ಕೋವಿಡ್ -19 ಲಸಿಕೆ ನೀಡಿಕೆ ಅಭಿಯಾನದ ಎರಡನೇ ಹಂತವು ಈಗಾಗಲೇ ಭಾರತದಲ್ಲಿ ಪ್ರಾರಂಭವಾಗಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳು ಪರಸ್ಪರ ಭಿನ್ನವಾಗಿವೆ ಎಂಬುದರ ಕುರಿತ ವಿವರಗಳು ಅನೇಕ ಜನರಿಗೆ ಇನ್ನೂ ತಿಳಿದಿಲ್ಲ. ಎರಡನೇ ಹಂತವು ಮಾರ್ಚ್ 1 ರಂದು ಪ್ರಾರಂಭವಾಯಿತು. ಪ್ರಸ್ತುತ, ಜನರು ಯಾವ ಲಸಿಕೆ ಪಡೆಯಬೇಕೆಂದು ನಿರ್ಧರಿಸಲು ಸರ್ಕಾರ ಅನುಮತಿಸಿಲ್ಲ. ಆದರೆ ಮೊದಲ ಹಂತದ ಫಲಿತಾಂಶವು ಕೆಲವೊಂದು ಅಲರ್ಜಿಗೆ ಸಂಬಂಧಿಸಿದ ಘಟನೆಗಳ ಹೊರತಾಗಿಯೂ ಭಾರತದಲ್ಲಿ ಚುಚ್ಚುಮದ್ದಿನ ಎರಡೂ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಈ ಎರಡೂ ಲಸಿಕೆಗಳ ನಡುವಿನ ಕೆಲವು ಮೂಲಭೂತ ಸಂಗತಿಗಳು, ಹಾಗು ಭಿನ್ನತೆಗಳ ಕುರಿತು ಉತ್ತಮವಾದ ತಿಳುವಳಿಕೆಯನ್ನು ನೀಡಲು ನಾನು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಇಲ್ಲಿ ಓದುಗರಿಗೆ ನೀಡುತ್ತಿದ್ದೇನೆ. ಕೊರೋನ ವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ನೀವು ಪಡೆಯಲಿರುವ ಲಸಿಕೆಯ ಬಗ್ಗೆ ಒಂದಷ್ಟು ವಿವರಗಳು ಇಲ್ಲಿವೆ ನೋಡಿ.
ಲಸಿಕೆ ಅಭಿವ್ರದ್ಧಿ ಪಡಿಸಿದವರು:
ಕೋವಾಕ್ಸಿನ್ ಹೆಸರಿನ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪನಿಯು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಎನ್ನುವ ಬಹುರಾಷ್ಟ್ರೀಯ ಕಂಪನಿ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಉತ್ಪಾದಿಸುತ್ತಿದೆ.
ಲಸಿಕೆಗಳ ಪ್ರಕಾರ:
ಕೊವಾಕ್ಸಿನ್ ಒಂದು ನಿಷ್ಕ್ರಿಯಗೊಳಿಸಲಾದ ಲಸಿಕೆ (ಇನ್ಯಾಕ್ಟಿವೇಟೆಡ್ ವ್ಯಾಕ್ಸಿನ್)ˌ ಇದನ್ನು ಸತ್ತ ವೈರಸ್‌ಗಳನ್ನುಪಯೋಗಿಸಿ ತಯ್ಯಾರಿಸಿಲಾಗಿದೆ. ಈ ಲಸಿಕೆಯನ್ನು ಹೋಲ್-ವಿರಿಯನ್ ನಿಷ್ಕ್ರಿಯಗೊಳಿಸಿದ ವೆರೋ ಸೆಲ್-ಡಿರೈವ್ಡ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಅವು ನಿಷ್ಕ್ರಿಯಗೊಂಡ ವೈರಸ್‌ಗಳನ್ನು ಒಳಗೊಂಡಿರುತ್ತವೆˌ ಮತ್ತು ಆ ನಿಷ್ಕ್ರೀಯಗೊಳಿಸಿದ ವೈರಾಣು ಲಸಿಕೆ ಪಡೆಯುವ ವ್ಯಕ್ತಿಗೆ ಸೋಂಕು ತಗುಲಿಸುವುದಿಲ್ಲ ಆದರೆ ಸಕ್ರೀಯ ವೈರಸ್‌ನ ವಿರುದ್ಧ ರಕ್ಷಣಾ ಕಾರ್ಯವಿಧಾನವನ್ನು ಸಿದ್ಧಪಡಿಸಿ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಕಲ್ಪಿಸುತ್ತದೆ.
ಈ ಸಾಂಪ್ರದಾಯಿಕ ಲಸಿಕೆಗಳು ಹಲವಾರು ದಶಕಗಳಿಂದ ಬಳಕೆಯಲ್ಲಿವೆ. ಇತರ ಹಲವು ಸಾಂಕ್ರಮಿಕ ರೋಗಗಳ ಲಸಿಕೆಗಳು ಕೂಡ ಇದೇ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ. ಇದೇ ತಂತ್ರಜ್ಞಾನದಲ್ಲಿ ತಯ್ಯಾರಿಸಿ ಬಳಕೆಯಲ್ಲಿರುವ ಲಸಿಕೆಗಳನ್ನು ಸೀಜನಲ್ ಇನ್ಫ್ಲುಯೆಂಜಾ, ರೇಬೀಸ್, ಪೋಲಿಯೊ, ಪೆರ್ಟುಸಿಸ್, ಮತ್ತು
ಜಪಾನೀಸ್ ಎನ್ಸೆಫಾಲಿಟಿಸ್ ರೋಗಗಳ ತಡೆಯುವಿಕೆಗೆ ಬಳಸಲಾಗುತ್ತಿದೆ.
ಆದರೆ, ಕೋವಿಶೀಲ್ಡ್ ಎನ್ನುವ ಲಸಿಕೆಯು ವೈರಲ್ ವೆಕ್ಟರ್ ಪ್ಲಾಟ್‌ಫಾರ್ಮ್ ಬಳಸಿ ತಯಾರಿಸಲಾಗಿದೆ, ಇದು ಸಂಪೂರ್ಣವಾಗಿ ವಿಭಿನ್ನ ತಂತ್ರಜ್ಞಾನವಾಗಿದೆ.
ಚಿಂಪಾಂಜಿ ಅಡೆನೊವೈರಸ್ - ChAdOx1 ಅನ್ನು ಕೋವಿಡ್-19 ಸ್ಪೈಕ್ ಪ್ರೋಟೀನ್‌ನ್ನು ಮಾನವರ ಜೀವಕೋಶಗಳಿಗೆ ಸಾಗಿಸಲು ಅನುವು ಮಾಡಿಕೊಡುವಂತೆ ಪರಿವರ್ತಿಸಲಾಗಿದೆ. ತಂತ್ರಜ್ಞಾನ ಬಳಸಿ ತಯ್ಯಾರಿಸಲಾದ ಲಸಿಕೆಯಲ್ಲಿರುವ ಕೋಲ್ಡ್ ವೈರಸ್ ಮೂಲತಃ ಲಸಿಕೆ ಪಡೆಯುವವರಿಗೆ ಸೋಂಕು ತಗುಲಿಸುವುದಿಲ್ಲ. ಆದರೆ ಸಕ್ರೀಯ ವೈರಸ್‌ಗಳ ವಿರುದ್ಧ ಯಾಂತ್ರಿಕ ವ್ಯವಸ್ಥೆಯನ್ನು ಸಿದ್ಧಪಡಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಚೆನ್ನಾಗಿ ಕಲ್ಪಿಸುತ್ತದೆ. ಎಬೋಲಾ ವೈರಸ್‌ಗಳ ಲಸಿಕೆ ತಯಾರಿಸಲು ಬಳಸುವ ನಿಖರ ತಂತ್ರಜ್ಞಾನವನ್ನೇ ಇಲ್ಲೂ ಬಳಸಲಾಗಿದೆ.
ಡೋಜ್ ವಿವರ:
ಡೋಸೇಜ್ ವಿಷಯದಲ್ಲಿ ಎರಡು ಲಸಿಕೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಲಸಿಕೆಗಳು ಎರಡು-ಡೋಸ್ ಕಟ್ಟುಪಾಡುಗಳನ್ನು ಅನುಸರಿಸುತ್ತಾರೆ, ಇದನ್ನು 28 ದಿನಗಳ ಅಂತರದಲ್ಲಿ ನಿರ್ವಹಿಸಲಾಗುತ್ತದೆ.
ಶೇಖರಣಾ ಮಾರ್ಗಸೂಚಿಗಳು
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡನ್ನೂ 2-8 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಸಂಗ್ರಹಿಸಬಹುದು. ಅಂದರೆ, ಇವೆರಡೂ ಲಸಿಕೆಗಳನ್ನು ಮನೆಯ ರೆಫ್ರಿಜರೇಟರ್ ತಾಪಮಾನದಲ್ಲಿ ಶೇಖರಿಸಿಡಬಹುದು. ಹಾಗಾಗಿ ಶೇಖರಣಾ ಮಾನದಂಡವು ಭಾರತೀಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಇಲ್ಲಿ ಹೆಚ್ಚಿನ ಲಸಿಕೆಗಳನ್ನು ಇದೇ ತಾಪಮಾನದ ವ್ಯಾಪ್ತಿಯಲ್ಲಿ ಇಡಲಾಗುತ್ತದೆ. ಈ ಶೇಖರಣಾ ಮಾನದಂಡವು ಎರಡೂ ಲಸಿಕೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಣೆ ಮಾಡಲು ಮತ್ತು ಅವುಗಳ ಸಂಗ್ರಹಣೆಯನ್ನು ಸುಲಭಗೊಳಿಸುತ್ತದೆ.
ಲಸಿಕೆಯ ಕಾರ್ಯಕಾರಿತ್ವ
ಭಾರತದಲ್ಲಿ ಇನಾಕ್ಯುಲೇಷನ್ ಪ್ರಾರಂಭವಾದಾಗಿನಿಂದ ಎರಡೂ ಲಸಿಕೆಗಳು ತೃಪ್ತಿದಾಯಕ ಫಲಿತಾಂಶಗಳನ್ನು ನೀಡಿವೆ.
ಜಾಗತಿಕ ವರದಿಗಳ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿತ್ವವು ಸುಮಾರು 90% ಇದೆ. ಮಧ್ಯಂತರ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಯೋಗ ಫಲಿತಾಂಶಗಳ ಪ್ರಕಾರ ಕೊವಾಕ್ಸಿನ್‌ನ ಪರಿಣಾಮಕಾರಿತ್ವವು 81% ಆಗಿದೆ.
ಕೋವಿಸಿಡ್ ಲಸಿಕೆಯ ಅಪ್ಡೇಟ್ಸ್
ಭಾರತದಲ್ಲಿ ಇದುವರೆಗೆ 152 ಮಿಲಿಯನ್ ಡೋಸ್ ಕೋವಿಸಿಡ್ ಲಸಿಕೆಗಳನ್ನು ನೀಡಲಾಗಿದೆ. 17 ದಶಲಕ್ಷಕ್ಕೂ ಹೆಚ್ಚು ಜನರು ಈ ಲಸಿಕೆಯ ಎರಡು ಡೋಜಗಳನ್ನು ಪಡೆದಿದ್ದಾರೆ ಮತ್ತು ಈ ಪ್ರಕ್ರೀಯೆಯನ್ನು ಸಂಪೂರ್ಣವಾಗಿ ಲಸಿಕೀಕರಣ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ಉನ್ನತ ಆರೋಗ್ಯ ಅಧಿಕಾರಿಗಳು ಈ ಎರಡೂ ಲಸಿಕೆಗಳು ರೂಪಾಂತರಗೊಂಡ ಯುಕೆ / ದಕ್ಷಿಣ ಆಫ್ರಿಕಾ / ಬ್ರೆಜಿಲ್ ಕೊರೋನ ವೈರಾಣುವಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ತಿಳಿಸಿದ್ದಾರೆ.
ಸ್ಪುಟ್ನಿಕ್-ವಿ ಲಸಿಕೆಯನ್ನು ಉಪಯೋಗಿಸಲು ಭಾರತದಲ್ಲಿ ತುರ್ತು ಬಳಕೆಯ ಅಧಿಕಾರ ನೀಡಲಾಗಿದೆ. ರಷ್ಯಾ ಮೂಲದ ಈ ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡಿ ಲ್ಯಾಬ್ ನಲ್ಲಿ ಉತ್ಪಾದಿಸಲಾಗುತ್ತಿದೆ. ಇತ್ತೀಚಿನ ಅಧ್ಯಯನವು ಸ್ಪುಟ್ನಿಕ್-ವಿ ಲಸಿಕೆ ಯಾವುದೇ ಬಲವಾದ ಅಲರ್ಜಿಯನ್ನು ಹೊಂದಿಲ್ಲ ಎಂದು ಹೇಳುತ್ತವೆ. ಭಾರತವು ಪ್ರತಿವರ್ಷ 850 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸುತ್ತದೆ.
ಪರಿಣಾಮಕಾರಿತ್ವದ ದೃಷ್ಟಿಯಿಂದ, ಕೋವಿಶೀಲ್ಡ್ನ ಸುಮಾರು 90% (ಜಾಗತಿಕ ವರದಿಗಳು) ಮತ್ತು ಕೊವಾಕ್ಸಿನ್‌ನ 81% (ಮಧ್ಯಂತರ 3 ನೇ ಹಂತದ ಪ್ರಯೋಗ ಫಲಿತಾಂಶಗಳು)ಗೆ ಹೋಲಿಸಿದರೆ ಸ್ಪುಟ್ನಿಕ್-ವಿ 91.6% ಪರಿಣಾಮಕಾರಿತ್ವವನ್ನು ಹೊಂದಿದೆ.
ಭಾರತ್ ಬಯೋಟೆಕ್ ಕಂಪನಿಯು ಕೋವಾಕ್ಸಿನ್ ಉತ್ಪಾದನೆಯನ್ನು ತಿಂಗಳಿಗೆ 12 ಮಿಲಿಯನ್ ಡೋಸ್‌ಗೆ ಹೆಚ್ಚಿಸಿಕೊಂಡಿದೆ.
ಕರೋನ ವೈರಸ್ ವಿರುದ್ಧ ಭಾರತದಲ್ಲಿ ಮೂರನೇ ಹಂತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಕೊಡಲು ಯೋಜಿಸಿದ್ದು, ಈ ತಿಂಗಳು ಅವು ಭಾರತವನ್ನು ತಲುಪಲಿವೆ. ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದನೆಯ ಪ್ರಮಾಣ ಕ್ರಮೇಣ ಹೆಚ್ಚಾಗಲಿದೆ ಮತ್ತು ತಿಂಗಳಿಗೆ 50 ಮಿಲಿಯನ್ ಪ್ರಮಾಣ ಮೀರಬಹುದು.
ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಾಕ್ಸಿನ್, ಮತ್ತು ಕೋವಿಶೀಲ್ಡ್ (ಮತ್ತು ಸ್ಪುಟ್ನಿಕ್ ವಿ ಬಂದಾಗ ಅದು) ಬಳಸ ಬಹುದಾಗಿದೆ.
3 ನೇ ಹಂತದ ವ್ಯಾಕ್ಸಿನೇಷನ್ ಪ್ರಾರಂಭವಾದಾಗ, ಲಸಿಕೆಗಳನ್ನು ರಾಜ್ಯ ಸರ್ಕಾರಗಳು ನೇರವಾಗಿ ಉತ್ಪಾದಕರಿಂದ ಖರೀದಿಸಬಹುದಾಗಿದೆ.
ಎಲ್ಲಾ ಲಸಿಕೆ ಉತ್ಪಾದಕರು ತಮ್ಮ ಲಸಿಕೆ ಉತ್ಪಾನ್ನದ 50% ಅನ್ನು ಮುಕ್ತ ಮಾರುಕಟ್ಟೆಯ ಮೂಲಕ ರಾಜ್ಯಗಳಿಗೆ ಮಾರಾಟ ಮಾಡಬೇಕು. ಉಳಿದ 50% ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ.
ಈಗ ಎಲ್ಲಾ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ, ಲಸಿಕೆ ತಯಾರಕರು ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಲಸಿಕೆಯ ಪ್ರತಿ ಡೋಸ್‌ನ ಬೆಲೆಯನ್ನು ಸಹ ನಿರ್ಧರಿಸಲು ಸಾಧ್ಯವಾಗುತ್ತದೆ.
ಕೋವಾಕ್ಸಿನ್ ಅಥವಾ ಕೋವಿಶೈಲ್ಡ್ನ ಎರಡು ಡೋಸ್ಗಳು ಪಡೆದ ನಂತರ ಸೋಂಕಿನ ಅಪಾಯವೂ ಕಡಿಮೆಯಾಗಲಿದೆ.
ಎಡಡೂ ಲಸಿಕೆಗಳ ಕುರಿತು ಗೊಂದಲ ಬೇಡ
ಕೋವಿಡ್ ಲಸಿಕೆ ಹಾಕಿಸಿಕೊಂಡರೆ ರೋಗನಿರೋಧಕ ಶಕ್ತಿ ಗಣನೀಯವಾಗಿ ವೃದ್ಧಿಸುತ್ತದೆ. ವೈರಾಣು ಸೋಂಕಿನಿಂದ ರಕ್ಷಣೆಯ ಜೊತೆಗೆ ಸೋಂಕು ಸಾಂಕ್ರಮಿಕಗೊಳ್ಳುವುದನ್ನು ತಡೆಯಬಹುದು. ಎರಡೂ ಡೋಜ್ ಪಡೆದರಷ್ಟೆ ಲಸಿಕೆಯ ಪರಿಣಾಮಕಾರಿತ್ವ ಹೆಚ್ಚುತ್ತದೆ. ನಾನು ಮೇಲೆ ಹೇಳಿದಂತೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳು ಒಂದೇ ಆಗಿದ್ದು ಕಂಪನಿ ಮಾತ್ರ ಬೇರೆ ಬೇರೆ ಆಗಿವೆ. ಈ ಎರಡೂ ಲಸಿಕೆಗಳು ಬೀರುವ ಪರಿಣಾಮ ಮಾತ್ರ ಒಂದೇ ಆಗಿದೆ. ಯಾವ ಲಸಿಕೆ ತೆಗೆದುಕೊಳ್ಳಬೇಕು ಎಂಬ ಗೊಂದಲ ಬೇಡ.
ಲಸಿಕೆ ಪಡೆದರೆ ಸೋಂಕು ಬರುವುದಿಲ್ಲವೆ?
ಕೋವಿಡ್ ಲಸಿಕೆ ಪಡೆದರೆ ಸೋಂಕು ತಗಲಿದರೂ ಕೂಡ ಅದರ ತೀವ್ರತೆ ಕಡಿಮೆ ಇರುತ್ತದೆ. ಲಸಿಕೆ ಪಡೆದ ಮೇಲೂ ಕೂಡ ಒಂದು ವರ್ಷದ ಅವಧಿಗೆ ಕೋವಿಡ್ ತಡೆಯುವ ಮಾನದಂಡಗಳಾದ ಮುಖಗವಸು ಧಾರಣೆ(ಮಾಸ್ಕ), ಕೈ ತೊಳೆಯುವುದು ಮುಂತಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ಹಾಕಿಸಿಕೊಳ್ಳುವಾಗ ಮೊದಲ ಡೋಜ್ ಕೋವ್ಯಾಕ್ಸಿನ್ ಪಡೆದಿದ್ದರೆ ಎರಡನೇ ಡೋಜ್ ಕೂಡ ಕೋವ್ಯಾಕ್ಸಿನ್ ಲಸಿಕೆಯೇ ತಗೆದುಕೊಳ್ಳಬೇಕು. ಮೊದಲು ಕೋವಿಸಿಡ್ ತಗೊಂಡಿದ್ದರೆ ಎರಡನೇ ಡೋಜ್ ಕೂಡ ಕೋವಿಶೀಲ್ಡ್ ಲಸಿಕೆಯೇ ಪಡೆಯಬೇಕು.
ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ. 1.03 ಜನರಿಗೆˌ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಶೇ.1.04 ಜನರಿಗೆ ಸೋಂಕು ತಗುಲಿದ ವರದಿ ಆಗಿವೆ. ಇನ್ನು ಎರಡೂ ಲಸಿಕೆ ಪಡೆದ ನಂತರವೂ ಸೋಂಕು ತಗುಲಿ ಯಾರೊಬ್ಬರೂ ಈವರೆಗೆ ಮೃತಪಟ್ಟಿ ವರದಿ ಆಗಿಲ್ಲ.
ಕೊನೆಯ ಮಾತು:
ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಈ ಮಾಹಿತಿಯು ಆರೋಗ್ಯ ವೃತ್ತಿಪರರು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸುವ ಉದ್ದೇಶದಿಂದಲ್ಲ. ವ್ಯಕ್ತಿಯ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಈ ಮಾಹಿತಿಯ ಸೂಕ್ತತೆಯನ್ನು ನಿರ್ಧರಿಸಲು ಓದುಗರು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com
ಇದನ್ನೂ ಓದಿ:
BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?