ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರು ತಾ. 6.7.2021ರಂದು ಬೆಳಿಗ್ಗೆ ಗಂಟೆ10.15ಕ್ಕೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳ ವೀಕ್ಷಣೆ ಮಾಡಿ ನಂತರ 11.00 ಗಂಟೆಗೆ ಮಲ್ಪೆಯಲ್ಲಿ ನಡೆಯುವ ಉಡುಪಿ ಜಿಲ್ಲಾ ಮೀನುಗಾರ ಸಮಾಜದ ಕುಂದುಕೊರತೆಗಳ ಅಧ್ಯಯನ ಸಭೆಯಲ್ಲಿ ಭಾಗವಹಿಸಲಿರುವರು. ಮಧ್ಯಾಹ್ನ 4.00 ಗಂಟೆಗೆ ಕಾಂಗ್ರೆಸ್ ಭವನದಲ್ಲಿ ಕೋವಿಡ್ ಸಹಾಯ ಹಸ್ತದ ಬಗ್ಗೆ ನಡೆಯುವ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಂಜೆ 6 ಗಂಟೆಗೆ ಕುಂದಾಪುರಕ್ಕೆ ತೆರಳಿ ವಾಸ್ತವ್ಯ ಹೂಡುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.