ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿ ಆದಿತ್ಯವಾರ (ಜನವರಿ 09) ಬೆಳಿಗ್ಗೆ 9.30ಕ್ಕೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭಗೊಂಡಿತ್ತು. ಈ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ, ಕಿರಿಯ ನಾಯಕರುಗಳು ಭಾಗವಹಿಸಿದ್ದರು. 73ವರ್ಷ ಪ್ರಾಯದ ಸಿದ್ದರಾಮಯ್ಯನವರು ಜ್ವರದಿಂದ ಬಳಲುತ್ತಿದ್ದರೂ ಪಕ್ಷದ ಪೂರ್ವನಿರ್ಧರಿತ ಕಾರ್ಯಕ್ರಮ ಎಂಬ ಕಾರಣದಿಂದಾಗಿ ನಿರಂತರ ನಾಲ್ಕು ಕಿಲೋಮೀಟರ್ ಕ್ರಮಿಸಿದ ನಂತರ ಇನ್ನು ನಡೆಯಲು ಆಗುವುದಿಲ್ಲ ಎಂದು ತಿಳಿದು ಆ ನಂತರ ವೈದ್ಯರ ಸಲಹೆ ಹಾಗೂ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಯವರಂತಹ ಪಕ್ಷದ ನಾಯಕರ ಒತ್ತಾಯದ ಮೇರೆಗೆ ವಿಶ್ರಾಂತಿ ಪಡೆಯಲು ಕಾರು ಹತ್ತಿ ತೆರಳಿದ್ದರು.
►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
ಪಾದಯಾತ್ರೆಯಲ್ಲಿ ಇತರ ನಾಯಕರುಗಳ ಜೊತೆ ಡಿ.ಕೆ ಶಿವಕುಮಾರ್ ರವರು ಸಂಜೆಯ ತನಕ ಮುಂದಿನ ಸಾಲಿನಲ್ಲಿ ನಡೆದಿದ್ದರು. ಈ ಸಂದರ್ಭದಲ್ಲಿ ಡಿಕೆಶಿಯವರ ಜೊತೆಗಿನ ನಡಿಗೆಯ ವಿಡಿಯೋ ಮಾಡಿಕೊಳ್ಳುವ, ಸೆಲ್ಫಿ ತಗೆದುಕೊಳ್ಳುವ ಹುಮ್ಮಸ್ಸಿನ ಯುವ ಕಾರ್ಯಕರ್ತರ ದೂಡಾಟದಿಂದ ಮತ್ತು ದಿನವಿಡೀ ಬಿಸಿಲಿನಲ್ಲಿ ನಡೆದ ಸುಸ್ತಿನಿಂದ ಡಿಕೆಶಿಯವರು ನಡೆಯುವಾಗ ಆಚೀಚೆಗೆ ಸ್ವಲ್ಪ ಪ್ರಮಾಣದಲ್ಲಿ ವಾಲಿದ್ದರು.
►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ!
ಆದರೆ ಆ ನಂತರ ಈ ವಿಡಿಯೋ ಹಿಡಿದುಕೊಂಡು ಬಿಜೆಪಿ ಐಟಿ ಸೆಲ್‌ನವರು ಡಿಕೆಶಿಯವರು ಕುಡಿದು ವಾಲುತ್ತಾ ನಡೆಯುತ್ತಿದ್ದಾರೆ ಎಂಬಂತೆ ಸಿನೇಮಾ ಹಾಡನ್ನು ಸೇರಿಸಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡತೊಡಗಿದ್ದರು.