Homepageಉಡುಪಿಮೂಡುಬಿದಿರೆ ಪತ್ರಕರ್ತರ ಸಂಘಕ್ಕೆ "ಬೇರೆಯೇ ಮಾತು" ಪುಸ್ತಕ ಹಸ್ತಾಂತರಿಸಿದ ಪದ್ಮಪ್ರಸಾದ್ ಜೈನ್ ಮೂಡುಬಿದಿರೆ ಪತ್ರಕರ್ತರ ಸಂಘಕ್ಕೆ "ಬೇರೆಯೇ ಮಾತು" ಪುಸ್ತಕ ಹಸ್ತಾಂತರಿಸಿದ ಪದ್ಮಪ್ರಸಾದ್ ಜೈನ್ Advertisement ಮುಂಗಾರು ಪತ್ರಿಕೆ ಸಂಪಾದಕರಾಗಿದ್ದ ವಡ್ಡರ್ಸೆ ರಘರಾಮ ಶೆಟ್ಟಿಯವರ ಸಂಪಾದಕೀಯ ಮತ್ತಿತರ ಬರಹಗಳ "ಬೇರೆಯೇ ಮಾತು" ಪುಸ್ತಕವನ್ನು ಇಂದು ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್ ಪದ್ಮಪ್ರಸಾದ್ ಜೈನ್ ರವರು ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೇಣುಗೋಪಾಲ ರವರಿಗೆ ಹಸ್ತಾಂತರಿಸಿದರು.ಕನ್ನಡ ಮೀಡಿಯಾ ಡಾಟ್ ಕಾಂ ಸುದ್ದಿ ಜಾಲತಾಣ ಇದರ ಪ್ರಥಮ ವರ್ಷದ ವರ್ಷಾಚರಣೆಯ ಅಂಗವಾಗಿ ಮೇ 15, ಆದಿತ್ಯವಾರದಂದು ಕುಂದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಬೇರೆಯೇ ಮಾತು" ಪುಸ್ತಕ ಬಿಡುಗಡೆಗೊಂಡಿತ್ತು.ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮಿನ್ ಮಟ್ಟು ಸಂಪಾದಿಸಿರುವ "ಬೇರೆಯೇ ಮಾತು" ಪುಸ್ತಕವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ಚಂದ್ರ ಶೆಟ್ಟಿಯವರು ಬಿಡುಗಡೆಗೊಳಿಸಿದ್ದರು.ಈ ಸಂಧರ್ಭದಲ್ಲಿ ಪುಸ್ತಕ ಪರಿಚಯವನ್ನು ದಿನೇಶ್ ಅಮಿನ್ ಮಟ್ಟುರವರು ನೇರವೇರಿಸಿದ್ದರೆ, ಖ್ಯಾತ ವಕೀಲ, ಜನಪರ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ವಡ್ಡರ್ಸೆ ನವೀನ್ ಶೆಟ್ಟಿ ಮತ್ತು ಕನ್ನಡ ಮೀಡಿಯಾ ಡಾಟ್ ಕಾಂ ಸಂಪಾದಕ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. Show Full Article Advertisement Next Read: ಭಗತ್ ಸಿಂಗ್, ಲಂಕೇಶ್ ಮತ್ತಿತರ ಪ್ರಗತಿಪರರ ಪಠ್ಯಗಳನ್ನು ಕೈಬಿಟ್ಟು ಹಲವು ಬಾರಿ ನಿಷೇಧಕ್ಕೊಳಗಾದ ಆರೆಸ್ಸೆಸ್ನ ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಸೇರಿಸಿದ ರಾಜ್ಯ ಸರ್ಕಾರ! » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ