'ಸ್ವಚ್ಛ ಕಡಲ ತೀರ, ಹಸಿರು ಕೋಡಿ' ಅಭಿಯಾನದ ಮೂರನೆಯ ಹಂತವನ್ನು ದಿನಾಂಕ 28 ನವೆಂಬರ್ 2021 ರವಿವಾರ, ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳು, ಕುಂದಾಪುರ ಪುರಸಭೆ ಮತ್ತು ಕೋಡಿ ಮಹಾಜನರ ಸಹಯೋಗದೊಂದಿಗೆ ಹಳೆಅಳಿವೆಯಿಂದ ಕೋಡಿಯ ಸೀ ವಾಕ್ ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗೂ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. ಪುರಸಭೆಯ ಸಹಕಾರದೊಂದಿಗೆ ಕಸದ ವಿಲೇವಾರಿಯನ್ನು ಮಾಡಲಾಯಿತು.
ಈ ಅಭಿಯಾನದ ನಿರಂತರ ಪ್ರಕ್ರಿಯೆಯಾಗಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಸಲಾಗುವುದು ಮತ್ತು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯವನ್ನು ಕುಂದಾಪುರ ಜನರ ಆದ್ಯತೆ ಹಾಗೂ ಆಶಯವಾಗಿ ರೂಪಿಸುವ ಇಚ್ಛೆಯನ್ನು ಬ್ಯಾರೀಸ್ ಗ್ರೂಪಿನ ಚೇರ್ಮನ್ ಸಯ್ಯದ್ ಮೊಹಮ್ಮದ್ ಬ್ಯಾರಿಯವರು ವ್ಯಕ್ತಪಡಿಸಿದ್ದಾರೆ.
ಈ ಸಂಧರ್ಭದಲ್ಲಿ ಬ್ಯಾರೀಸ್ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಕುಂದಾಪುರ ಪುರಸಭೆಯ ಕೌನ್ಸಿಲರ್ ಗಳು, ಶಿಕ್ಷಕರು, ವಿಧ್ಯಾರ್ಥಿಗಳು ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಊರಿನ ಮಹಾಜನರು ಪಾಲ್ಗೊಂಡಿದ್ದರು.