ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ 89 ಮಂದಿ ಕಾಶ್ಮೀರಿ ಪಂಡಿತರಿಗಾಗಿ ಬಿಜೆಪಿಗರು ಮರುಗುತ್ತಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಆ ಹಿಂಸಾಚಾರದಲ್ಲಿ ಸಾವಿರಾರು ಮಂದಿ ದಲಿತರು ಮತ್ತು ಮುಸ್ಲಿಂ ಸಮುದಾಯದ ಜನರು ಸಾವನ್ನಪ್ಪಿದ್ದಾರೆ. ಅರೆ!.. ಕಾಶ್ಮೀರಿ ಪಂಡಿತರ ಸಾವಿಗೆ ಇರುವ ಬೆಲೆ ಅವರ ಜೊತೆಯಲ್ಲೇ ಬದುಕಿದ್ದು ಅವರಂತೆಯೇ ಅಲ್ಲಿ ಸತ್ತ ದಲಿತರು ಮತ್ತು ಮುಸಲ್ಮಾನರಿಗೆ ಇಲ್ಲ ಎಂದರೆ ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ಎಂದು ಅರ್ಥವಾಗುತ್ತಿಲ್ಲ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಶಿಕ್ಷಣ ಪಡೆಯಲು ಸಹಾಯ ಮಾಡಿ ಎಂದರೆ ಹಿಜಾಬ್ ಗಲಾಟೆ ಎಬ್ಬಿಸಿ ಶಾಲಾ ವಾತಾವರಣ ಹಾಳು ಮಾಡುತ್ತಾರೆ, ಈಗ ಕಾಶ್ಮೀರಿ ಪಂಡಿತರಿಗೆ ಮಾತ್ರ ನೋವಾಯಿತು ಎಂಬಂತೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಬದುಕಿಗೆ ಒಂದಷ್ಟು ಸಹಾಯ ಮಾಡ್ರಯ್ಯ ಅಂದರೆ, ಆ ಸಿನಿಮಾ ನೋಡಿ ಈ ಸಿನಿಮಾ ನೋಡಿ ಎನ್ನುವ ಇವರಿಗೆ ಮನುಷ್ಯರಾಗುವ ಯಾವುದೇ ಅರ್ಹತೆ ಇಲ್ಲ! ಎಂದವರು ಕಿಡಿ ಕಾರಿದ್ದಾರೆ.