'ಯುದ್ಧಪೀಡಿತ ಉಕ್ರೇನ್ ನಿಂದ ರಕ್ಷಣೆ ಅರಸಿ ಕಾಲ್ನಡಿಗೆಯಲ್ಲಿ ನೆರೆರಾಷ್ಟ್ರಗಳಾದ ರೋಮೇನಿಯಾ, ಪೋಲೆಂಡ್, ಹಂಗೇರಿ ಮುಂತಾದ ರಾಷ್ಟ್ರಗಳಿಗೆ ತೆರಳುತ್ತಿರುವ ಹಲವು ಭಾರತೀಯ ವಿಧ್ಯಾರ್ಥಿನಿಯರನ್ನು ರಷ್ಯನ್ ಸೈನಿಕರು ಅಪಹರಿಸಿದ್ದಾರೆ ಆ ವಿಧ್ಯಾರ್ಥಿನಿಯರು ಇದೀಗ ಎಲ್ಲಿದ್ದಾರೆಂದು ಗೊತ್ತಿಲ್ಲ' ಎಂಬ ಸ್ಪೋಟಕ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡು ಭಾರತದ ಪ್ರಧಾನಿ ಮೋದಿಯವರಲ್ಲಿ ವಿನಂತಿಸಿ ವಿಡಿಯೋ ಮಾಡಿರುವ ಉಕ್ರೇನ್ ನಲ್ಲಿರುವ ಲಕ್ನೋ ಮೂಲದ ಗಿಢ್ವಾಮಿಶ್ರ ಎಂಬ ಹೆಸರಿನ ವಿಧ್ಯಾರ್ಥಿನಿ 'ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಣೆ ಕೊಟ್ಟು ಕರೆದುಕೊಂಡು ಹೋಗಿ' ಎಂದು ಕೈಮುಗಿದು, ಕಣ್ಣೀರಿಟ್ಟು ಕೇಳಿಕೊಂಡಿದ್ದಾರೆ. ಈ ವಿಡಿಯೋ ವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಅತ್ಯಂತ ತ್ವರಿತವಾಗಿ ಭಾರತೀಯ ವಿಧ್ಯಾರ್ಥಿನಿಯರನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಟ್ವೀಟ್‌ನ ವಿವರಗಳು ಇಂತಿವೆ:
'ಪ್ರಧಾನಿ ನರೇಂದ್ರ ಮೋದಿಯವರೆ, ಡಾ. ಎಸ್. ಜೈಶಂಕರ್ ರವರೆ,
ಉಕ್ರೇನ್‌ನಿಂದ ಬಂದಿರುವ ಭಾರತೀಯ ವಿದ್ಯಾರ್ಥಿನಿಯ ಈ ವೀಡಿಯೋ ತುಂಬಾ ಆತಂಕಕಾರಿಯಾಗಿವೆ. ಏನನ್ನಾದರೂ ಮಾಡಿ ಸಿಲುಕಿಕೊಂಡಿರುವ ಈ ಮಕ್ಕಳನ್ನು ಭಾರತಕ್ಕೆ ಕರೆತನ್ನಿ. ಇಡೀ ರಾಷ್ಟ್ರವು ಈ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳೊಂದಿಗೆ ಇದೆ ಹೇಗಾದರೂ ಅವರನ್ನು ಸುರಕ್ಷಿತವಾಗಿ ಮರಳಿ ತರಲು ಸರ್ಕಾರ ಪ್ರಯತ್ನಿಸಬೇಕು' ಎಂದವರು ವಿನಂತಿಸಿದ್ದಾರೆ.