ಪಿಎಸ್‌ಐ ಹಗರಣದಲ್ಲಿ ಜ್ಞಾನೇಂದ್ರ ಪರ ಈಗ ವಕಾಲತ್ತು ವಹಿಸಿಕೊಂಡು ಬಂದಿರುವ ಕುಮಾರ ಸ್ವಾಮಿ ರಾಜಕೀಯ ಕ್ಷೇತ್ರದ 'ದ್ವಿಮುಖ ನೀತಿಯ ಅಪ್ರತಿಮ ಸಂಚುಗಾರ'. ಪಿಎಸ್‌ಐ ನೇಮಕಾತಿ ಪಟ್ಟಿಯನ್ನು ರದ್ದು ಪಡಿಸಿ ಎಂದು ಮೊದಲು ಊಳಿಟ್ಟ ಕುಮಾರ ಸ್ವಾಮಿ, ಈಗ ಮರು ಪರೀಕ್ಷೆಗೆ ವಿರೋಧಿಸುತ್ತಿದ್ದಾರೆ. ಊಸರವಳ್ಳಿ ರೀತಿ ಬಣ್ಣ ಬದಲಾಯಿಸುವ ಕುಮಾರ ಸ್ವಾಮಿ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಗಳಿಗೆಗೊಂದು ಮಾತನಾಡುತ್ತಾ..ತಮ್ಮ ನಿಲುವಿಗೆ ತಾವೇ ಬದ್ಧರಾಗದ, ಒಮ್ಮೊಮ್ಮೆ ಕ್ಷಣ ಚಿತ್ತ-ಕ್ಷಣ ಪಿತ್ತ ಎಂಬಂತೆ ವರ್ತಿಸುವ ಕುಮಾರ ಸ್ವಾಮಿ ಕನ್‌ಫ್ಯೂಷನ್ ಗಿರಾಕಿ. ದಿಢೀರ್ ಮೊಸಳೆ ಕಣ್ಣೀರಿನ ಸೃಷ್ಟಿಕರ್ತ ಕುಮಾರ ಸ್ವಾಮಿಯವರು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಗೃಹ ಸಚಿವರ ಪರ ಬ್ಯಾಟಿಂಗ್ ಮಾಡುತ್ತಿರುವ ಉದ್ದೇಶ ತಿಳಿಸಲಿ. ಅಂಗೈ ಹುಣ್ಣಿಗೆ ನಾನ್ಯಾಕೆ ದಾಖಲೆ ಕೊಡಲಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು.