ಶಿವಮೊಗ್ಗ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕಚೇರಿಗೆ ಪೋಲಿಸ್ ದಾಳಿ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕಚೇರಿಗೆ ಪೋಲಿಸ್ ದಾಳಿ ಖಂಡಿಸಿ ಪ್ರತಿಭಟನೆ
Advertisement
ನವದೆಹಲಿಯಲ್ಲಿ ಕೊರೊನಾ ಪೀಡಿತರಿಗೆ ಗಳಿಗೆ ಔಷಧ ಪೂರೈಕೆ, ಆಮ್ಲಜನಕದ ವ್ಯವಸ್ಥೆ ಹಾಗೂ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಬಿ.ವಿ ಅವರ ಕಚೇರಿಯ ಮೇಲೆ ದಾಳಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಆದೇಶ ಮೇರೆಗೆ ದೆಹಲಿ ಪೊಲೀಸ್ ಮೂಲಕ ತನಿಖೆ ನಡೆಸುತ್ತಿರುವುದನ್ನು ಖಂಡಿಸಿ
ಇಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಎಚ್ ಎಸ್ ಸುಂದರೇಶ್ ,ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ,ಮಾಜಿ ಸೂಡ ಅಧ್ಯಕ್ಷರಾದ ಎನ್ ರಮೇಶ್ , ನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್.ಕೆ ,ಯುವ ಕಾಂಗ್ರೆಸ್ ಮುಖಂಡ ಸಿ ಜಿ ಮಧುಸೂದನ್ ,ಅಲ್ಪಸಂಖ್ಯಾತ ಕಾಂಗ್ರೆಸ್ ನ ನಗರ ಅಧ್ಯಕ್ಷರಾದ ಮುಹಮ್ಮದ್ ನಿಯಾಲ್ ,ಯುವ ಮುಖಂಡ ಮುಜೀಬ್ ,ಯುವ ಕಾಂಗ್ರೆಸ್ ಉತ್ತರ ಬ್ಲ್ಯಾಕ್ ಉಪಾಧ್ಯಕ್ಷ ಗಿರೀಶ್ ,NSUI ನ ವಿಜಯ್ ,ಚಂದ್ರೋಜಿ ,ಅಬ್ದುಲ್ಲ ಹಾಗೂ ಸಾಕಷ್ಟು ಕಾರ್ಯಕರ್ತರು ಭಾಗವಹಿಸಿ ಕೇಂದ್ರದ ಆಕ್ರಮಣಕಾರಿ ನೀತಿಯನ್ನು ಖಂಡಿಸಿದರು.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.