Advertisement

ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?

Advertisement

ಸೋನಿಯಾ ಗಾಂಧಿಯವರು ಪುಸ್ತಕಗಳ ಸೆಲ್ಪ್ ಒಂದರ ಮುಂದೆ ನಿಂತು ಮಾತನಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಆ ಪೋಟೋದ ಕೆಳಗೆ 'ಸೋನಿಯಾರ ಹಿಂಬದಿ, ಬಲಗಡೆಯಲ್ಲಿರುವ ಪುಸ್ತಕವನ್ನು ಝೂಮ್ ಮಾಡಿ ನೋಡಿ' ಎಂದು ಬರೆಯಲಾಗಿದೆ. ಜೊತೆಗೆ ಅಲ್ಲೊಂದು ಪುಸ್ತಕದ ಸುತ್ತ ವೃತ್ತವೊಂದನ್ನು ಎಳೆಯಲಾಗಿದೆ ಮತ್ತು ಆ ಪುಸ್ತಕದ ಮೇಲೆ “How to Convert India into Christian nation" (ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ) ಎಂದು ಮುದ್ರಿಸಲ್ಪಟ್ಟಿದೆ. ಹಾಗಾದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಮನೆಯ ಪುಸ್ತಕಗಳ ಸಂಗ್ರಹ ಹೊಂದಿದ ಕಪಾಟಿನಲ್ಲಿ ಮತಾಂತರದ ಪರವಾದ ಪುಸ್ತಕ ಹೊಂದಿದ್ದಾರೆಯೇ? ಆ ಕುರಿತು ಹಲವು ವರದಿಗಳನ್ನು ತಡಕಾಡಿದಾಗ ಅದೊಂದು 'ತಿರುಚಿದ ಫೋಟೋ' ಎಂಬುವುದು ಮತ್ತು ಅದು ಕಾಂಗ್ರೆಸ್ ಪಕ್ಷದ ಕುರಿತು ಅಪಪ್ರಚಾರ ಮಾಡಲೋಸುಗ ಸೋನಿಯಾರ ಫೋಟೋವೊಂದನ್ನು ಎಡಿಟ್ ಮಾಡಿ, ವೈರಲ್ ಮಾಡಲಾಗಿದೆ ಎಂಬುದು ಸಾಭೀತಾಗಿದೆ. ಬಹುಶಃ ಬಿಜೆಪಿ ಐಟಿ ಸೆಲ್ ಇಂತಹ ಕೆಳಮಟ್ಟದ ಅಪಪ್ರಚಾರಗಳನ್ನು ಬಹು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಅದರ ಮುಂದುವರಿದ ಭಾಗವೇ ಈ ಮತಾಂತರದ ಪುಸ್ತಕದ ಕವರ್ ಪೇಜ್ ಎಡಿಟ್! ಇತ್ತೀಚೆಗಷ್ಟೇ ಟೂಲ್‌ಕಿಟ್ ಹೆಸರಲ್ಲಿ ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್ ನಕಲಿ ಮಾಡಿ ದೇಶ ವಿರೋಧಿ ಅಂಶ ಮುದ್ರಿಸಿ ವೈರಲ್ ಮಾಡಲಾಗಿತ್ತು. ಆ ಕುರಿತು ಕಾಂಗ್ರೆಸ್ ಪಕ್ಷ, ಬಿಜೆಪಿಯ ವಿರುದ್ಧ ದೂರನ್ನು ಕೂಡ ದಾಖಲಿಸಿದೆ. ಮೂಲ ವಿಷಯಕ್ಕೆ ಬರುವುದಾದರೆ, ಸೋನಿಯಾ ಗಾಂಧಿಯವರ ಹಿಂಬದಿಯ ಪುಸ್ತಕದ ಕಪಾಟಿನಲ್ಲಿ ಇರುವುದು ನಿಜಕ್ಕೂ ಯಾವ ಪುಸ್ತಕ ಗೊತ್ತೇ? ಸೋನಿಯಾ ಗಾಂಧಿಯವರ ಈ ಒರಿಜಿನಲ್ ವಿಡಿಯೋ ಮತ್ತದರ ಫೋಟೋ ಪರಿಶೀಲಿಸಿದಾಗ ಕಪಾಟಿನಲ್ಲಿ ವೈರಲ್ ಆದ ಫೋಟೋದಲ್ಲಿ ಇದ್ದಂತಹ ಯಾವುದೇ ಪುಸ್ತಕ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಮತ್ತು ಅಲ್ಲಿ ವೃತ್ತ ಹಾಕಿದ ಜಾಗದಲ್ಲಿ ನಿಜಕ್ಕೂ ಇರುವುದು 'ಬೈಬಲ್' ಪುಸ್ತಕವಾಗಿದೆ ಎಂಬ ಸತ್ಯಾಂಶ ಬಹಿರಂಗಗೊಂಡಿದೆ. ಜನಮಾನಸ ಸೆಳೆಯಲು ಅಥವಾ ಎದೆ ತಟ್ಟಿ ಹೇಳಿಕೊಳ್ಳಲು ತನ್ನ ಪಕ್ಷದ ಯಾವುದೇ ಮಹತ್ತರವಾದ ಯಾ ಜನಪರವಾದ ಸಾಧನೆಗಳು ಹೊಂದಿಲ್ಲದ ಬಿಜೆಪಿ ಪಕ್ಷದ ಐಟಿ ಸೆಲ್ 'ಕಾಂಗ್ರೆಸ್ ಕುರಿತು ಸುಳ್ಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಅಪಪ್ರಚಾರ ನಡೆಸುವುದೇ ತಮ್ಮ ಕೆಲಸ' ಎಂದುಕೊಂಡಿದೆ ಮತ್ತು ಪದೇ ಪದೇ ಇಂತಹ ಸುಳ್ಳುಗಳನ್ನು ಸೃಷ್ಟಿಸಿ ವೈರಲ್ ಮಾಡುತ್ತಲೆ ಬಂದಿದೆ. ಸುಳ್ಳು ಸುದ್ದಿಗಳನ್ನು ಹರಡಲೆಂದೆ ಅತ್ಯಂತ ಚುರುಗಿನ ವೈರಲ್ ಟೀಮ್ ಹೊಂದಿರುವ ಅದು ಕಾಂಗ್ರೆಸ್‌ನ ಗಮನಕ್ಕೆ ಈ ವಿಚಾರ ಬಂದು, ಆ ಕುರಿತು ಸಂಶೋಧನೆ ನಡೆಸಿ ಸತ್ಯ ಹೊರಬರುವ ಹೊತ್ತಿಗೆ ತಮ್ಮ ಕೆಲಸದಲ್ಲಿ ಅರ್ಧದಷ್ಟು ಯಶಸ್ಸನ್ನು ಆ ಟ್ರೋಲ್ ಟೀಮ್ ಪಡೆದಿರುತ್ತದೆ ಮತ್ತು ಅಷ್ಟರೊಳಗೆ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿಯನ್ನು ಎಸಗಿರುತ್ತದೆ. ಇದನ್ನು ಮನಗಂಡಿರುವ ಬಿಜೆಪಿ ಇಂತಹ ಚೀಪರ್ ಗಿಮಿಕ್ ಗಳನ್ನು ಮುಂದುವರೆಸಿದೆ. ಸೋನಿಯಾರ ಪುಸ್ತಕದ ಸೆಲ್ಪ್ ನಲ್ಲಿನ ಪುಸ್ತಕದ ಅಸಲಿಯತ್ತಿನ ಕುರಿತು ಸ್ವತಃ ತಿಳಿಯಲು ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಈ ಕೆಳಗಿನ ವಿಡಿಯೋ ನೋಡಿ. ಇದು ಬಿಹಾರ ಚುನಾವಣೆಯ ಕೇವಲ ಒಂದು ದಿನದ ಮೊದಲು ಅಂದರೆ 2020 ಅಕ್ಟೋಬರ್ 27 ರಂದು ಸೋನಿಯಾ ಗಾಂಧಿ ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೊ ಅಗಿದೆ. ಇಲ್ಲಿದೆ ನೋಡಿ, ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿದ ಫೋಟೋ ದ ಅಸಲಿ ವಿಡಿಯೋ: __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com

Advertisement
Advertisement
Recent Posts
Advertisement