'ಭಯದ ಮಗಳೇ ಭಕ್ತಿ'. ಪುಂಡರಿಗೆ ಕಾನೂನಿನ ಭಯ ಇಲ್ಲದಿದ್ದಾಗ ಮಾತ್ರ ಹುಬ್ಬಳಿಯಂತಹ ಘಟನೆ ನಡೆಯುತ್ತವೆ. ಹುಬ್ಬಳಿ ಘಟನೆ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ. ಕಾನೂನು ಸುವ್ಯವಸ್ಥೆ ಮೇಲೆ ಈ ಸರ್ಕಾರಕ್ಕೆ ಹಿಡಿತವೇ ಇಲ್ಲ. ಎಡಬಿಡಂಗಿ ವರ್ತನೆಯ ಗೃಹ ಮಂತ್ರಿ ಹಾಗೂ ಕೋಲೆ ಬಸವಣ್ಣ ರೂಪದ ಮುಖ್ಯಮಂತ್ರಿಯಿಂದಾಗಿ ರಾಜ್ಯ ಅರಾಜಕತೆಯ ಗೂಡಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.
ರಾಜ್ಯದ ಶಾಂತಿ ಮತ್ತು ಸಾಮರಸ್ಯ ಕದಡಲು ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಹೊಂಚು ಹಾಕುತ್ತಿವೆ. ರಾಜಕೀಯ ಲಾಭಕ್ಕಾಗಿ ಈ ಸರ್ಕಾರ ಕೂಡ ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈ ಜೋಡಿಸಿ ಗಲಭೆಯನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ.. ಈ ಸತ್ಯವನ್ನು ಎಲ್ಲಾ ಕೋಮಿನ ಯುವಕರು ಅರಿಯಬೇಕು. ಯುವಕರು ತಾಳ್ಮೆ ಹಾಗೂ ಸಹನೆಯಿಂದ ವರ್ತಿಸಲಿ ಎಂದವರು ಕರೆನೀಡಿದ್ದಾರೆ.