ಕಳೆದ ಹಲವು ದಿನಗಳಿಂದ ಮಂಗಳೂರಿನ ಯೆನೇಪೋಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ (1941 ಮಾರ್ಚ್ 27- 80ವರ್ಷ) ಇಂದು ನಿಧನರಾಗಿದ್ದಾರೆ.
ಜುಲೈ18ರಂದು ಮಂಗಳೂರಿನ ಮನೆಯಲ್ಲಿ ಯೋಗಾಸನ ಮಾಡುತ್ತಿದ್ದ ವೇಳೆ ಆಸ್ಕರ್ ರವರು ಜಾರಿ ಬಿದ್ದಿದ್ದರು. ಆಗ ಅವರ ತಲೆಗೆ ಸಣ್ಣ ಗಾಯವಾಗಿತ್ತು ಮತ್ತು ಆ ನಂತರ ಮಿದುಳಿನ ಶಸ್ತ್ರಚಿಕಿತ್ಸೆ ನಡೆದಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಂಗಳೂರಿನ ಯನಪೋಯಾ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ನಾಳೆ ಬೆಳಿಗ್ಗೆ (9.30ರಿಂದ ಮಧ್ಯಾಹ್ನ 1ರ ತನಕ ) ಉಡುಪಿಯ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಸಂಜೆ 4ರಿಂದ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಆಸ್ಕರ್ ಫರ್ನಾಂಡೀಸ್ ಅವರ ಆಪ್ತ ಕಾರ್ಯದರ್ಶಿ ನಾಗೇಶ್ ಉದ್ಯಾವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.