"ನೀವಿಲ್ಲಿ ಬಂದು ಬಾಷಣ ಬಿಗಿಯಬೇಡಿ. ಇಲ್ಲಿರುವ ವಿಧ್ಯಾರ್ಥಿಗಳಿಗೆ ಊಟ, ವಸತಿ ಸಹಿತ ರಕ್ಷಣೆ ನೀಡಿದ್ದು ನಾವು ಹೊರತೂ ನಿಮ್ಮ ಸರ್ಕಾರವಲ್ಲ" ಎಂದು ಮೋದಿ ಸರ್ಕಾರದ ಸಚಿವ ಜ್ಯೋತಿರಾದಿತ್ಯ ಸಿಂದಿಯಾರವರಿಗೆ ವಿದ್ಯಾರ್ಥಿಗಳ ಎದುರಿನಲ್ಲೆ ರೊಮೆನಿಯಾದ ಮೇಯರ್ ಹೇಳಿರುವ ಹಾಗೂ ಆ ಮಾತಿಗೆ ವಿಧ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋ ನೋಡಿ:
ಮೋದಿ ಸರ್ಕಾರಕ್ಕೆ ಬಕೆಟ್ ಹಿಡಿಯಲು ಹೋಗಿ, ವಿಧ್ಯಾರ್ಥಿಗಳಿಗೆ ಆಶ್ರಯ ನೀಡಿದ್ದ ರೊಮೇನಿಯಾದ ಮೇಯರ್ ರಿಂದ "ನೀವಿಲ್ಲಿ ಬಂದು ಬಾಷಣ ಬಿಗಿಯಬೇಡಿ" ಎಂದು ಛೀಮಾರಿ ಹಾಕಿಸಿಕೊಂಡ ಕೇಂದ್ರ ಸಚಿವ ಸಿಂದಿಯಾ pic.twitter.com/T7uD38uZor— chandrashekar shetty (@KpurShetty) March 4, 2022
ಆ ವಿಡಿಯೋದಲ್ಲಿ ಸಚಿವ ಸಿಂದಿಯಾರವರು "ಬಾರೀ ಪ್ರಯತ್ನದ ಬಳಿಕ ಮೋದಿ ಸರ್ಕಾರ ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದಿದೆ" ಎಂಬಂತೆ ಬಿಂಬಿಸಲು ಹೊರಟಾಗ ಅಲ್ಲಿಯೇ ಇದ್ದ ರೊಮೆನಿಯಾದ ಮೇಯರ್ ಸಿಟ್ಟಿಗೆದ್ದು ಸಿಂದಿಯಾ ರವರ ಮಾತನ್ನು ಅರ್ಧಕ್ಕೆ ತಡೆದು ಮೇಲಿನ ಮಾತನ್ನು ಹೇಳಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಅಪಾಯದಲ್ಲಿ ಸಿಲುಕಿಹಾಕಿಕೊಂಡಿರುವ ವಿಧ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬಂದು ರೈಲಿನ ಮೂಲಕ ಉಕ್ರೇನ್‌ನ ನೆರೆ ದೇಶಗಳ ಗಡಿಯನ್ನು ತಲುಪಿ ಊಟ ಮತ್ತು ವಿಶ್ರಾಂತಿಗಾಗಿ ಅಲ್ಲಿನ ಸ್ಥಳೀಯರ ಆಶ್ರಯ ಪಡೆದಿದ್ದಾರೆ.
ರಷ್ಯಾ, ಉಕ್ರೇನ್ ಯುದ್ದ ತಾರಕ್ಕೇರಿದ ನಂತರ ಅಂದರೆ ಮೊನ್ನೆ ಸೋಮವಾರ ಕೇಂದ್ರ ಸರ್ಕಾರ ಉಕ್ರೇನ್ ದೇಶದಿಂದ ನೆರೆಯ ದೇಶಕ್ಕೆ ನಿರಾಶ್ರಿತರಾಗಿ ಬರುವ ಭಾರತೀಯರನ್ನು ಗುರ್ತಿಸುವ, ಅವರಿಗೆ ಊಟ, ವಸತಿ ಕಲ್ಪಿಸುವ ಹಾಗೂ ಭಾರತಕ್ಕೆ ವಾಪಸು ಕರೆತರುವ ಉದ್ದೇಶದಿಂದ "ಅಪರೇಷನ್ ಗಂಗಾ" ಯೋಜನೆ ಘೋಷಿಸಿ ನಾಲ್ವರು ಕೇಂದ್ರ ಸಚಿವರನ್ನು ಉಕ್ರೇನ್ ನ ಗಡಿಯ ದೇಶಗಳಿಗೆ ಕಳುಹಿಸಿತ್ತು. ಅದರ ಪ್ರಕಾರ ಜ್ಯೋತಿರಾದಿತ್ಯ ಸಿಂದಿಯಾ ರೊಮೇನಿಯಾ ಹಾಗೂ ಮಾಲ್ಡೋವಾ ದೇಶಗಳ ಉಸ್ತುವಾರಿ ವಹಿಸಿದ್ದಾರೆ.
ಕಾನೂನು ಸಚಿವ ಕಿರಣ್ ರಿಜಿಜು ಅವರು ಸ್ಲೋವಾಕಿಯಾ ದೇಶದ ಜವಾಬ್ದಾರಿ ವಹಿಸಿದ್ದಾರೆ. ಹಂಗೆರಿ ದೇಶದಲ್ಲಿ ನಿರಾಶ್ರಿತರ ನಿರ್ವಹಣೆ ಹರ್‌ದೀಪ್ ಸಿಂಗ್ ಪುರಿ ಅವರು ಹೊಣೆ ಹೊತ್ತಿದ್ದಾರೆ ಹಾಗೂ ಮತ್ತೊಬ್ಬ ಹಿರಿಯ ಸಚಿವ ವಿಕೆ ಸಿಂಗ್ ಅವರು ಪೋಲೆಂಡ್ ದೇಶದಲ್ಲಿ ನಿರಾಶ್ರಿತ ವಿಧ್ಯಾರ್ಥಿಗಳ ಜವಾಬ್ದಾರಿ ಹೊತ್ತಿದ್ದಾರೆ.
ವರದಿಗಳ ಪ್ರಕಾರ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸುಮಾರು 20ಸಾವಿರ ಭಾರತೀಯ ನಾಗರಿಕರು ಸೇರಿದಂತೆ ವಿಧ್ಯಾರ್ಥಿಗಳು ಇದ್ದಾರೆ ಎನ್ನಲಾಗಿದೆಯಾದರೂ, ಈ ತನಕ ಕೇವಲ 1,156 ಭಾರತೀಯರು ಮಾತ್ರವೇ ಉಕ್ರೇನ್‌ನಿಂದ ತವರಿಗೆ ಬಂದಿಳಿದಿದ್ದಾರೆ ಎನ್ನಲಾಗಿದೆ. ಹಾಗೆಯೇ, ಇಷ್ಟರ ತನಕ ಅಪಾಯದ ವಲಯದಿಂದ ಪಾರಾಗಿರುವ ಬಹುಪಾಲು ವಿಧ್ಯಾರ್ಥಿಗಳು ಉಕ್ರೇನ್ ನ ವೆಸ್ಟರ್ನ್ ವಲಯದ ಗಡಿಯ ಸಮೀಪದಲ್ಲಿದ್ದ ವಿಧ್ಯಾರ್ಥಿಗಳು ಎನ್ನಲಾಗಿದ್ದು ದೂರದ ಈಸ್ಟರ್ನ್ ವಲಯದ ಭಾರತೀಯ ವಿಧ್ಯಾರ್ಥಿಗಳು, ನಾಗರಿಕರ ಪರಿಸ್ಥಿತಿ ಏನಾಗಿದೆ ಎಂಬ ಕುರಿತು ಈ ತನಕ ವರದಿಯಾಗಿಲ್ಲ. ಈ ನಡುವೆ ರಷ್ಯನ್ ಸೈನಿಕರು ಹಲವು ಭಾರತೀಯ ವಿಧ್ಯಾರ್ಥಿನಿಯನ್ನು ಅಪಹರಿಸಿದ್ದಾರೆ, ಅದನ್ನು ವಿರೋಧಿಸಿದ ಸಹಪಾಠಿ ವಿಧ್ಯಾರ್ಥಿಗಳನ್ನು ಗನ್‌ಪಾಯಿಂಟ್‌ನಿಂದ ಧಮನಗೊಳಿಸಿದ್ದಾರೆ ಎಂದು ಉಕ್ರೇನ್ ನಲ್ಲಿ ಅಪಾಯದಲ್ಲಿ ಸಿಲುಕಿಕೊಂಡಿರುವ ವಿಧ್ಯಾರ್ಥಿನಿಯೊಬ್ಬಳು ಹೇಳಿರುವ ವಿಡಿಯೋ ಒಂದು ಮೂರು ದಿನಗಳ ಹಿಂದೆ ವೈರಲ್ ಆಗಿತ್ತು.
ಪೆಬ್ರವರಿ 26ರಂದು ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಆರಂಭವಾದ ದಿನದಿಂದ ಈ ತನಕ 9ಸಾವಿರ ರಷ್ಯನ್ ಸೈನಿಕರು ಮೃತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶದ ಮೂಲಕ ಹೇಳಿರುವ ಕುರಿತು ವರದಿಯಾಗಿದೆಯಾದರೂ ಅದೇ ಸಮಯದಲ್ಲಿ ಉಕ್ರೇನ್ ಸೈನಿಕರ ಮತ್ತು ನಾಗರಿಕರ ಒಟ್ಟು ಸಾವುಗಳ ಕುರಿತು ಅಧಿಕೃತವಾಗಿ ಯಾವುದೇ ವರದಿಯಾಗಿಲ್ಲ. ಈ ಸಂಧರ್ಭದಲ್ಲಿ ಕರ್ನಾಟಕದ ಚಳಗೇರಿ ಗ್ರಾಮದ ವಿದ್ಯಾರ್ಥಿ, ಇಪ್ಪತ್ತೊಂದು ವರ್ಷದ ನವೀನ್ ಶೇಖರಪ್ಪ ಗ್ಯಾನಗೌಡರ್ ಉಕ್ರೇನ್‌ನ ಖಾರ್ಕಿವ್‌ನ ಸೂಪರ್‌ಮಾರ್ಕೆಟ್‌ನಲ್ಲಿ ಆಹಾರ ಖರೀದಿಸಲು ಸರದಿಯಲ್ಲಿ ನಿಂತಿದ್ದಾಗ ರಷ್ಯಾದ ಶೆಲ್ ದಾಳಿ ನಡೆದು ಮೃತಪಟ್ಟ ಘಟನೆಯನ್ನು ನೆನಪಿಸಿಕೊಳ್ಳಬಹುದಾಗಿದೆ.
ಇದೀಗ ಬಂದ ಸುದ್ದಿ; ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಹಂಗೇರಿ, ಪೋಲೆಂಡ್ ದೇಶಗಳ ಮೂಲಕ ಕಳೆದ 24ಗಂಟೆಗಳಲ್ಲಿ 3 ಸಾವಿರ ಭಾರತೀಯರನ್ನು ವಾಪಾಸು ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಂದರ್ ಬಗಚಿ ಹೇಳಿದ್ದಾರೆ.