡುವಂತೆ' ವಿನಂತಿಸಿ ಪತ್ರ ಬರೆದಿದ್ದಾರೆ. ಪತ್ರದ ವಿವರ: ಡಾ.ಕೆ ಸುಧಾಕರ್‌ರವರು., ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು., ಇವರಿಗೆ, ಮಾನ್ಯರೆ, 'ರಾಜ್ಯದ ಆಸ್ಪತ್ರೆಗಳಲ್ಲಿ ಪ್ರಸ್ತುತ ಕೊರೊನಾ ಸೋಂಕಿಗೆ ವೈಜ್ಞಾನಿಕವಾಗಿ ಸಾಬೀತಾಗದ ಔಷಧಗಳನ್ನು ನೀಡಲಾಗುತ್ತಿದೆ. ಇದರಿಂದ ಅನಗತ್ಯ ವೆಚ್ಚವಾಗುತ್ತಿದ್ದು, ರಾಜ್ಯದ ಸಂಪನ್ಮೂಲ ವ್ಯಯವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಹಲವಾರು ತಜ್ಞರು ಐವರ್‌ಮೆಕ್ಟಿನ್ (ivermectin) ಔಷದವು ಕೋವಿಡ್ ಚಿಕಿತ್ಸೆಯಲ್ಲಿ ನಿರುಪಯೋಗಿ ಎಂದು ಮತ್ತು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದೆಂದು ಎಚ್ಚರಿಕೆ ನೀಡಿದ್ದರೂ ಸಹ ಹಲವು ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಇದನ್ನೇ ನೀಡಲಾಗುತ್ತಿದೆ. ಆದ್ದರಿಂದ ದಯಮಾಡಿ ಕೂಡಲೇ ತಜ್ಞರ ಸಮಿತಿ ರಚಿಸಿ ಯಾವ ಯಾವ ರೀತಿಯ ಔಷಧಗಳನ್ನು ನೀಡಬೇಕು ಎಂದು ವರದಿಯನ್ನು ಪಡೆದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ನಿರ್ಧಿಷ್ಟ ಔಷಧಗಳನ್ನು ಮಾತ್ರವೇ ನೀಡುವಂತೆ ಸೂಕ್ತ ನಿರ್ದೇಶನ ನೀಡುವಂತೆ ಕೋರುತ್ತೇನೆ.' ಎಂದು ವಿನಂತಿಸಿದ್ದಾರೆ. ಮತ್ತೊಂದೆಡೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಎಂದು ಆರಂಬಿಸಲಾದ ಲಸಿಕಾ ಅಭಿಯಾನ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಲಸಿಕೆ ಸಮರ್ಪಕವಾಗಿ ಪೂರೈಕೆಯಾಗದೆ ಕುಂಟುತ್ತಾ ಸಾಗುತ್ತಿದೆ. ಒಮ್ಮೆ45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಡಂಗುರ ಸಾರಿದರು. ಆದರೆ ಅದನ್ನು ಸಮರ್ಪಕವಾಗಿ ಮಾಡದೆ ಒಂದೆರಡು ದಿನಗಳ ಕಾಲ ಪೂರೈಸಿ ನಿಲ್ಲಿಸಲಾಯಿತು. ಆ ನಂತರ 18ರಿಂದ 44ವರ್ಷದೊಳಗಿನವರಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಿದವರಿಗೆ ಕೊಡುವುದಾಗಿ ಸ್ವತಃ ದೇಶದ ಪ್ರಧಾನಿಯವರೆ ಟಿವಿಯ ಮುಂದೆ ಬಂದು ಘೋಷಿಸಿದರು ಅದನ್ನು ಕೂಡಾ ಒಂದೆರಡು ದಿನಗಳ ಕಾಲ ಮಾತ್ರವೇ ನೀಡಿ ನಿಲ್ಲಿಸಲಾಯಿತು. ಮೊದಲ ಡೋಸ್ ಪಡೆದುಕೊಂಡಿದ್ದ 60ವರ್ಷ ಮೇಲ್ಪಟ್ಟವರಿಗೆ ನಿರ್ದಿಷ್ಟ ಅವಧಿಯ ಎರಡು ಪಟ್ಟು ಕಳೆದರೂ ಇದೀಗ ಎರಡನೆಯ ಡೋಸ್ ನೀಡಲಾಗುತ್ತಿಲ್ಲ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 4ವಾರಗಳಲ್ಲಿ ಎರಡನೆಯ ಡೋಸ್ ತಗೆದುಕೊಳ್ಳುವಂತೆ ಸೂಚಿಸಿದ್ದವರು ಇದೀಗ ಆ ಅವಧಿಯನ್ನು 45ದಿನಗಳಿಗೆ ಹೆಚ್ಚಿಸಿದ್ದಾರೆ. ಆದರೆ 60-70ದಿನ ಕಳೆದವರಿಗೂ ಇನ್ನೂ ಲಸಿಕೆ ನೀಡಿಲ್ಲ. ಕೋವಿಶಿಲ್ಡ್ ಎರಡನೆಯ ಡೋಸ್ ಗೆ 12ವಾರಗಳ ಅಂತರ ಘೋಷಿಸಿದ್ದಾರೆ. ಇದು ವೈಜ್ಞಾನಿಕವೇ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ? ಒಂದು ವೇಳೆ ಮೊದಲ ಸೂಚನೆ ವೈಜ್ಞಾನಿಕವಾಗಿದ್ದರೆ, ಎರಡನೆಯ ಸೂಚನೆ ಅವೈಜ್ಞಾನಿಕವಲ್ಲವೇ? ಅದಲ್ಲವಾದರೆ ಎರಡನೆಯ ಸೂಚನೆ ವೈಜ್ಞಾನಿಕವಾಗಿದ್ದರೆ, ಮೊದಲ ಸೂಚನೆ ಅವೈಜ್ಞಾನಿಕ ಎಂದೆನಿಸುವುದಿಲ್ಲವೇ? ಹಾಗಾದರೆ ಆಳುವ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆಯೇ? ಇನ್ನೊಂದೆಡೆ ಕೊರೊನಾ ಪಾಸಿಟಿವ್ ಆದವರ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಆಸ್ಪತ್ರೆಗಳಲ್ಲಿ ಡಾಕ್ಟರ್ ಇಲ್ಲ, ಬೆಡ್ ಇಲ್ಲ. ಡಾಕ್ಟರ್, ಬೆಡ್ ಇದ್ದರೆ ಔಷಧ ಇಲ್ಲ. ಮೂರೂ ಇದ್ದರೆ ಆಕ್ಸಿಜನ್ ಇಲ್ಲ. ಅಕಸ್ಮಾತ್ ಸತ್ತರೆ ಅಂಬುಲೆನ್ಸ್ ಕೂಡ ಇಲ್ಲ. ಅಂಬುಲೆನ್ಸ್ ಸಿಕ್ಕರೂ ಸ್ಮಶಾನದಲ್ಲಿ ಸುಡಲು, ಹೂಳಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ನಡುವೆ ಆಳುವ ಪಕ್ಷದ ಶಾಸಕರುಗಳ ವಿರುದ್ಧವೇ ಬೆಡ್ ಬ್ಲಾಕಿಂಗ್ ಅರೋಪ ಹಾಗೂ ಆಕ್ಸಿಜನ್ ಬ್ಲಾಕಿಂಗ್, ಮೆಡಿಸಿನ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್ ಮುಂತಾದ ದೂರುಗಳು ಕೂಡ ಕೇಳಿ ಬರುತ್ತಿವೆ. ಹಾಗೆಯೇ ಅದರ ಮುಂದುವರಿದ ಭಾಗವಾಗಿ ಇದೀಗ ಈ 'ಅಡ್ಡ ಪರಿಣಾಮದ ಔಷಧ'ಗಳನ್ನು ಜನರಿಗೆ ನೀಡುತ್ತಿರುವುದರ ಹಿಂದೆ 'ಮೆಡಿಕಲ್ ಸ್ಕ್ಯಾಮ್' ಅಥವಾ 'ಕಮಿಷನ್ ದಂದೆ' ಯ ವಾಸನೆ ಬರತೊಡಗಿದೆ. ಆರೋಗ್ಯ ಸಚಿವರು ಸ್ವತಃ ವೈಧ್ಯರಾಗಿರುವ ಕಾರಣ ಅವರಿಗೆ ಇದರ ಅರಿವಿಲ್ಲದೆ ನಡೆಯುತ್ತಿದೆ ಎಂದು ಹೇಳುವಂತಿಲ್ಲ. ಅರಿವಿದೆಯಾದರೆ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುವ ಇದರ ಹಿಂದಿನ ಅಸಲಿಯತ್ತೇನು ಎಂದು ಸಚಿವರು ಸ್ಪಷ್ಟೀಕರಿಸಬೇಕಲ್ಲವೇ? ಬಹುಶಃ ಇಂತಹ ಆರೋಗ್ಯ ತುರ್ತುಸ್ಥಿತಿ ಯ ಸಂಧರ್ಭದಲ್ಲಿ ಯಾವುದೇ ದೇಶದ ಸರ್ಕಾರಗಳು ನಡೆದುಕೊಳ್ಳಬಾರದಷ್ಟು ಹೀನಾತಿಹೀನ ರೀತಿಯಲ್ಲಿ ರಾಜ್ಯದ ಆಪರೇಷನ್ ಕಮಲ ಸರ್ಕಾರ ನಡೆದುಕೊಳ್ಳುತ್ತಿರುವುದು ಜನರಲ್ಲಿ ಆಕ್ರೋಶಕ್ಕೆ ಸೃಷ್ಟಿಸಿದೆ.

Advertisement
Advertisement
Recent Posts
Advertisement