ಬರಹ: ನವೀನ್ ಸೂರಿಂಜೆ (ಲೇಖಕರು ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ದೇವಸ್ಥಾನದಲ್ಲಿ ಅಂಗಿ ಬಿಚ್ಚುವುದು ಮತ್ತು ಅಂಗಿಯೊಳಗೆ ಜನಿವಾರ ಹಾಕುವಷ್ಟು ಬುರ್ಕಾ ಯಾವತ್ತೂ ಅಪಾಯಕಾರಿಯೂ, ಸಮಾನತೆಯ ವಿರೋಧಿಯೂ ಅಲ್ಲ. ಬುರ್ಕಾವನ್ನು ವಿನಾಕಾರಣ ಚರ್ಚೆಯ ವಸ್ತುವಾಗಿಸುವವರು ಒಂದೋ ಮುಸ್ಲಿಂ ಮೂಲಭೂತವಾದಿಯಾಗಿರುತ್ತಾರೆ ಅಥವಾ ಹಿಂದೂ ಕೋಮುವಾದಿಯಾಗಿರುತ್ತಾರೆ. ಇವೆರಡೂ ಅಲ್ಲದಿದ್ದರೆ ತಳಮಟ್ಟದ ವಾಸ್ತವ ರಾಜಕಾರಣ ತಿಳಿಯದ ಮುಗ್ದ ಸಮಾನತಾವಾದಿಯಾಗಿರುತ್ತಾರೆ. ಈ ಮೂವರೂ ಅಪಾಯಕಾರಿಗಳೇ. ಹೇಗೆ ಎನ್ನುವುದನ್ನು ಸಂದರ್ಭ ಸಹಿತ ವಿವರಿಸುತ್ತೇನೆ.
(ಸಾಂದರ್ಭಿಕ ಚಿತ್ರ) ಕೃಪೆ: ಗೂಗಲ್
2009 ಆಗಸ್ಟ್ 17 ನೇ ತಾರೀಕು. ಆಯಿಷಾ ಆಸ್ಮೀನ್ ಎಂಬ 19 ವರ್ಷದ ವಿದ್ಯಾರ್ಥಿನಿ ನಮ್ಮನ್ನು ಭೇಟಿಯಾದಳು. ನಾನು, ಸುದೀಪ್ತೋ ಮೊಂಡಲ್, ಸತ್ಯ, ಕೆ ಟಿ ವಿನೋಭ, ಶ್ರೀನಿಧಿ ಆಕೆಯ ಜೊತೆ ಮಾತನಾಡಿದ್ವಿ. ಆಕೆ ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಶ್ರೀ ವೆಂಕಟ್ರಮಣ ಸ್ವಾಮಿ (ಎಸ್‌ವಿಎಸ್) ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ. ಯಾವುದೇ ರೀತಿಯ ಬುರ್ಕಾ ಮತ್ತು ಸ್ಕಾರ್ಫ್ ಹಾಕಿಕೊಂಡು ಕಾಲೇಜೊಳಗೆ ಕುಳಿತುಕೊಳ್ಳಕೂಡದು ಎಂದು ಪ್ರಾಂಶುಪಾಲರು ಆದೇಶ ನೀಡಿದ್ದರಂತೆ. ಈ ಕಾರಣದಿಂದ ಕಳೆದ 10 ದಿನಗಳಿಂದ ಆಕೆ ಅತ್ಯುತ್ತಮಕಾಲೇಜಿಗೆ ಹೋಗಿಲ್ಲ ಮತ್ತು ಪರೀಕ್ಷೆಗೂ ಹಾಜರಾಗಿಲ್ಲ. ನಾನು ಕಾಲೇಜು ಸೇರಿದಾಗ, ಸಂದರ್ಶನ ಎದುರಿಸಿದಾಗ ಇಂತಹ ಯಾವ ನಿಯಮವನ್ನೂ ಹೇಳಲಾಗಿಲ್ಲ. ಕಾಲೇಜಿಗೆ ಡ್ರೆಸ್ ಕೋಡ್ ಕೂಡಾ ಇಲ್ಲ. ಯೂನಿಫಾರಂ ಇಲ್ಲದ ಕಾಲೇಜಲ್ಲಿ ಬುರ್ಕಾವೂ ಒಂದು ಉಡುಪಲ್ಲವೇ ? ನೀವು ಬುರ್ಕಾ ಹಾಕಿಕೊಂಡು ಬಂದರೆ ಹುಡುಗರು ನಾಳೆಯಿಂದ ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ. ಹಾಗಾಗಿ ಬುರ್ಕಾ ಹಾಕುವಂತಿಲ್ಲ ಎಂದು ಕಾಲೇಜು ಪ್ರಾಂಶುಪಾಲರು ಹೇಳಿದ್ದರಂತೆ.
ಎಲ್ಲಾ ವಿಷಯ ತಿಳಿದುಕೊಂಡ ನಾವುಗಳು ಆಗಸ್ಟ್ 18 ರಂದು ಬೆಳಿಗ್ಗೆ ಆಯಿಷಾಳನ್ನೂ ಜೊತೆ ಸೇರಿಸಿಕೊಂಡು ಎಸ್ ವಿ ಎಸ್ ಕಾಲೇಜಿಗೆ ಹೊರಟೆವು. ನಮ್ಮಲ್ಲಿ ಯಾರ ಬಳಿಯೂ ಕಾರು ಇರಲಿಲ್ಲ.(ಈಗಲೂ ಇಲ್ಲ). ಹಾಗಾಗಿ ನಮ್ಮ ಆತ್ಮೀಯ ಗೆಳೆಯನಾಗಿದ್ದ ಶಬ್ಬೀರ್ ಬಳಿ ಕಾರು ತೆಗೆದುಕೊಂಡೆವು. ಅದಕ್ಕೆ ಪೆಟ್ರೋಲ್ ಅನ್ನು ನಾವೇ ಹಾಕುತ್ತೇವೆ ಎಂಬ ಷರತ್ತಿನೊಂದಿಗೆ ಕಾರು ತೆಗೆದುಕೊಂಡು ಹೋದೆವು.(ನಾವು ಆಗ ಪತ್ರಿಕಾಗೋಷ್ಠಿಯಲ್ಲಿ ಟೀಯನ್ನೂ ಕುಡಿಯಬಾರದು ಎಂಬಷ್ಟರ ಮಟ್ಟಕ್ಕೆ ಸ್ವಯಂಘೋಷಿತ ಕ್ರಾಂತಿಕಾರಿಗಳಾಗಿದ್ದೆವು) ಆಕೆ ಈ ಹಿಂದೆ ತೊಕ್ಕೊಟ್ಟುವಿನ ಮಹಿಳಾ ಇಸ್ಲಾಮಿಕ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದರು. ಅದು ಕೇವಲ ಮುಸ್ಲಿಂ ವಿದ್ಯಾರ್ಥಿನಿಯರ ಕಾಲೇಜ್ ಆಗಿತ್ತು. ಎಲ್ಲಾ ಸಮುದಾಯದ ವಿದ್ಯಾರ್ಥಿಗಳ ಜೊತೆ ಬೆರೆತು ಶಿಕ್ಷಣ ಪಡೆಯುವುದು ಆಕೆಯ ಬಹುದಿನಗಳ ಆಸೆಯಾಗಿತ್ತು. ಅದು ಈಡೇರಿತು ಅಂತ ಹಲವು ತಿಂಗಳ ಕಾಲ ಸಂಭ್ರಮಪಟ್ಟಿದ್ದಳಂತೆ. ಅಷ್ಟರಲ್ಲಿ ಆಕೆಯ ಸಂಭ್ರಮವನ್ನು ಬುರ್ಕಾ ಕಸಿದಿತ್ತು. ನಾವು ಪತ್ರಕರ್ತರು ಪ್ರಾಂಶುಪಾಲರನ್ನು ಮತ್ತು ಕಾಲೇಜು ಆಡಳಿತ ಮಂಡಳಿಯನ್ನು ವರದಿಗಾಗಿ ಪ್ರಶ್ನಿಸುವ ಮೂಲಕವೇ ಪರೋಕ್ಷವಾಗಿ ತರಗತಿಗೆ ತೆಗೆದುಕೊಳ್ಳುವಂತೆ ಒತ್ತಡ ಹೇರಿದರೂ ಪ್ರಯೋಜನವಾಗಲಿಲ್ಲ.
ಮರುದಿನ ಅಂದರೆ 2009 ಅಗಸ್ಟ್ 19 ರಂದು ನಾವು ಪ್ರತಿನಿಧಿಸುವ ಪತ್ರಿಕೆ, ವಾಹಿನಿಯಲ್ಲಿ ಪ್ರಮುಖ ಸುದ್ದಿಯಾಗಿ ಪ್ರಸಾರವಾಯಿತು. ಡೆಕ್ಕನ್ ಹೆರಾಲ್ಡ್ ಪತ್ರಿಕೆ "College bans Muslim headscarf" ಎಂದು ಹೆಡ್ಲೈನ್ ನೀಡಿ ಮೊದಲ ಪುಟದಲ್ಲಿ ಪ್ರಕಟಿಸಿತು. ಬಹುಶಃ ಇದು ದೇಶದ ಮೊದಲ ಬುರ್ಕಾ ನಿಷೇಧದ ಸುದ್ದಿಯಾಗಿತ್ತು. ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಿಂದ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ತಮ್ಮ ಓಬಿಗಳೊಂದಿಗೆ ಮಂಗಳೂರಿಗೆ ಬಂದಿದ್ದರು. ಈ ವರದಿಯನ್ನು ನಾವು ತಂಡವಾಗಿ ಮಾಡಿದ್ದು, ಆ ತಂಡದ ನೇತೃತ್ವವನ್ನು ನಾನು ವಹಿಸಿದ್ದೇನೆಂದೂ ಆಗಿನ ವಿಜಯ ಕರ್ನಾಟಕದಲ್ಲಿ ಪ್ರತಾಪ್ ಸಿಂಹರು ಪರೋಕ್ಷವಾಗಿ "ಕಿಡಿಗೇಡಿ ಪತ್ರಕರ್ತನ ಕಿತಾಪತಿ" ಎಂದು ಬೆತ್ತಲೆ ಜಗತ್ತಿನಲ್ಲಿ ಬರೆದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲೇ ಈ ವರದಿಯನ್ನು ಹೇಗೆ ತಂಡವಾಗಿ ಮಾಡಲಾಯಿತು, ಅದಕ್ಕಾಗಿ ಯಾರ ಕಾರನ್ನು ಬಳಸಲಾಯ್ತು, ಕಾರು ಮಾಲೀಕ ಯಾವ ಸಂಘಟನೆಗೆ ಸೇರಿದವನು ಎಂದು ನಮ್ಮನ್ನೇ ಟೀಕಿಸಿ ಫಾಲೋಅಪ್ ವರದಿಗಳನ್ನು ಮಾಡಲಾಯ್ತು. ಇದೆಲ್ಲಾ ಒತ್ತಟ್ಟಿಗಿರಲಿ.
ಪ್ರಗತಿಪರರು ಬುರ್ಕಾ ಪರವೂ ಅಲ್ಲ, ವಿರುದ್ದವೂ ಅಲ್ಲ. ಅದೊಂದು ಬಟ್ಟೆ ಅಷ್ಟೆ. ಅದನ್ನು ಹಾಕಲೇಬೇಕು ಅನ್ನೋದು, ತೆಗೆಯಲೇಬೇಕು ಎನ್ನುವುದನ್ನು ಎರಡನೇ ವ್ಯಕ್ತಿ ನಿರ್ಧರಿಸುವುದೇ ಅಸಂವಿಧಾನಿಕ ಎಂಬ ನಿಲುವು ಪ್ರಗತಿಪರರದ್ದು. ನಮ್ಮ ನಿಲುವೂ ಅದೇ ಆಗಿತ್ತು. ಇದರಲ್ಲೊಂದು ತೆಳ್ಳನೆಯ ಅತೀ ಸೂಕ್ಷ್ಮ ಗೆರೆ ಇದೆ. ಧಾರ್ಮಿಕ ಮೂಲಭೂತವಾದಿಗಳು ಬುರ್ಕಾ ಹಾಕಲೇಬೇಕು ಎಂದು ಪಥ್ವಾ ಹೊರಡಿಸಿದರೆ ನಾವು ಅಂತಹ ಪಥ್ವಾಕ್ಕೆ ಒಳಗಾದ ಮಹಿಳೆಯ ಪರ ನಿಲ್ಲಬೇಕು. ಸಾ ರಾ ಅಬೂಬಕ್ಕರ್ ಅಂತಹ ಪಥ್ವಾಗಳನ್ನು ದಿಟ್ಟವಾಗಿ ಎದುರಿಸಿ ಬದುಕಿದವರು. ಸಾ ರಾ ಅಬೂಬಕ್ಕರ್ ಅವರಿಗೆ ಲಂಕೇಶ್ ಸೇರಿದಂತೆ ಪ್ರಗತಿಪರರ ದೊಡ್ಡ ಗುಂಪು ಬೆಂಬಲಿಸಿದ್ದರಿಂದಲೇ ಅದು ಸಾಧ್ಯವಾಯಿತು. ಇಂತಹ ಪ್ರಗತಿಪರ ಸಾಹಿತಿ ಸಾ ರ ಅಬೂಬಕ್ಕರ್ ರವರನ್ನು ಕೋಮುವಾದಿ ಪತ್ರಕರ್ತರು ಬಹಳ ವ್ಯವಸ್ಥಿತವಾಗಿ ಆಯಿಷಾ ಆಸ್ಮಿನ್ ಪ್ರಕರಣದಲ್ಲಿ ಬಳಸಿಕೊಂಡರು.
ಆಯಿಷಾ ಆಸ್ಮಿನ್ ಪ್ರಕರಣ ದೊಡ್ಡದಾಗುತ್ತಿದ್ದಂತೆ ಕೋಮುವಾದಿ ಪತ್ರಕರ್ತರು ತಂಡ ಕಟ್ಟಿಕೊಂಡು ಸಾ ರಾ ಅಬೂಬಕ್ಕರ್ ಮನೆಗೆ ಹೋದರು. ಕಾಲೇಜಲ್ಲಿ ಹುಡುಗಿಯರು ಬುರ್ಕಾ ಹಾಕುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಕೇಳಿದರು. "ಬುರ್ಕಾ ಸಮಾನತೆಯ ವಿರೋಧಿ, ಯಾವತ್ತೂ ನಾನು ಅದನ್ನು ಬೆಂಬಲಿಸಲ್ಲ" ಎಂದರು. ಶಿಕ್ಷಣದ ಹಕ್ಕು, ಬದುಕುವ ಹಕ್ಕು, ಆಯ್ಕೆಯ ಹಕ್ಕುಗಳ ಬಗ್ಗೆ ವಿಮರ್ಶೆಯನ್ನೇ ಮಾಡದೇ ಸಾ ರ ಅಬೂಬಕ್ಕರ್ ರಂತಹ ಮುಗ್ದ ಪ್ರಗತಿಪರ ಸಾಹಿತಿ ನೀಡಿದ ಹೇಳಿಕೆ ಕೋಮುವಾದಿ ಪತ್ರಕರ್ತರಿಗೆ ಭೂರಿಬೋಜನವಾಗಿತ್ತು. ಶಿಕ್ಷಣಕ್ಕಾಗಿ ಬಟ್ಟೆಯೋ, ಬಟ್ಟೆಗಾಗಿ ಶಿಕ್ಷಣವೋ ? ಎಂದು ಕನಿಷ್ಠ ಯೋಚಿಸುವಷ್ಟು ಜ್ಞಾನವೂ ಇಲ್ಲವಾಗಿದ್ದು ದುರಂತ.
ಇದೊಂದು ರಾಷ್ಟ್ರೀಯ ಸುದ್ದಿ ಆದ ಬಳಿಕವೂ, ಜಿಲ್ಲಾಧಿಕಾರಿಗಳು, ವಿವಿ ಉಪಕುಲಪತಿಗಳು ಆದೇಶ ನೀಡಿದ ಬಳಿಕವೂ ಎಸ್ ವಿಎಸ್ ಕಾಲೇಜು ಆಯಿಷಾ ಆಸ್ಮೀನ್ ಗೆ ಪ್ರವೇಶ ನೀಡಲೇ ಇಲ್ಲ. ಬೇರೆ ದಾರಿ ಕಾಣದೆ ಆಯಿಷಾ ಆಸ್ಮಿನ್ ಹೀರಾ ಮುಸ್ಲಿಂ ಮಹಿಳಾ ಕಾಲೇಜು ಸೇರಿಕೊಂಡಳು.
ಆಯಿಷಾ ಆಸ್ಮಿನ್ ಬುರ್ಕಾ ಹಾಕಿಕೊಂಡು ಬಂದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹೇಳಿದ ಎಬಿವಿಪಿ ವಿದ್ಯಾರ್ಥಿಗಳಲ್ಲಿ ಇದ್ದಿದ್ದು ದ್ವೇಷಭಾವನೆಯಷ್ಟೆ. ಶಬರಿಮಲೆ ಯಾತ್ರೆ ಹೋಗುವ ಒಂದು ತಿಂಗಳ ಕಾಲ ಕರಾವಳಿಯ ಬಹುತೇಕ ಕಾಲೇಜುಗಳಲ್ಲಿ ಯೂನಿಫಾರಂ ಇದ್ದರೂ ಉಲ್ಲಂಘಿಸಿ ಕಪ್ಪು ಧಾರ್ಮಿಕ ಬಟ್ಟೆಯನ್ನು ವಿದ್ಯಾರ್ಥಿಗಳು ಧರಿಸುತ್ತಾರೆ. ಅವರು ಕಪ್ಪು ಧಾರ್ಮಿಕ ಬಟ್ಟೆ ಧರಿಸಿದರೆ ನಾವು ಹಸಿರು ಶಾಲು ಹಾಕಿಕೊಂಡು ಬರುತ್ತೇವೆ ಎಂದು ಯಾವ ಮುಸ್ಲಿಂ ಸಂಘಟನೆಯೂ ಈವರೆಗೆ ಹೇಳಿದ್ದು ಕೇಳಿಲ್ಲ.
ಆಯಿಷಾ ಆಸ್ಮಿನ್ ಗೆ ಬುರ್ಕಾ ಹಾಕಿ ಕಾಲೇಜಿಗೆ ಪ್ರವೇಶ ನಿರಾಕರಿಸಿದ್ದರಿಂದ ಆಗಿರೋ ಸಾಧನೆ ಏನೆಂದರೆ ಮುಸ್ಲಿಮರು ಮತ್ತು ಹಿಂದೂಗಳು ಕೋ ಎಜುಕೇಷನ್ ಪಡೆಯದಂತೆ ನೋಡಿಕೊಂಡಿದ್ದು ಮಾತ್ರ. ಇದು ಬಲಪಂಥೀಯರ ಸಾಧನೆ. ಬಲಪಂಥೀಯರ ಮತ್ತು ಮುಗ್ದ ಪ್ರಗತಿಪರರ ಬುರ್ಕಾ ವಿರೋಧಿ ನಿಲುವು ಲಾಭ ಆಗಿದ್ದು ಮುಸ್ಲಿಂ ಮೂಲಭೂತವಾದಿಗಳಿಗೆ..! ಅಲ್ಲಿಯವರೆಗೂ ಹಿಂದೂ ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಾಗಿ ಶಾಲೆ ಕಾಲೇಜು ಕಲಿಯುತ್ತಿದ್ದರು. ಈಗ ಸಮುದಾಯ ಆಧಾರಿತ ಶಾಲಾ ಕಾಲೇಜುಗಳಿಂದ ಈಗಾಗಲೇ ಇರುವ ಹಿಂದೂ ಮುಸ್ಲಿಮರ ನಡುವಿನ ಅಪನಂಬಿಕೆಗಳು ಇನ್ನಷ್ಟೂ ಗಟ್ಟಿಯಾಗುವ ಆತಂಕವಿದೆ.
ಬುರ್ಕಾ ಇಷ್ಯು ಬಂದಾಗೆಲ್ಲಾ ಆತಂಕವಾಗೋದಕ್ಕೆ ಇನ್ನೊಂದು ಕಾರಣವಿದೆ. ಯಾವಾಗಲೂ ಜುಲೈ- ಆಗಸ್ಟ್ ವೇಳೆಯಲ್ಲೇ ಬುರ್ಕಾ ಇಷ್ಯೂ ಮುನ್ನಲೆಗೆ ಬರುತ್ತೆ. ಬುರ್ಕಾ ಇಷ್ಯು ಆದ ಮೇಲೆ ಬೇರಾವುದೊ ಕಾರಣಕ್ಕೆ ಬಲಪಂಥೀಯರಿಂದ ಮುಸ್ಲೀಮರ ಮೇಲೆ ದಾಳಿಯಾಗುತ್ತೆ. 2009 ಆಗಸ್ಟ್ ನಲ್ಲಿ ಆಯಿಷಾ ಆಸ್ಮಿನ್ ಪ್ರಕರಣ ಆದ ಬಳಿಕ ಅದಕ್ಕೆ ಸಂಬಂಧಪಡದ ಹಿಂದೂ ಮುಸ್ಲಿಂ ಗಲಾಟೆ ಘಟನೆಗಾಗಿ ಕರ್ಫ್ಯೂ ವಿಧಿಸಲಾಯ್ತು. 2012 ಜುಲೈ ವೇಳೆಗೆ ಅಲೋಶಿಯಸ್ ಕಾಲೇಜ್ ನಲ್ಲಿ ಬುರ್ಕಾ ಬ್ಯಾನ್ ಮಾಡಲಾಯ್ತು. ಈ ರೀತಿ ಬುರ್ಕಾ ಬ್ಯಾನ್ ಮಾಡಿದ್ದು ಧಾರ್ಮಿಕ ವಸ್ತ್ರ ಧರಿಸಿಯೇ ಕಾಲೇಜಿಗೆ ಬರುವ ಫಾದರ್ ಗಳು ಮತ್ತು ನನ್ ಗಳಾಗಿರುವ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ! ಈ ಪ್ರಕರಣದ ಸ್ವಲ್ಪ ದಿನ ಬಳಿಕ ಅಂದರೆ 28 ಜುಲೈ 2012 ರಲ್ಲಿ ಮಂಗಳೂರಿನಲ್ಲಿ ಮುಸ್ಲೀಮ್ ಯುವಕರನ್ನು ಗುರಿಯಾಗಿರಿಸಿ ಹೋಂ ಸ್ಟೇ ಅಟ್ಯಾಕ್ ನಡೆಯಿತು.
2016 ರ ಆಗಸ್ಟ್ 26 ರಂದು ಮಂಗಳೂರಿನ ಶ್ರೀನಿವಾಸ ಕಾಲೇಜು ಬುರ್ಕಾ ನಿಷೇದ ಮಾಡಿತು.
ಈಗ ಮತ್ತೆ ಜುಲೈ ಬಂದಿದೆ. ಆಗಸ್ಟ್ ಬರುತ್ತಿದೆ. ಮತ್ತೆ ಬುರ್ಕಾ ಇಷ್ಯು ಸುದ್ದಿಯಾಗುತ್ತಿದೆ. ಇದರ ಹಿಂದಿನ ಹಿಡನ್ ಅಜೆಂಡಾ ಏನಿದೆಯೋ ಗೊತ್ತಿಲ್ಲ!
ಅದೇನೇ ಇರಲಿ, ಬುರ್ಕಾದಿಂದ ಯಾವ ರೀತಿಯ ಅಸ್ಪೃಶ್ಯತಾ ಆಚರಣೆಯೂ ಆಗುವುದಿಲ್ಲ. ಇನ್ನೊಬ್ಬರಿಗೆ ಹಿಂಸೆಯೂ ಆಗುವುದಿಲ್ಲ. ಬುರ್ಕಾ ಯಾರನ್ನೂ ಕೀಳಾಗಿ ನೋಡುವುದಿಲ್ಲ. ಬುರ್ಕಾ ಯಾವತ್ತೂ ಆರಾಧನಾಲಯದಲ್ಲಿ ಅಂಗಿ ಕಳಚಿ ಅರೆಬೆತ್ತಲು ಮಾಡಿ ಧರ್ಮದೊಳಗಿನ ಜಾತಿ, ಮೈಬಣ್ಣ ಹುಡುಕುವುದಿಲ್ಲ. ಬುರ್ಕಾ ಎಂದೂ ಕೂಡಾ ಜನಿವಾರದಂತೆ ನನ್ನ ಹತ್ತಿರ ಬರಬೇಡ ಎಂದು ಸೂಚಿಸುವುದಿಲ್ಲ.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?