Advertisement

ಓವೈಸಿಯ ಎಂಐಎಂ ಹಾಗೂ ಎಸ್‌ಡಿಪಿಐಗಳನ್ನು ಬಿಜೆಪಿಯೇ ಸಾಕುತ್ತಿದೆ. ಇದು ಭವಿಷ್ಯದ ಭಾರತಕ್ಕೆ ಅಪಾಯಕಾರಿ: ಪ್ರಮೋದ್ ಮುತಾಲಿಕ್ ಹೇಳಿಕೆಯ ವಿಡಿಯೋ

Advertisement

'ಕಾಂಗ್ರೆಸ್ ನ ಓಟುಗಳನ್ನು ಓವೈಸಿಯ MIM ಮತ್ತು SDPI, PFI, CFI ಗಳು ಒಡೆಯುತ್ತವೆ. ಆ ಮೂಲಕ ತಾವು ಸುಲಭವಾಗಿ ಅಧಿಕಾರಕ್ಕೆ ಬರಬಹುದು ಎಂಬ ದುರುದ್ದೇಶದಿಂದ ಬಿಜೆಪಿ ಈ ಮೇಲಿನ ರಾಕ್ಷಸಿ ಸಂಘಟನೆಗಳನ್ನು ಬೆಳೆಸ್ತಾ ಇದೆ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿಯಾದುದು' ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಈ ಕುರಿತು ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ; ಪ್ರಮೋದ್ ಮುತಾಲಿಕ್ ರವರು ಈ ಹಿಂದೆ ಸಿಂದಗಿಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ ಘಟನೆಯಲ್ಲಿ ಬಿಜೆಪಿಯ ಕೈವಾಡವಿದೆ ಎಂದು ನೇರವಾಗಿ ಆರೋಪಿಸುವ ಮೂಲಕ ಮತ್ತಿತರ ಹಲವಾರು ಬಾರಿ ಬಿಜೆಪಿಯ ಅಸಲಿಯತ್ತನ್ನು ಯಾ ದೇಶದ್ರೋಹದ ಮುಖವಾಡವನ್ನು ಬಯಲುಗೊಳಿಸಿದ್ದರು. ಇದೀಗ ಈ ಮೇಲಿನ ಹೇಳಿಕೆಯ ಮೂಲಕ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯ ಅಡಳಿತವೇ ಇದ್ದರೂ ಕೂಡ ಅದೇಕೆ ಎಸ್‌ಡಿಪಿಐ, ಪಿಎಫ್‌ಐ ಗಳನ್ನು ನಿಷೇಧ ಮಾಡುತ್ತಿಲ್ಲ ಎಂಬ ಜನಸಾಮಾನ್ಯರ ಪ್ರಶ್ನೆಗೆ ಸಮಂಜಸವಾದ ಉತ್ತರ ದೊರೆತಂತಾಗಿದೆ. ವಿಡಿಯೋ ಕೃಪೆ: ನಿಖರ ನ್ಯೂಸ್

Advertisement
Advertisement
Recent Posts
Advertisement