Advertisement

ಬೆಳ್ತಂಗಡಿ; ಭಜರಂಗದಳ ಮುಖಂಡನಿಂದ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೆ1ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ ಸಿದ್ದರಾಮಯ್ಯ.

Advertisement

ಭಜರಂಗದಳ ಕಾರ್ಯಕರ್ತ ಕೃಷ್ಣ ಎಂಬಾತನಿಂದ ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂದು ಭೇಟಿ ನೀಡಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂ.ಗಳನ್ನು ಹಸ್ತಾಂತರಿಸಿದರು. ಕೊಲೆಗೀಡಾದ ಯುವಕನ ಕುಟುಂಬಕ್ಕೆ ತಕ್ಷಣವೇ ರಾಜ್ಯ ಸರ್ಕಾರ ರೂ. 25 ಲಕ್ಷ ಪರಿಹಾರ ನೀಡಬೇಕು, ಈ ವಿಚಾರವನ್ನು ಸದನದಲ್ಲಿ ಕೂಡ ಪ್ರಸ್ತಾಪ ಮಾಡುತ್ತೇನೆ. ದಿನೇಶ್ ಕುಟುಂಬದವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಕೊಲೆ ಕೃತ್ಯದ ಸಿ.ಸಿ ಟಿವಿ ವಿಡಿಯೋ:

Advertisement
Advertisement
Recent Posts
Advertisement