ಬರಹ: - ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಮಾಜವಾದಿ)
ಯುವರ್ ಆನರ್,
ಸಂತ ಪಾದ್ರಿ ಸ್ಟಾನ್ ಸ್ವಾಮಿಯವರ ಸಾವು ತಮ್ಮ ನಿದ್ದೆಯನ್ನು ಕೂಡಾ ಕೆಡಿಸಿರಬಹುದು.
ಆದರೆ ಒಂದು ಸಾಂವಿಧಾನಿಕ ಸಂಸ್ಥೆಯಾಗಿ, ನ್ಯಾಯಾಂಗವು ಸರ್ಕಾರದ ದಾಳಿಯಿಂದ ನಾಗರಿಕ ಸ್ವಾತಂತ್ರ್ಯ ವನ್ನು ರಕ್ಷಿಸಲು ವಿಫಲವಾಗಿರುವುದರಿಂದಲೇ ಈ ಸಂತನ ಸಾಂಸ್ಥಿಕ ಹತ್ಯೆ ಯಾಗಿದೆಯೆಂದು
ಈ ದೇಶದ ಜನರಾದ ನಾವು"
ಕಳವಳಗೊಂಡಿದ್ದೇವೆ...
ಎಲ್ಲಕ್ಕಿಂತ ಹೆಚ್ಚಾಗಿ ,
ಕಳೆದ ಏಳುವರ್ಷಗಳಿಂದ ಈ ದೇಶದಲ್ಲಿ ಒಂದು ದೇಶ-ಎರಡೆರಡು ಕಾನೂನು" ಜಾರಿಯಲ್ಲಿರುವುದು ಆತಂಕ ಹುಟ್ಟಿಸಿದೆ.
ಮತ್ತು ನ್ಯಾಯಾಂಗದ ಕೆಳಹಂತದಿಂದ ಮೇಲಿನವರೆಗೆ ನ್ಯಾಯದಾನ ಮಾಡುವಾಗ
ಮೋದಿವಾದಿಗಳಿಗೊಂದು ಮಾನದಂಡ... ಜನವಾದಿಗಳಿಗೊಂದು ಮಾನದಂಡವನ್ನು
ಅನುಸರಿಸುತ್ತಾ ಬಂದಿರುವುದು ಈ ದೇಶದ ಪ್ರಜಾತಂತ್ರದ ಭವಿಷ್ಯದ ಬಗ್ಗೆ ತೀವ್ರವಾದ ಕಾಳಜಿ ಹುಟ್ಟಿಸುತ್ತಿದೆ...
ಏಕೆಂದರೆ, 2021ರ ಮಾರ್ಚ್ ನಲ್ಲಿ ಫಾದರ್ ಸ್ವಾಮಿಯವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಾ ವಿಶೇಷ ನ್ಯಾಯಾಲಯವು ಪಾದ್ರಿಯವರ
"right to personal liberty and other grounds like his old age and sickness were outweighed by the “collective interest of the community”
(ಸಮುದಾಯದ ಸಾಮೂಹಿಕ ಹಿತಾಸಕ್ತಿಯ ತೂಕವು ಸ್ವಾಮಿಯವರ ವೈಯಕ್ತಿಕ ಸ್ವಾತಂತ್ರ್ಯ , ಅವರ ವಯಸ್ಸು ಹಾಗೂ ಖಾಯಿಲೆಗಳಿಂಗಿಂತ ಹೆಚ್ಚು ತೂಗುತ್ತದೆ . ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ) ಎಂದು ಹೇಳಿತ್ತು.
ಅಂದರೆ ವಿಚಾರಣೆಗೆ ಮುನ್ನವೇ, ಹಾಗೂ ಆರೋಪಿಗೆ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಅವಕಾಶವನ್ನೂ ನೀಡದೆಯೇ, ಏಕಪಕ್ಷೀಯವಾಗಿ ನ್ಯಾಯಾಲಯವು ಫಾದರ್ ಸ್ವಾಮಿಯವರು prima facie ಅಪರಾಧಿಯಾಗಿರಬಹುದೆಂಬ ಅಭಿಪ್ರಾಯವನ್ನು ತಳೆದುಬಿಟ್ಟಿತು.
ಯುವರ್ ಆನರ್,
ಇದು ಯಾವ ಪ್ರಜಾತಾಂತ್ರಿಕ ನ್ಯಾಯಸಂಹಿತೆ?
ಇಂಥಾ ಸಂವಿಧಾನ ಬಾಹಿರ ಮಾನದಂಡವಿರುವ UAPA ಕಾಯಿದೆಯೇ ನ್ಯಾಯಬಾಹಿರ ಹಾಗೂ ಸಂವಿಧಾನ ವಿರೋಧಿಯಲ್ಲವೇ?
ಸಂವಿಧಾನವನ್ನು ಇಂಥಾ ದಾಳಿಯಿಂದ ರಕ್ಷಿಸಬೇಕಾದ ಸಾಂವಿಧಾನಿಕ ಜವಾಬ್ದಾರಿಯಿರುವ ತಮ್ಮ ಘನ ನ್ಯಾಯಾಲಯವು, ಈ ಅನ್ಯಾಯ ಹಾಗೂ ಅಕ್ರಮವಾದ ಸಂವಿಧಾನ ಉಲ್ಲಂಘನೆ ಯನ್ನು ಸ್ವಪ್ರೇರಿತರಾಗಿ ಖೈದು ಮಾಡುವ ಬದಲು ಜಾರಿ ಮಾಡುತ್ತಿರುವುದೇಕೆ?
►►ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಪರ್ಯಾಸ ಮತ್ತು ಅಪಾಯಕಾರಿ ಯಾದ ವಿಷಯವೆಂದರೆ,
ಭಾರತದ ನ್ಯಾಯಾಲಯಗಳು ದೇಶದ ಭಾವೈಕ್ಯತೆಗೆ ಹಾಗೂ ದೇಶದ ಭದ್ರತೆಗೆ ಧಕ್ಕೆ ಎಂದು ಭಾವಿಸಿದ ಎಲ್ಲಾ ಪ್ರಕರಣಗಳಲ್ಲೂ
"ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮುದಾಯದ ಸಾಮೂಹಿಕ ಹಿತಾಸಕ್ತಿಯೇ ಪ್ರಧಾನ"
ಎಂದೇನೂ ಪರಿಗಣಿಸುತ್ತಿಲ್ಲ!
ವಾಸ್ತವವಾಗಿ ಮೋದಿ ಪರವಾದ ಹಲವಾರು ಅಪರಾಧಿಗಳು ಸಮಾಜದ ಹಾಗೂ ದೇಶದ ಭದ್ರತೆ ಹಾಗು ಐಕ್ಯತೆಗೆ ತೀವ್ರವಾಗಿ ಹಾನಿ ಮಾಡಿರುವ ಅಪರಾಧಗಳು ಸಾಕ್ಷಾಧಾರಗಳಿಂದ ಸಾಬೀತಾದ ನಂತರವೂ...
ಭಾರತದ ಉಚ್ಚ ಹಾಗೂ ಪರಮೋಚ್ಚ ನ್ಯಾಯಾಲಯಗಳು ಮೋದಿ ಪರವಾದಿಗಳ ಹಿತವನ್ನು
" ಸಮುದಾಯದ ಹಿತಕ್ಕಿಂತ ದೇಶದ ಐಕ್ಯತೆ ಮತ್ತು ಭದ್ರತೆಗಿಂತ ಪ್ರಧಾನ " ಎಂದು ಪರಿಗಣಿಸುತ್ತಿವೆಯೇ
ಎಂಬ ಸಕಾರಣ ಅನುಮಾನ ಕಳೆದ ಏಳುವರ್ಷಗಳಿಂದ ಈ ದೇಶದ ಜನರನ್ನು ಕಾಡುತ್ತಿದೆ....
ಉದಾಹರಣೆಗೆ:
1.ಗುಜರಾತ್ ಭಯೋತ್ಪಾದನೆಯ ಮಾಯಾ ಕೊಡ್ನಾನಿ
ಮಾಯಾ ಕೊಡ್ನಾನಿ 2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಂತ್ರಿ.
ಆಗ ಮುಖ್ಯಮಂತ್ರಿ ಮೋದಿಯವರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ, ಯೋಜನೆಗಳೊಂದಿಗೆ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಮಾಯಾ ಕೊಡ್ನಾನಿ ನೇರವಾಗಿ ಭಾಗವಹಿಸಿದ್ದರು. ಇದು ಅಂದಿನ ಸುಪ್ರೀಂಕೋರ್ಟ್ ಉಸ್ತುವಾರಿ ಯಲ್ಲಿ ನಡೆಸಿದ ಸ್ವತಂತ್ರ ತನಿಖೆಗಳಲ್ಲೂ ಸ್ಪಷ್ಟವಾಗಿತ್ತು...
ಅದರಲ್ಲೂ ವಿಶೇಷವಾಗಿ ಅಹಮದಾಬಾದಿನ ನರೋದಾ ಪಾಟಿಯಾದಲ್ಲಿ ಈಕೆಯ ನೇತೃತ್ವದ ಹಿಂದುತ್ವವಾದಿ ಉಗ್ರರ ಗುಂಪು 2002ರ ಫೆಬ್ರವರಿ 28 ರಂದು 97 ಮುಸ್ಲಿಮರ ಕಗ್ಗೊಲೆ ನಡೆಸಿದ್ದು ಸಕಲ ಸಾಕ್ಷಾಧಾರಗಳಿಂದ ಸಾಬೀತಾಗಿತ್ತು. ಬಲಿಯಾದವರಲ್ಲಿ 36 ಜನ ಮಹಿಳೆಯರು...35 ಜನ ಮಕ್ಕಳು!
ಅಪರಾಧ ಸಾಬೀತಾಗಿದ್ದರಿಂದ 2012ರ ಆಗಸ್ಟಿನಲ್ಲಿ ಈಕೆಗೆ 28 ವರ್ಷಗಳ ಶಿಕ್ಷೆಯನ್ನು ವಿಶೇಷ ಕೋರ್ಟು ವಿಧಿಸಿತ್ತು.
ಆದರೆ... ದುರದೃಷ್ಟವಶಾತ್..
2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ನ್ಯಾಯಾಲಯಗಳಲ್ಲೂ ಸಮುದಾಯದ ಮತ್ತು ದೇಶದ ಹಿತಾಸಕ್ತಿಯ ವ್ಯಾಖ್ಯಾನಗಳು ಬದಲಾಗಿದ್ದರಿಂದ...
ಅಪರಾಧ ಸಾಬೀತಾಗಿ ಜೈಲಿನಲ್ಲಿದ್ದ ಮಾಯಾ ಕೊಡ್ನಾನಿ , ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ತನಗೆ ಆರೋಗ್ಯ ಸರಿಯಿಲ್ಲವೆಂದು ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಗುಜರಾತಿನ ಹೈಕೋರ್ಟಿಗೆ ಒಂದೇ ಒಂದು ಅರ್ಜಿ ಹಾಕಿಕೊಂಡರು.
ಕೂಡಲೇ ಅದನ್ನು ಪುರಸ್ಕರಿಸಿದ ಗುಜರಾತ್ ಹೈಕೋರ್ಟಿನ ಜಸ್ಟೀಸ್ ಸಹಾಯ್ ಮತ್ತು ಜಸ್ಟೀಸ್ ದೋಹಾರಿಯಾ ಅವರ ದ್ವಿಸದಸ್ಯ ಪೀಠ ಆಕೆಯ " ಅನಾರೋಗ್ಯದ ಕಾರಣಕ್ಕಾಗಿ" ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಮಾತ್ರವಲ್ಲ,
ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತ್ತು ಮಾಡಿತು!
97 ಅಮಾಯಕರನ್ನು ಕೊಂದ ಅಪರಾಧಿ ಒಂದೂವರೆ ವರ್ಷವೂ ಜೈಲಿನಲ್ಲಿರಲಿಲ್ಲ.
►►ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಹೊಸ ನ್ಯಾಯವ್ಯಾಖ್ಯಾನಗಳು ಮುಂದುವರೆದು 2018ರಲ್ಲಿ ಇದೆ ಕೋರ್ಟು ಕೊಡ್ನಾನಿಯವರನ್ನು ದೋಷಮುಕ್ತಗೊಳಿಸಿತು.
ಹಾಗಿದ್ದಲ್ಲಿ ನ್ಯಾಯದ ತಕ್ಕಡಿಯಲ್ಲಿ ಬಲಿಯಾದ ಅಮಾಯಕ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿ ಗೆ ಬೆಲೆ ಇಲ್ಲವೇ?
2.ಸುಪಾರಿ ಭಯೋತ್ಪಾದಕ ಬಾಬು ಭಜರಂಗಿ
ಇದೆ ನರೋಡಾ ಪಾಟಿಯಾದ ಹಾಗು ಗುಜರಾತಿನಲ್ಲಿ ನಡೆದ ಇತರ ಹಿಂದುತ್ವವಾದಿ ನರಸಂಹಾರಗಳ ಸಾಬೀತಾದ ರೂವಾರಿ ಬಾಬು ಭಜರಂಗಿ.
ನರೋಡಾ ಪಾಟಿಯಾ ಪ್ರಕರಣದಲ್ಲಿ ಈತನ ಪಾತ್ರವೂ ಸಾಕ್ಷಾಧಾರಗಳಿಂದ ರುಜುವಾತಾಗಿ ಭಜರಂಗಿಗೆ ಅಜೀವ ಕಾರಾಗೃಹ ಶಿಕ್ಷೆಯನ್ನು 2012ರಲ್ಲಿ ವಿಧಿಸಲಾಗಿತ್ತು.
ಆದರೆ ...
2012-16ರ ನಡುವೆ ಆತನಿಗೆ, ಹೆಂಡತಿಯ ಅನಾರೋಗ್ಯದ ಹೆಸರಿನಲ್ಲಿ ಮತ್ತು ಆತನದೇ ಅನಾರೋಗ್ಯದ ನೆಪದಲ್ಲಿ 14 ಬಾರಿ ಏಳೇಳು ದಿನಗಳ ತಾತ್ಕಾಲಿಕ ಜಾಮೀನನ್ನು ಕರುಣಾಮಯಿ ಕೋರ್ಟುಗಳು ದಯಪಾಲಿಸಿದ್ದವು!
ಅಷ್ಟು ಮಾತ್ರವಲ್ಲ..
2019ರ ಮಾರ್ಚ ನಲ್ಲಿ ಜಸ್ಟೀಸ್ ಕಾನ್ವಿಲ್ಕರ್ ನೇತೃತ್ವ ಸುಪ್ರೀಂ ಕೋರ್ಟ್ ಪೀಠ ಅನಾರೋಗ್ಯದ ಕಾರಣವನ್ನು ನೀಡಿ ಬಾಬಾ ಭಜರಂಗಿಗೆ ಪರ್ಮನೆಂಟ್ ಜಾಮೀನನ್ನು ನೀಡಿತು.
►►ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆದರೇ,
ಇದೇ ಮಾನದಂಡವನ್ನು ತಮ್ಮ ಘನನ್ಯಾಯಾಲಯಗಳು ಕೇವಲ ವಿಚಾರಣಾಧೀನ ಆರೋಪಿಗಳಾಗಿದ್ದ, ಜನಪರ ಹೋರಾಟಗಾರರಿಗೆ ಮಾತ್ರ ವಿಸ್ತರಿಸಲಿಲ್ಲ...
ಯುವರ್ ಆನರ್
2014 ರ ನಂತರದ ನ್ಯಾಯಾಲಯಗಳ ತಾರತಮ್ಯ ನೀತಿಯ ಕೆಲವು ಸ್ಯಾಂಪಲ್ ಗಳು:
- ಶೇ. 90ರಷ್ಟು ಅಂಗವೈಕಲ್ಯದಿಂದ ನರಳುತ್ತಾ ಕೋವಿಡ್ ಅನ್ನು ಕೂಡಾ ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಅಧ್ಯಾಪಕ ಜಿ.ಎನ್ ಸಾಯಿಬಾಬಾ ಅವರು 2020ರಲ್ಲಿ ಅನಾರೋಗ್ಯದಿಂದ ಸಾವಿನ ದವಡೆಯಲ್ಲಿರುವ ತನ್ನ ತಾಯಿಯ ಕೊನೆಯ ದರ್ಶನ ಮಾಡಲು ಹಾಕಿಕೊಂಡ ತಾತ್ಕಾಲಿನ ಜಾಮೀನನ್ನು ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟು ತಿರಸ್ಕರಿಸಿತು.
ಅದಾದ ನಾಲ್ಕೇ ದಿನಗಳಲ್ಲಿ ಅವರ ತಾಯಿ ಮೃತರಾದರು.
ಈಗ ಸಾಯಿಬಾಬಾ ಅವರೂ ಜೈಲಿನಲ್ಲಿ ಸಾವಿನ ದವಡೆಯಲ್ಲಿದ್ದಾರೆ.
ಕೊಡ್ನಾನಿಗೆ ಭಜರಂಗಿಗೆ ಜಾಮೀನು ಕೊಡುವ ಕೋರ್ಟುಗಳು ಸಾಯಿಬಾಬಾ ಅವರಿಗೆ ಮೆಡಿಕಲ್ ಬೇಲ್ ಅನ್ನು ನಿರಾಕರಿಸುತ್ತಿರುವುದೇಕೆ....ಯುವರ್ ಆನರ್?
- ಅಪರಾಧವು ಸಾಬೀತಾದ ನಂತರವೂ ಕೊಡ್ನಾನಿ ಮತ್ತು ಭಜರಂಗಿಗಳನ್ನು ಆರೋಗ್ಯದ ಕಾರಣದಿಂದ 'ಕರುಣೆ ತೋರಿ' ಬಿಡುಗಡೆ ಮಾಡಿದ ಕೋರ್ಟುಗಳು.....
ಭೀಮ ಕೋರೆಗಾಂವ್ ಪ್ರಕರಣದಲ್ಲಿ ಮಾತ್ರ, ಅಪರಾಧ ಸಾಬೀತಾಗುವುದಿರಲೀ, ವಿಚಾರಣೆಯೂ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುದ್ದ ಸಾವಿನ ದವಡೆಯಲ್ಲಿದ್ದ 82 ವಯಸ್ಸಿನ ಖ್ಯಾತ ಕ್ರಾಂತಿಕಾರಿ ಕವಿ ವರವರರಾವ್ ಅವರಿಗೆ ನಿರಂತರವಾಗಿ ಜಾಮೀನು ನಿರಾಕರಿಸಿದ್ದಕ್ಕೆ
ಭಿನ್ನ ಮಾನದಂಡಗಳನ್ನು ಅನುಸರಿಸಿದ್ದೇಕೆ?
ಹಲವು ಮಾರಣಾಂತಿಕ ಖಾಯಿಲೆಗಳಿಂದ ನರಳುತ್ತಿರುವ ಅವರಿಗೆ ಕೇವಲ ಆರು ತಿಂಗಳ ಮೆಡಿಕಲ್ ಜಾಮೀನು ನೀಡಿದೆ.
ಆ ನಂತರ..ಯುವರ್ ಆನರ್?
- ಅನಾರೋಗ್ಯ ಪೀಡಿತ ಹೆಂಡತಿಯನ್ನು ನೋಡಿಬರಲು ಬಾಬು ಭಜರಂಗಿಗೆ ಎರಡು ವರ್ಷಗಳಲ್ಲಿ 14 ಬಾರಿ ಜಾಮೀನು ನೀಡಿದ ಭಾರತದ ಕೋರ್ಟುಗಳು, ಪಿಂಜರಾ ತೋಡ್ ಹಾಗೂ CAA-NRC ಹೋರಾಟದ ವಿದ್ಯಾರ್ಥಿ ನಾಯಕಿ ನತಾಶಾ ನರ್ವಾಲ್ ಗೆ ಕೋವಿಡ್ ಇಂದ ಕೊನೆ ಉಸಿರು ಎಳೆಯುತ್ತಿದ್ದ ತಂದೆಯನ್ನು ಬದುಕಿರುವಾಗಲೇ ಒಮ್ಮೆಯಾದರೂ ನೋಡಿ ಬರಲು ಕೂಡ ಕೋರ್ಟುಗಳು ಜಾಮೀನು ನೀಡಲಿಲ್ಲ.
ಬಾಬು ಭಜರಂಗಿಗೆ ಒಂದು ಕಾನೂನು.., ನತಾಶಾ ನರ್ವಾಲ್ ಗೆ ಒಂದು ಕಾನೂನೇ...ಯುವರ್ ಆನರ್?
- 84 ವಯಸ್ಸಿನ, ಇತರರ ಸಹಾಯವಿಲ್ಲದೆ ನಡೆಯಲು ಆಗದ ಸ್ತಾನ್ ಸ್ವಾಮಿ ಯವರಿಗೆ ಮೆಡಿಕಲ್ ಜಾಮೀನು ನೀಡಿದರೆ ದೇಶದ ಭದ್ರತೆಗೆ ಅಪಾಯ ಎಂಬ ಸರ್ಕಾರದ ವಾದವನ್ನು ಕಣ್ಣುಮುಚ್ಚಿ ಒಪ್ಪಿಕೊಂಡು ಸ್ವಾಮಿಯವರ ಹತ್ಯೆಗೆ ಕಾರಣವಾದ ನ್ಯಾಯಾಲಯ ಮತ್ತು ಸರ್ಕಾರ ರಕ್ಷಿಸುತ್ತಾ ಬಂದಿರುವುದು...
" ಯಾವ ಸಮುದಾಯದ ಯಾವ ಹಿತಾಸಕ್ತಿಯನ್ನು ರಕ್ಷಿಸಲು....ಯುವರ್ ಆನರ್?
ಯುವರ್ ಆನರ್,
ಈ ದೇಶದಲ್ಲಿ ಮೋದಿವಾದಿಗಳಿಗೆ ಒಂದು ಕಾನೂನು? ಜನವಾದಿಗಳಿಗೆ ಒಂದು ಕಾನೂನೇ? ....
ಸ್ಟಾನ್ ಸ್ವಾಮಿಯವರ ಈ ಸಾಂಸ್ಥಿಕ ಹತ್ಯೆಯಿಂದಲಾದರೂ ನ್ಯಾಯಾಂಗದ ಆತ್ಮಾವಲೋಕನ ಪ್ರಾರಂಭವಾಗುವುದೇ?
UAPA ಕಾಯಿದೆಯು ಸಂವಿಧಾನ ದ ಮೂಲರಚನೆಗೆ ವಿರುದ್ದವಾದದ್ದೆಂದು ಈಗಲಾದರೂ ನ್ಯಾಯಾಲಯ ಭಾವಿಸುವುದೇ?
ಸರ್ವಾಧಿಕಾರಿ ಸರ್ಕಾರದ ದಾಳಿಯಿಂದ ಸಂವಿಧಾನವನ್ನು ಉಳಿಸಲು ಪ್ರಯತ್ನವನ್ನಾದರೂ ಮಾಡಬಹುದೇ?
ಯುವರ್ ಆನರ್.....
(ಕೃಪೆ: ವಾರ್ತಾಭಾರತಿ)
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?