ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ, ತಲೆಮರೆಸಿ ಕೊಂಡಿರುವ ಪಿಎಸ್ಐ ನೇಮಕಾತಿಯ ಬಹುಕೋಟಿ ಹಗರಣದ ರುವಾರಿ ತಮ್ಮದೇ ಪಕ್ಷದ ನಾಯಕಿ ದಿವ್ಯಾಹಾಗರಗಿಯನ್ನು ಬಂಧಿಸದೆ ಹಗರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಎಳೆದು ತರುವ ವ್ಯರ್ಥನಾಟಕ ಮಾಡುತ್ತಿದೆ. ಆಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಹಗರಣದ ಕಿಂಗ್ ಪಿನ್ ಎನ್ನಲಾದವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿ ವಾಸ್ತವ ಸತ್ಯ ಬಾಯಿ ಬಿಡದಂತೆ ನೋಡಿಕೊಳ್ಳುತ್ತಿದೆ.
ಆದರೆ ಭ್ರಷ್ಟಾಚಾರವನ್ನೆ ರಾಜಕೀಯ ವಾಗಿಸಿಕೊಂಡ ಬಿಜೆಪಿಯ ಕೆಲವೊಂದು ತಥಾಕಥಿತ ನಾಯಕ ರೆನಿಸಿಕೊಂಡವರಿಗೆ ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಇಲ್ಲ. ತಮ್ಮ ಅಪ್ರಬುದ್ಧ ಮನಸ್ಥಿತಿಯ ಅಪಸವ್ಯದ ಹೇಳಿಕೆಗಳ ಮೂಲಕ ತಮ್ಮ ಪಕ್ಷದ ಶವ ಪೆಟ್ಟಿಗೆಗೆ ತಾವೇ ಅಂತಿಮ ಮೊಳೆ ಹೊಡೆಯುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.