ಪಿಎಸ್‍ಐ ಹಗರಣದಲ್ಲಿ ಎಷ್ಟು ಮಂದಿಗೆ ನೋಟಿಸ್ ನೀಡಲಾಗಿದೆ? ಅವರು ಏನೆಂದು ಉತ್ತರ ಕೊಟ್ಟಿದ್ದಾರೆ? ಯಾವೆಲ್ಲ ಪರೀಕ್ಷಾ ಕೇಂದ್ರಗಳ ಬಗ್ಗೆ ತನಿಖೆಯಾಗಿದೆ? ಬಂಧಿತರು ನೀಡಿರುವ ಹೇಳಿಕೆಗಳೇನು? ಎಷ್ಟು ಮಂದಿಯನ್ನು ಬಂಧಿಸದೆ ಬಿಟ್ಟು ಕಳುಹಿಸಲಾಗಿದೆ? ಎಂಬೆಲ್ಲಾ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಪಿಎಸ್‍ಐ ಹಗರಣದ ಕುರಿತು ಮಾತನಾಡಲು ಪ್ರಿಯಾಂಕ್ ಖರ್ಗೆ ಅವರಿಗೆ ಪಕ್ಷ ಜವಾಬ್ದಾರಿ ವಹಿಸಿದೆ. ಅವರು ಹೇಳುತ್ತಿರುವ ಎಲ್ಲ ವಿಷಯಗಳು ಸಾರ್ವಜನಿಕವಾಗಿ ಲಭ್ಯವಿದೆ. ಅದನ್ನು ತನಿಖೆ ಮಾಡುವ ಬದಲು ನಮಗೆ ನೋಟಿಸ್ ಕೊಟ್ಟು ದಾಖಲೆ ಕೇಳುತ್ತಿರುವುದು ಪೂಲೀಸರ ಅಸಮರ್ಥತೆಯನ್ನು ಸಾಬೀತುಪಡಿಸಿದೆ ಎಂದವರು ಹೇಳಿದರು.
ಈ ಹಿಂದೆ ವಿಧಾನಸಭೆ ಮತ್ತು ಪರಿಷತ್‍ನಲ್ಲಿ ಪಿಎಸ್‍ಐ ಹಗರಣದ ಬಗ್ಗೆ ಪ್ರಶ್ನೆ ಕೇಳಿದಾಗ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಏನು ನಡೆದಿಲ್ಲ ಎಂದ ಮೇಲೆ ಎಫ್‍ಐಆರ್ ಹಾಕಿರುವುದು ಏಕೆ? 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವುದು ಏಕೆ? ಬಿಜೆಪಿ ಸರ್ಕಾರವು ನೋಟಿಸ್ ಕೊಡುವ ಸಂಪ್ರದಾಯವನ್ನು ಶುರು ಮಾಡಿದೆ. ಆದರೆ,
ಭ್ರಷ್ಟಾಚಾರದ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ಎಚ್.ವಿಶ್ವನಾಥ್ ಅವರಿಗೆ ನೋಟಿಸ್ ನೀಡದೆ, ಪ್ರತಿಪಕ್ಷದ ಮುಖಂಡರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ನೋಟಿಸ್ ನೀಡಿರುವುದು ಏಕೆ ಎಂದವರು ಪ್ರಶ್ನಿಸಿದ್ದಾರೆ.