ಭಾರತದಲ್ಲಿ ಕೊರೊನಾ ವೈರಸ್‌ನ ಹೊಸತಳಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆತಂಕಗೊಂಡಿರುವ ಯು.ಕೆ., ತನ್ನ 50 ವರ್ಷ ಮೇಲ್ಪಟ್ಟ, ದುರ್ಬಲ ದೈಹಿಕಶಕ್ತಿ ಹೊಂದಿರುವ ನಾಗರಿಕರಿಗೆ ಲಸಿಕೆಯ 2ನೇ ಡೋಸ್ ನೀಡುವ ಅಂತರವನ್ನು 12ವಾರದಿಂದ 8 ವಾರಕ್ಕೆ ಇಳಿಸಿದೆ.
ಹಾಗೆಯೇ, ಭಾರತದಲ್ಲಿ ಅದೇ ವೈರಸ್‌ನ ಎರಡನೆಯ ಅಲೆಯ ವಿರುದ್ಧ ವ್ಯಾಕ್ಸಿನ್ ಆರಂಬಿಸಿದ ಮೊದಲಿಗೆ, ಮೊದಲ ಡೋಸ್ ಪಡೆದ 4ವಾರಗಳಲ್ಲಿ ಕಡ್ಡಾಯವಾಗಿ ಎರಡನೆಯ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಆದರೀಗ ವ್ಯಾಕ್ಸಿನ್ ಶಾರ್ಟೇಜ್‌ನ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ, ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಡಾ. ಅಶ್ವಥ್ ನಾರಾಯಣ್ ಕೋವಿಶಿಲ್ಡ್ ಮೊದಲ ಡೋಸ್ ಪಡೆದು 12ವಾರಗಳ ನಂತರವಷ್ಟೇ ಎರಡನೆಯ ಡೋಸ್ ಹಾಗೂ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 6ವಾರಗಳ ಬಳಿಕವಷ್ಟೆ ಎರಡನೆಯ ಡೋಸ್ ಎಂದು ಘೋಷಿಸಿದ್ದಾರೆ.
ಇದು ವೈಜ್ಞಾನಿಕವೇ ಎಂದು ಕನ್ನಡ ಮೀಡಿಯಾ ಡಾಟ್ ಕಾಮ್ ನ ಈ ವರದಿಗಾರ ತಜ್ಞ ವೈದ್ಯರೋರ್ವರಲ್ಲಿ ಕೇಳಿದಾಗ ಅವರು 'ವ್ಯಾಕ್ಸಿನ್ ಪೂರೈಸಲಾಗದಾಗ, ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಎರಡನೆಯ ಡೋಸ್ ಅಗತ್ಯವೇ ಇಲ್ಲ ಎಂದು ಕೂಡ ನಮ್ಮ ಸರ್ಕಾರ ಹೇಳಿದರೂ ಆಶ್ಚರ್ಯಪಡಬೇಕಿಲ್ಲ' ಎಂದು ವಿಷಾದದಿಂದ ಹೇಳಿದ್ದಾರೆ.