Advertisement

ಮಾರಿಕೊಂಡ, ಮನುವಾದಿ ಮಾಧ್ಯಮಗಳಲ್ಲಿ ಪ್ರಕಟವಾಗದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಯ ವಿಡಿಯೋ

Advertisement

ಇತ್ತೀಚೆಗೆ ರಾಯಚೂರುವಿನಲ್ಲಿ ಗಣರಾಜ್ಯೋತ್ಸವ (ಜನವರಿ 26) ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ತೆರವುಗೊಳಿಸಿದ ಆರೋಪ ಎದುರಿಸುತ್ತಿದ್ದ ಅಲ್ಲಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಪಾಟೀಲ ಅವರನ್ನು ವಜಾ ಮಾಡಬೇಕು ಒತ್ತಾಯಿಸಿ ಇತ್ತೀಚೆಗೆ ಹಲವು ದಲಿತಪರ ಸಂಘಟನೆಗಳು, ಪ್ರಗತಿಪರ ಚಿಂತಕರುಗಳು, ಜನಪರ ಹೋರಾಟಗಾರರು, ಬುದ್ಧಿಜೀವಿಗಳು ಬೆಂಗಳೂರಿನಲ್ಲಿ ನಡೆಸಿದ್ದ ಬಾರೀ ಪ್ರತಿಭಟನಾ ಮೆರವಣಿಗೆಯ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದೇ ಇರುವ ಕೆಲವು ಸ್ಥಾಪಿತ ಹಿತಾಸಕ್ತ ಅಥವಾ ಆಳುವವರಿಗೆ ಮಾರಿ ಕೊಂಡಿರುವ ಸುದ್ದಿ ಮಾಧ್ಯಮಗಳ ವಿರುದ್ಧ ಇದೀಗ ಸಾರ್ವಜನಿಕವಾಗಿ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೊಂದು ವರದಿಯಾಗಿದೆ.   ಮಾರಿಕೊಂಡ, ಮನುವಾದಿ ಮಾಧ್ಯಮಗಳಲ್ಲಿ ಪ್ರಕಟವಾಗದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. (ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ನಡೆದ ಮನುವಾದಿಗಳ ವಿರುದ್ಧದ ಪ್ರತಿಭಟನೆ ಇತಿಹಾಸದಲ್ಲಿ ದಾಖಲಾಯಿತು. ಇದರಿಂದ ರಾಜ್ಯದ ಹಾಗೂ ಕೇಂದ್ರದ ಮನುವಾದಿ ಸರ್ಕಾರಗಳ ಜಂಘಾಬಲವೇ ಉಡುಗಿ ಹೋಗಿರುವುದಂತೂ ಸತ್ಯ.) ವರದಿಗಳ ಪ್ರಕಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಎಂಬಲ್ಲಿ ಅಳವಡಿಕೆ ಮಾಡಲ್ಪಟ್ಟಿರುವ ಬ್ಯಾನರ್‌ಗಳಲ್ಲಿ 'ದಲಿತ ಪರ ಹೋರಾಟಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡದ ದಲಿತ ವಿರೋಧಿ ಕನ್ನಡ ಸುದ್ದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ,  ದಲಿತರೆಲ್ಲರೂ ಕನ್ನಡದ ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿ' ಎಂದು ಮುದ್ರಿಸಲಾಗಿದೆ. ಹಾಗೆಯೇ, ಈ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣದಲ್ಲಿ #BoycottManuwadiMedia ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನ ಕೂಡಾ ಆರಂಭಗೊಂಡಿದ್ದು, ಫೇಸ್ ಬುಕ್ ಹಾಗೂ ಟ್ವಟಿರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. 

Advertisement
Advertisement
Recent Posts
Advertisement