Advertisement

ಈ ದೇಶದ ಐಕ್ಯತೆ ಒಡೆಯದಿರಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಐ.ಟಿ ಸೆಲ್ ಮಾಜಿ ಅಧ್ಯಕ್ಷ ನಿರಂಜನ್ ರಾವ್ ಆಕ್ರೋಶ!

Advertisement

'ಈ ದೇಶದ ಸಂವಿಧಾನದ ಪ್ರಕಾರ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ. ಒಂದು ಜಾತಿ, ಒಂದು ಧರ್ಮ ಅಥವಾ ಒಂದು ಕೋಮು ಎಂದು ವಿಂಗಡಿಸಬೇಡಿ. ಭಾರತ ಎಂದರೆ ಐಕ್ಯತೆ. ನಾವೆಲ್ಲರೂ ಭಾರತೀಯರು ಎಂಬುವುದನ್ನು ಅರಿತುಕೊಳ್ಳಿ. ನೀವೋರ್ವ ಸಂಸದರಾಗಿ ಬಿಬಿಎಂಪಿ ಯನ್ನು ಪ್ರಶ್ನಿಸುವ ಬದಲು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಹೊರಗುತ್ತಿಗೆ ಕೊಡುವಾಗ ಉತ್ಕೃಷ್ಟ ಮಟ್ಟದ ಸಾಫ್ಟ್‌ವೇರ್ ಕಂಪೆನಿಗೆ ನೀಡಬೇಕಾಗಿತ್ತು. ಅದರ ಬದಲಿಗೆ ಹಗರಣದ ಹೆಸರಿನಲ್ಲಿ ಒಂದು ಧರ್ಮದ ನೌಕರರನ್ನು ಗುರಿಪಡಿಸುವುದು ಸರಿಯಲ್ಲ. ಕೊರೊನಾ ಕೈಮೀರಿರುವ ಈ ಸಮಯದಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿಯ ವೈಧ್ಯರು, ನರ್ಸ್‌ಗಳು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕೊರೊನಾ ನಿಯಂತ್ರಣ ಸಾಧ್ಯ. ಆ ಕಾರಣಕ್ಕಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ದೇಶದ ಐಕ್ಯತೆ ಒಡೆಯದೆ ಮುನುಷತ್ವದ ಸಿದ್ದಾಂತದಡಿಯಲ್ಲಿ ಒಗ್ಗೂಡಿ ಕೊರೊನಾವನ್ನು ಬಗ್ಗು ಬಡಿಯೋಣ ಇದು ನನ್ನ ವಿಜ್ಞಾಪನೆ ಎಂದು ಕಾಂಗ್ರೆಸ್ ಐ.ಟಿ ಸೆಲ್ ಮಾಜಿ ರಾಜ್ಯಾಧ್ಯಕ್ಷ ಪಿ.ಎಸ್ ನಿರಂಜನ್ ರಾವ್ ಹೇಳಿದ್ದಾರೆ. ಈ ಕುರಿತು ವಿಡಿಯೋಗಾಗಿ ಈ ಕೆಳಗಿನ ಕನ್ನಡ ಮೀಡಿಯಾ ಡಾಟ್ ಕಾಮ್ ಯೂಟ್ಯೂಬ್ ಚಾನಲ್ ಲಿಂಕ್ ಕ್ಲಿಕ್ ಮಾಡಿ ಮತ್ತು ಚಾನಲ್ ಸಬ್ಸ್‌ಕ್ರೈಬ್ ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement