Advertisement

ಸ್ಕಾರ್ಪ್ ವಿವಾದ: ಮನುವಾದಿಗಳು ತೋಡಿದ ಖೆಡ್ಡಾ? ಈ ವಿವಾದ ಬಿಜೆಪಿಗರಿಗೆ ಬಹು ಫಸಲು ತರಬಹುದೇ?

Advertisement

ನಾವು ಭಾರತೀಯರು. ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದಲೂ ಬ್ರಾಹ್ಮಣೇತರರಿಗೆ ವಿದ್ಯೆ ನಿರಾಕರಿಸಲ್ಪಡುತ್ತಿತ್ತು. ಕುಲಕಸುಬು ಮಾಡಿಕೊಂಡು ಸೀಮಿತ ವ್ಯಾಪ್ತಿಯೊಳಗೆ ಗುಲಾಮಗಿರಿಯ ಬದುಕು ಬದುಕಬೇಕಿತ್ತು. ಬ್ರಿಟೀಷರ ಕಾಲದಲ್ಲಿ ಚರ್ಚ್‌ಗಳು ಶಾಲೆಗಳನ್ನು ಸ್ಥಾಪಿಸಿ ಬ್ರಾಹ್ಮಣೇತರರಿಗೂ ವಿದ್ಯೆ ನೀಡಲಾರಂಬಿಸಿದ್ದು ಸನಾತನಿ ಮನುವಾದಿಗಳ ಕಣ್ಣು ಕೆಂಪಗಾಗಿಸಿತ್ತು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಚರ್ಚ್ ಗಳು ನೀಡುತ್ತಿದ್ದ ವಿದ್ಯೆಯನ್ನು ಕ್ರೈಸ್ತರು ನಮ್ಮವರನ್ನು ಮತಾಂತರ ಮಾಡುತ್ತಾರೆ ಎಂದು ಮನುವಾದಿ ಗಳು ಹುಯಿಲೆಬ್ಬಿಸಿದರು. ನಿಜಕ್ಕೂ ಮತಾಂತರ ಮಾಡಿದ್ದರೆ ಅದು ಹೇಗೆ ಕ್ರೈಸ್ತರ ಸಂಖ್ಯೆ ಇಂದಿಗೂ 2%ದಾಟಿಲ್ಲ ಎಂದು ಪ್ರಶ್ನಿಸಿದರೆ ಅದಕ್ಕೆ ಯಾರೂ ಉತ್ತರಿಸುತ್ತಿಲ್ಲ. ಅದಿರಲಿ, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ದೇಶದಾದ್ಯಂತ ಹಳ್ಳಿ ಹಳ್ಳಿಗಳ ಮೂಲೆಮೂಲೆಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ಶತಶತಮಾನ ಕಾಲದಿಂದ ವಿದ್ಯೆ ನಿರಾಕರಿಸಲ್ಪಟ್ಟಿದ್ದ ಶೋಷಿತ ವರ್ಗಕ್ಕೆ ವಿದ್ಯೆ ನೀಡಿ, ಉದ್ಯೋಗ ನೀಡಿ ಇಡೀ ಸಮುದಾಯವನ್ನೆ ಉದ್ಧಾರಗೊಳಿಸಿತು. ಇದನ್ನು ಸಹಿಸದ ಅದೇ ಮನುವಾದಿಗಳು ಯಾವುದೇ ಮಹತ್ತರವಾದ ಪುರಾವೆ ಇಲ್ಲದೇ, ಕಾಂಗ್ರೆಸ್ ನ ಸಮಾನತಾ ವಾದವನ್ನು 'ಹಿಂದೂ ವಿರೋಧಿ' ಎಂದು ಪ್ರಚಾರ ಮಾಡಿತು. ಇಂದು ಕಾಂಗ್ರೆಸ್ ಪಕ್ಷದ ಸಮಾನತಾವಾದದ ಯೋಜನೆಗಳ ಫಲಾನುಭವಿಗಳೇ ಆ ಮನುವಾದಿಗಳ ಜೊತೆ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬೊಬ್ಬೆ ಹೊಡೆಯಲಾರಂಬಿಸಿದ್ದಾರೆ. ಅದೂ ಇರಲಿ, ಕಾಂಗ್ರೆಸ್ ಶಾಲೆಗಳನ್ನು ಆರಂಬಿಸಿದ್ದು ಶತಶತಮಾನಗಳ ಕಾಲದಿಂದ ದೇಶದಲ್ಲಿ ನೆಲೆಗೊಂಡಿರುವ 'ಮೇಲು ಕೀಳು', 'ಬಡವ ಬಲ್ಲಿದ' ವ್ಯತ್ಯಾಸಗಳನ್ನು ತೊಡೆದು ಹಾಕಲೆಂದು. ಆ ಪರಿಕಲ್ಪನೆಯ ಜಾರಿಯ ಭಾಗವಾಗಿ ದೇಶದ ಶಾಲಾ ಕಾಲೇಜುಗಳಲ್ಲಿ ಸಮಾನ ವಸ್ತ್ರ ಸಂಹಿತೆ ಜಾರಿಗೊಳಿಸಿತು. ಆದರೆ ಆ ಶಾಲೆ ಕಾಲೇಜುಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮುಂತಾದ ಜಾತಿ, ಮತ, ಧರ್ಮದ ಬೇದ ಮರೆತು ವಿದ್ಯೆ ಕಲಿತು ಕೆಳ ಜಾತಿಗರ, ಅಲ್ಪಸಂಖ್ಯಾತರ ಮಕ್ಕಳು ಉನ್ನತ ಹುದ್ದೆ ಪಡೆದು ಐಷಾರಾಮಿ ಬದುಕು ಬದುಕುತ್ತಿರುವುದನ್ನು ಸಹಿಸದ ಮನುವಾದಿಗಳು ಮತ್ತೆ ಕುತಂತ್ರ ಆರಂಬಿಸಿದ್ದಾರೆ. ಇದೇ ಸಮಯದಲ್ಲಿ ಈ ವಿವಾದವನ್ನು ಹುಟ್ಟು ಹಾಕಲಾಗಿದೆ. ಇದು ಮನುವಾದಿಗಳ ಬೆಳವಣಿಗೆಯ ದೃಷ್ಟಿಯಿಂದ ಬಹು ಫಸಲು ಬರುವ ವಿವಾದ. ಇಂತಹ ಕ್ಷುಲ್ಲಕ ಕಾರಣಗಳಿಗಾಗಿ ವಿಧ್ಯಾರ್ಥಿಗಳಲ್ಲಿ ಅಭದ್ರತೆಯ ಭಾವನೆ ಮೂಡಿಸಿ ಒಂದು ವರ್ಗದ ಮಕ್ಕಳನ್ನು ವಿದ್ಯೆಯಿಂದ ದೂರವಿಡುವುದು ಅವರುಗಳ ಗುರಿಯೂ ಹೌದು. ಆ ಕಾರಣಕ್ಕಾಗಿ ಶಾಲಾ ವಸ್ತ್ರಸಂಹಿತೆ ಪಾಲನೆ, ಶಿಸ್ತು ಪಾಲನೆ ಹಾಗೂ ವಿದ್ಯೆ ಕಲಿಯುವುದೊಂದೆ ಗುರಿ ನಮ್ಮ ಅಹಿಂದ (ಅ: ಅಲ್ಪಸಂಖ್ಯಾತ, ಹಿಂ: ಹಿಂದುಳಿದ ವರ್ಗ, ದ: ದಲಿತ) ವರ್ಗದ ವಿಧ್ಯಾರ್ಥಿಗಳ ಗುರಿ ಆಗಬೇಕು. ಅದರಿಂದಷ್ಟೇ ನಮ್ಮ ಅಜನ್ಮ ವೈರಿಗಳಾದ ಮನುವಾದಿಗಳ ಸೊಕ್ಕು ಮುರಿಯಲು ಸಾಧ್ಯ. ಇಲ್ಲವಾದರೆ ನಮ್ಮ ಮುಂದಿನ ಜನಾಂಗದ ಮಕ್ಕಳ ಭವಿಷ್ಯ ಹರೋಹರ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement