Homepageರಾಜ್ಯಪಠ್ಯ ಪುಸ್ತಕ ಮರು ಪರಿಷ್ಕರಣೆ: ಸಾಹಿತಿಗಳು, ಕವಿಗಳು, ಹೋರಾಟಗಾರರು, ಪತ್ರಕರ್ತರು ಸೇರಿದಂತೆ 83 ಜನಪರ ಚಿಂತಕರಿಂದ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಪಠ್ಯ ಪುಸ್ತಕ ಮರು ಪರಿಷ್ಕರಣೆ: ಸಾಹಿತಿಗಳು, ಕವಿಗಳು, ಹೋರಾಟಗಾರರು, ಪತ್ರಕರ್ತರು ಸೇರಿದಂತೆ 83 ಜನಪರ ಚಿಂತಕರಿಂದ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ Advertisement ಶಿಕ್ಷಣ ಇಲಾಖೆಯು 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಸಮಾಜ ವಿಜ್ಞಾನ, ಭಾಷೆ ಮತ್ತು ಪರಿಸರ ವಿಜ್ಞಾನ ವಿಷಯಗಳ ರಾಜ್ಯ ಪಠ್ಯ ಪುಸ್ತಕಗಳಲ್ಲಿ ತಮಗೆ ಅನಿಸಿರುವ ‘ಗೊಂದಲಕ್ಕೆ ಎಡೆ ಮಾಡಿಕೊಡುವಂಥಹವು’ ಎಂದು ತಮಗೆತೋರಿದ ವಿಷಯಗಳನ್ನು ಪರಿಶೀಲಿಸಲು 15 ಸದಸ್ಯರ ಸಮಿತಿಯನ್ನು ನೇಮಕ ಮಾಡಿತ್ತು.ಈ ಹಿಂದೆ ಡಾ.ಬರಗೂರು ರಾಮಚಂದ್ರಪ್ಪರವರ ನೇತೃತ್ವದ ಪರಿಷ್ಕರಣ ಸಮಿತಿಯು ಮಾಡಿದ ಶಿಫಾರಸುಗಳನ್ನು ಪರಿಷ್ಕರಿಸ್ಕರಿಸಲು ನೇಮಿಸಿದ ಈ ಸಮಿತಿಯ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥರವರನ್ನು ನೇಮಕ ಮಾಡಲಾಗಿದೆ. ಶಿಕ್ಷಣ ತಜ್ಞರಲ್ಲದ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬಗೆಯಲ್ಲಿ ಸಕ್ರಿಯವಾಗಿ ಸಂಶೋಧನೆ ಮಾಡಿಲ್ಲದ ಚಕ್ರತೀರ್ಥ ಅವರನ್ನು ಯಾವ ಮಾನದಂಡದಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ? ಈ ಮುಖ್ಯ ಪ್ರಶ್ನೆಗೆ ಸಂಬಂಧಪಟ್ಟವರಿಂದ ಉತ್ತರವಿಲ್ಲ.ಇವರ ಅಧ್ಯಕ್ಷತೆಯ ಈ ಸಮಿತಿಯು ಆರಂಭದಲ್ಲಿಯೇ ಆರನೇ ತರಗತಿಯ ಸಮಾಜ ವಿಜ್ಞಾನದ ‘ಹೊಸ ಧರ್ಮಗಳ ಉದಯ’ ಎನ್ನುವ ಪಠ್ಯದಲ್ಲಿ ಜೈನ, ಬುದ್ಧದಮ್ಮಗಳ ಉದಯವಾದದ್ದು ಯಾಕೆ ಎಂದು ವಿವರಿಸುವ ಪಠ್ಯ ಭಾಗಗಳನ್ನು ತೆಗೆಯಬೇಕೆಂದು ಸೂಚನೆ ಮಾಡಿತ್ತು. ಮತ್ತು ಈ ಹೊಸ ಪರಿಷ್ಕರಣ ಸಮಿತಿಯ ಜವಾಬ್ದಾರಿ ಇದರಾಚೆಗೆ ಎಲ್ಲ ಪಠ್ಯ ಪುಸ್ತಕಗಳನ್ನು ಪರಿಶೀಲಿಸುವುದು ಎಂದೂ ಸಹ ವರದಿಯಾಗಿದೆ. ಅದರ ಮುಂದುವರೆದ ಭಾಗವಾಗಿ ಯಾವ ಮುನ್ಸೂಚನೆಯೂ ಇಲ್ಲದೇ , ಶಿಕ್ಷಣದ ಭಾಗೀದಾರರೊಂದಿಗೆ, ಶಿಕ್ಷಣ ತಜ್ಞರೊಂದಿಗೆ ̧ಸಮಾಲೋಚನೆ ನಡೆಸದೇ ಏಕಪಕ್ಷೀಯವಾಗಿ 10 ನೇ ತರಗತಿಯ ಪಠ್ಯಗಳಲ್ಲಿ ಅನೇಕ ಬದಲಾವಣೆ ಮಾಡಿದೆ. ಪಿ.ಲಂಕೇಶ್ ರ ‘ಮೃಗ ಮತ್ತು ಸುಂದರಿ’ ಡಾ.ಜಿ.ರಾಮಕೃಷ್ಣರ ‘ ̈ಭಗತಸಿಂಗ್’, ಸಾರಾಅಬೂಬಕರ್ ರವರ ‘ಯುದ್ಧ’ ಎ.ಎನ್ ಮೂರ್ತಿರಾಯರ ‘ವ್ಯಾಘ್ರ ಕಥೆ’, ಶಿವ ಕೋಟ್ಯಾಚಾರ್ಯರ 'ಸುಕುಮಾರ ಸ್ವಾಮಿ ಕಥೆ’ ಈಪಠ್ಯಗಳನ್ನು ಕೈ ಬಿಡಲಾಗಿದೆ. ನಂತರ ಪತ್ರಿಕೆಗಳಲ್ಲಿ ಭಗತ್ ಸಿಂಗ್ ಪಠ್ಯವನ್ನು ಕೈಬಿಟ್ಟಿಲ್ಲವೆಂದು ಹೇಳಿಕೆಗಳನ್ನು ನೀಡಲಾಗಿದೆ.ಹಾಗೆಯೇ ನಾರಾಯಣ ಗುರು, ಪೆರಿಯಾರ್ ರವರುಗಳ ಕುರಿತ ಪಠ್ಯವನ್ನೂ ಕೈ ಬಿಡಲಾಗಿದೆ, ಅಲ್ಲದೇ ಡಾ.ಅರವಿಂದ ಮಾಲಗತ್ತಿಯವರ ‘ಮರಳಿ ಮನೆಗೆ’ ಕೈಬಿಟ್ಟು ಎಸ್.ವಿ. ಪರಮೇಶ್ವರ ಭಟ್ಟರ ‘ಹೇಮಂತ’, ಎಲ್. ಬಸವರಾಜು ರವರ ‘ಊರು ಭಂಗ’ ಕೈ ಬಿಟ್ಟು ಗಜಾನನ ಶರ್ಮಾರವರ ‘ಚನ್ನ ಬೈರಾದೇವಿ’ ಗೋರೂರು ರಾಮಸ್ವಾಮಿ ಅಯ್ಯಂಗಾರ್ ‘ಕನ್ನಡ ಮೌಲ್ವಿ’ ಕೈ ಬಿಟ್ಟು ಎನ್.ರಂಗನಾಥ ಶರ್ಮಾರವರ ‘ರಾಮರಾಜ್ಯ’ ‘ಧರ್ಮ ಸಮದೃಷ್ಟಿ- ವಿಜಯ ನಗರ ಶಾಸನ’ ಪಾಠ ತೆಗೆದು ಎಸ್.ಎಲ್ ಬೈರಪ್ಪನವರ ‘ನಾನು ಕಂಡಂತೆ ಡಾ.ಬಿ.ಜಿ. ಎಲ್ ಸ್ವಾಮಿ’ ಕೆ.ನೀಲಾರವರ ಕೋಮು ಸಾಮರಸ್ಯದ ಪಠ್ಯ ‘ರಂಜಾನ್ ಸುರಕುಂಬ’ ತೆಗೆದು ಸುಶ್ರುತ ದೊಡ್ಡೇರಿಯವರ ‘ಹೊಳೆ ಬಾಗಿಲು’ ಸೇರಿಸಲಾಗಿದೆ. ಬಿ.ಟಿ.ಲಲಿತಾ ನಾಯಕ್ ರವರ ಪಠ್ಯಗಳನ್ನು ಕೈ ಬಿಡಲಾಗಿದೆ. ವಿವಾದ ಎದ್ದರೆ ತೋರಿ ತೋರಿಸಲೆಂಬಂತೆ ಕೆಲವು ಪ್ರಗತಿಪರರ ಪಠ್ಯಗಳನ್ನು ಇಟ್ಟುಕೊಂಡರೂ, ಕೈ ಬಿಟ್ಟ ಪಠ್ಯ ಮತ್ತು ಸೇರ್ಪಡೆ ಮಾಡಿದ ಪಠ್ಯಗಳನ್ನು ನೋಡಿದರೆ, ಸಮಾಜದಪುರೋಗಾಮಿ ಅಬಿವೃದ್ದಿಗೆ ಪೂರಕವಲ್ಲದ, ಸನಾತನವಾದವನ್ನು ಎತ್ತಿ ಹಿಡಿಯುವ, ಆರ್.ಎಸ್.ಎಸ್ ಸಿದ್ದಾಂತಕ್ಕೆ ಬದ್ಧವಾದ ಎಲ್ಲಅಂಶಗಳೂ ಸ್ಪಷ್ಟವಾಗಿ ಕಾಣುತ್ತಿವೆ. ಶಿಕ್ಷಣ ಸಚಿವರು ಇನ್ನೂ ಪಠ್ಯ ಪುಸ್ತಕಗಳ ಮುದ್ರಣವೇ ಆಗಿಲ್ಲ ಇವೆಲ್ಲ ವದಂತಿ ಎಂದು ನಿರಾಕರಿಸಿದ್ದಾರೆಂದೂ ವರದಿಗಳಿವೆ. ನಿಯಮದಂತೆ ಮೇ 25 ರೊಳಗೆ ಪಠ್ಯ ಪುಸ್ತಕ ಪೂರೈಕೆ ಆಗಬೇಕು, ಆದರೆ ಇನ್ನೂ ವಿವಾದವನ್ನೇ ಇಟ್ಟುಕೊಂಡಿರುವ ಸರಕಾರ ಪುಸ್ಕ ಪೂರೈಸಬಹುದೇ ಎಂಬ ಪ್ರಶ್ನೆಯೂ ಇದೆ. ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಹೆಡಗೆವಾರ್ ರವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’, ಬನ್ನಂಜೆ ಗೋವಿಂದಾಚಾರ್ಯರವರ ‘ಶುಕನಾಸನ ಉಪದೇಶ’ ಶತಾವಧಾನಿ ಗಣೇಶ್ ರವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ಶಿವಾನಂದ ಕಳವೆಯವರ ‘ ̧ಸ್ವದೇಶಿ ಸೂತ್ರದ ಸರಳ ಹಬ್ಬ’ ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ. ಹಾಗೆಯೇ ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವುದರ ಕಾರಣ ಮಾತ್ರ ಹೇಳದೇ ಹೋದರೂ ಅರ್ಥವಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಕಂಡು ಬರುತ್ತಿಲ್ಲ.ಪಠ್ಯ ಪುಸ್ತಕ ರಚನೆಯ ̧ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಮೌಲ್ಯಗಳು ನೀತಿಗಳು ಪ್ರಜಾತಾಂತ್ರಿಕತೆಗೆ ಪೂರಕವಾಗಿರಬೇಕು.1) ಸರಕಾರಗಳು ಬದಲಾದಂತೆ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಬದಲಾಯಿಸುವ ಈ ಪರಿಪಾಠ ಸರಿಯಲ್ಲ.2) ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯು ಸಂಪೂರ್ಣವಾಗಿ ಶಿಕ್ಷಣ ತಜ್ಞರ ಮೂಲಕ ಮಾತ್ರ ನಡೆಯಬೇಕು ಎನ್ನುವುದು ಇಲ್ಲಿನ ಪ್ರಜ್ಞಾವಂತರ ಆಶಯವಾಗಿದೆ. ಭಾರತದ ಚುನಾವಣಾ ಆಯೋಗದ ರೀತಿಯಲ್ಲಿ ಈ ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು ಮತ್ತು ಇದು ಸರಕಾರದ ನಿಯಂತ್ರಣದಲ್ಲಿ ಇರಬಾರದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.3) ಯಾವುದೇ ಪೂರ್ವಾಸೂಚನೆ ಇಲ್ಲದೇ ಶಿಕ್ಷಣ ತಜ್ಞರು,ವಿಷಯ ತಜ್ಞರುಗಳ ಜೊತೆ, ಹಿಂದಿನ ಪರಿಷ್ಕರಣಾ ಸಮಿತಿಯ ಅಧ್ಯಕ್ಷರ ಜೊತೆ ಸಮಾಲೋಚಿಸದೇ, ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರಮೂಲಕ ಪಠ್ಯಪುಸ್ತಕಗಳ ಬದಲಾವಣೆಗೆ ಮುಂದಾಗಿರುವುದು ನಮ್ಮ ಆತಂಕಕ್ಕೆ ಕಾರಣ.4) ಪಠ್ಯ ಪುಸ್ತಕ ರಚನಾ ಸಮಿತಿ, ಪರಿಷ್ಕರಣಾ ಸಮಿತಿಗಳಿಗೆ ಅದರದೇ ಆದ ಮಾನದಂಡಗಳಿರುತ್ತವೆ. ಅದರ ಅಧ್ಯಕ್ಷರು ಮತ್ತು ಸದಸ್ಯರು ಶಿಕ್ಷಣ ತಜ್ಞರಾಗಿರಬೇಕು. ಸಮಿತಿಯ ರಚನೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕು.ಮುಖ್ಯವಾಗಿ ಕರ್ನಾಟಕ ರಾಜ್ಯಕ್ಕೆ ̧ಸಂಭಂದಿಸಿದಂತೆ ಅದು ಕನ್ನಡದ ಅಸ್ಮಿತೆಗೆ ಪೂರಕವಾಗಿದ್ದು, ಇಲ್ಲಿನ ಬಹು ಸಂಸ್ಕೃತಿಯ ಆಶಯಗಳನ್ನು ಪ್ರತಿನಿಧಿಸುವಂತಿರಬೇಕು. ವೈಜ್ಞಾನಿಕ ಮನೋಧರ್ಮ, ವೈಚಾರಿಕತೆ,ಆಧುನಿಕ ಪ್ರಜ್ಞೆ,ಜಾತ್ಯಾತೀತ ತತ್ವಗಳಿಗೆ ಬದ್ಧವಾಗಿರಬೇಕು. ಸಾಮಾಜಿಕ ಸಾಮರಸ್ಯ, ನೈತಿಕತೆ,ವ್ಯಕ್ತಿತ್ವ ವಿಕಸನಕ್ಕೆ ಅನುವಾಗುವಂತೆಪಠ್ಯಪುಸ್ತಕಗಳನ್ನು ರೂಪಿಸಬೇಕು.5) ಸಂವಿಧಾನದ ಆಶಯಗಳ ಅನುಸಾರ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ ರೂಪಿಸಿದ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಬೇಕು.6) ಪಠ್ಯಗಳನ್ನು ಆಯ್ಕೆ ಮಾಡುವಾಗ ಲಿಂಗತ್ವ ಅಸಮಾನತೆ, ಪ್ರಾದೇಶಿಕ ಅಸಮಾನತೆಯನ್ನು ತಪ್ಪಿಸಬೇಕು. ಸಾಮಾಜಿಕ ನ್ಯಾಯದ ತತ್ವ ಪಾಲನೆಯಾಗಬೇಕು.7) ತರಗತಿಗಳ ಮಕ್ಕಳ ವಯೋಮಾನವನ್ನು ಆಧರಿಸಿ ಪಠ್ಯಗಳನ್ನು ಆಯ್ಕೆ ಮಾಡಬೇಕು.8) ಪಠ್ಯಕ್ರಮವು ಕನ್ನಡ ಭಾಷೆಯ ಎಲ್ಲಾ ಸಾಹಿತ್ಯ ಪರಂಪರೆಯನ್ನು ಪ್ರತಿನಿಧಿಸಬೇಕು.9) ಮುಖ್ಯವಾಗಿ ಮಕ್ಕಳ ನಡುವೆ ದ್ವೇಷವನ್ನು ಬಿತ್ತುವಂತಹ, ದೇಶ, ಸಂವಿಧಾನ, ರಾಷ್ಟ್ರದ ಬಾವುಟಕ್ಕೆ ಅವಮಾನ ಮಾಡುವ ಪಠ್ಯಗಳನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು. ಜಾತೀಯತೆಯನ್ನು ಪೋಷಿಸುವಂತಹ ಪಠ್ಯಗಳನ್ನು ಆಯ್ಕೆ ಮಾಡಬಾರದು.10) ಪಠ್ಯ ಪುಸ್ತಕಗಳ ಪರಿಷ್ಕರಣೆಯು ಪ್ರಜಾ ಸತ್ತಾತ್ಮಕವಾಗಿರಬಹುದು.11) ಮಕ್ಕಳ ಮೇಲೆ ಯಾವುದೇ ರಾಜಕೀಯ, ಧಾರ್ಮಿಕ ಸಿದ್ಧಾಂತಗಳನ್ನು ಹೇರುವ ಪಠ್ಯಗಳನ್ನು ಆಯ್ಕೆ ಮಾಡಬಾರದು ಆದರೆ ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯ ಈ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯು ಈ ಮೇಲಿನ ಯಾವುದೇ ಮೌಲ್ಯಗಳನ್ನು , ನೀತಿ ನಿಯಮಗಳನ್ನು ಪಾಲನೆ ಮಾಡಿಲ್ಲ.ಹಲವು ಪಠ್ಯಗಳನ್ನು ಕೈ ಬಿಟ್ಟಿದ್ದೇಕೆ ಎಂದು ಕೇಳಿದಾಗ ಶಿಕ್ಷಣ ಸಚಿವರಿಂದ ಉತ್ತರವೇ ಇಲ್ಲ. ಹಾಗಾಗಿ ಅದುಪೂರ್ವಗ್ರಹಪೀಡಿತವಾಗಿದೆ ಎಂದು ಹೇಳ ಬೇಕಿದೆ. ಆರ್ ಎಸ್ ಎಸ್ ನ ಹಿಂದುತ್ವ ಸಿದ್ಧಾಂತವನ್ನು ರೂಪಿಸಿದ ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವ ಔಚಿತ್ಯವೇನು ಎಂಬುದಕ್ಕೆ ಯಾವುದೇ ಸ್ಪಷ್ಟೀಕರಣವಿಲ್ಲ. ಬದಲಿಗೆ ಹೆಡಗೇವಾರ್ ಭಾಷಣ ಸೇರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಈ ವಿಷಯದಲ್ಲಿ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲದಿರುವುದು ಪ್ರಶ್ನಾರ್ಹವಾಗಿದೆ. ಇದೇ ಪದ್ಧತಿ ಮುಂದುವರೆದರೆಮುಂದಿನ ದಿನಗಳಲ್ಲಿ ಗೋಡ್ಸೆ ಕುರಿತಾದ ಆಧ್ಯಾಯವನ್ನು ̧ಸೇರಿಸುವ ದಿನಗಳು ದೂರವಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿರುವ ವಿದ್ಯಮಾನ. ಈ ಬದಲಾವಣೆ ಕುರಿತು ಸ್ಪಷ್ಟೀಕರಣ ಕೇಳಿದಾಗ ಆರ್.ಎಅ್.ಎಸ್ ಸಿದ್ಧಾಂತದಲ್ಲಿ ನಂಬಿಕೆ, ಗೌರವವಿದೆ ಎಂದು ಹೇಳಿಕೊಳ್ಳುತ್ತಿರುವ ರೋಹಿತ್ ಚಕ್ರತೀರ್ಥರವರು ಉಡಾಪೆಯಲ್ಲಿ ಮಾತನಾಡಿದ್ದಾರೆ. ಈ ರೀತಿಯ ಹೇಳಿಕೆಗಳು ಅನಪೇಕ್ಷಣೀಯ. ಯಾವುದೇ ಕಾರಣಕ್ಕೂ ಈ ಬದಲಾವಣೆಯನ್ನೂ ಜಾರಿಗೊಳಿಸಬಾರದು. ಶಿಕ್ಷಣ ತಜ್ಞರು ಹಾಗೂ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸುವ ಕ್ರಮ ಅಳವಡಿಕೆಯಾಗಬೇಕು. ಕನ್ನಡದ ಅಸ್ಮಿತೆಯ, ಘನತೆ ಹಾಗೂ ಪ್ರಾದೇಶಿಕ ಆಶೋತ್ತರಗಳಿಗೆ ಕುಂದು ತರಬಾರದು ಎಂಬ ನಮ್ಮ ಆಗ್ರಹವನ್ನು ಸಾರ್ವಜನಿಕರ ಮುಂದಿಡುತ್ತಿದ್ದೇವೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರು, ತಜ್ಞರು ಇನ್ನಷ್ಟು ಹೆಚ್ಚು ಮಾತನಾಡುವ ಮೂಲಕ ಶಿಕ್ಷಣವೆಂಬುದು ಮಕ್ಕಳ ಮನೋವಿಕಾಸದ ದಾರಿಯಾಗುವಂತೆ ಗಮನ ಕೊಡಲಿ ಎಂದೂ ನಿರೀಕ್ಷಿಸುತ್ತೇವೆ. ಸರ್ಕಾರದ ಈ ಪಕ್ಷಪಾತಪೂರಿತ ಬದಲಾವಣೆಗಳನ್ನು ವಿರೋಧಿಸಿ ಶಿಕ್ಷಣದ ಧ್ಯೇಯವನ್ನು ಜನಮುಖಿಗೊಳಿಸಬೇಕೆಂಬನಿಲುವಿಗೆ ನಾವು ದನಿಗೂಡಿಸುತ್ತಿದ್ದೇವೆ.1)ಡಾ.ಕೆ.ಮರುಳಸಿದ್ದಪ್ಪ,2)ಡಾ.ವಿಜಯಾ3) ಡಾ.ರಾಜೇಂದ್ರ ಚೆನ್ನಿ4) ಪ್ರೊ.ಎಸ್.ಜಿ ಸಿದ್ದರಾಮಯ್ಯ5) ಡಾ.ಗಣೇಶ್ ದೇವಿ6) ಡಾ.ಬಂಜಗೆರೆ ಜಯಪ್ರಕಾಶ್7) ಡಾ.ಟಿ.ಆರ್.ಚಂದ್ರಶೇಖರ್8) ರುದ್ರಪ್ಪ ಹನಗವಾಡಿ9) ಡಾ.ಹಿ.ಶಿ.ರಾಮಚಂದ್ರೇಗೌಡ.10) ವಿ.ಪಿ.ನಿರಂಜನಾರಾಧ್ಯ11) ಕಾಳೇಗೌಡ ನಾಗವಾರ12) ಬಿ.ಟಿ.ಲಲಿತಾ ನಾಯಕ್13) ಕುಂ.ವೀರಭದ್ರಪ್ಪ14) ಡಾ.ರಹಮತ್ ತರಿಕೆರೆ15) ವಸಂತ ಬನ್ನಾಡಿ16) ರಂಜಾನ್ ದರ್ಗಾ17) ಜನಾರ್ಧನ್(ಜನ್ನಿ)18) ಅಚ್ಯುತ19) ಕೆ.ನೀಲಾ20) ಟಿ. ಸುರೇಂದ್ರ ರಾವ್21) ಕೆ.ಷರೀಫಾ22) ಪ್ರೊ.ಶಿವರಾಜ್23) ಬಿ.ಶ್ರೀಪಾದ ಭಟ್24) ವಿಮಲಾ.ಕೆ.ಎಸ್25) ವೀರ ಹನುಮಾನ್26) ಡಾ.ವಸುಂಧರಾ ಭೂಪತಿ27) ಡಾ.ಎಚ್.ಎಲ್ ಪುಷ್ಪ28) ಡಾ.ಎನ್.ಗಾಯತ್ರಿ29) ಬಿ. ಸುರೇಶ್30) ದಿನೇಶ್ ಅಮಿನಮಟ್ಟು31) ಕೇಸರಿ ಹರವೂ32) ಗುರುಶಾಂತ್ ಎಸ್. ವೈ.33) ಎಸ್. ದೇವೇಂದ್ರ ಗೌಡ34) ಡಾ.ವಿ.ಲಕ್ಷ್ಮೀನಾರಾಯಣ35) ಅಕ್ಷತಾ ಹುಂಚದಕಟ್ಟೆ36) ವೆಂಕಟೇಶ ಪ್ರಸಾದ್37) ಜೆ.ಸಿ.ಶಶಿಧರ್38) ವಾಸುದೇವ ಉಚ್ಚಿಲ39) ಸುಷ್ಮಾ40) ಮಾವಳ್ಳಿ ಶಂಕರ್41) ಗುರುಪ್ರಸಾದ್ ಕೆರಗೋಡು42) ಎಲ್.ಎನ್.ಮುಕುಂದರಾಜ್43) ಪುರುಷೋತ್ತಮ ಬಿಳಿಮಲೆ44) ಚಂದ್ರಶೇಖರ ತಾಳ್ಯ45) ರಘುನಂದನ46) ಪ್ರತಿಭಾ ನಂದಕುಮಾರ್47) ಕೆ.ಎಸ್. ಪಾರ್ಥಸಾರಥಿ48) ಎಚ್.ಎಸ್ ರಾಘವೇಂದ್ರ ರಾವ್49) ದು. ಸರಸ್ವತಿ50) ಪೀರಬಾಷ51) ಅನಂತ ನಾಯಕ್52) ಪ್ರಕಾಶ ಕಮ್ಮರಡಿ53) ಸಿ.ಕೆ.ಗುಂಡಣ್ಣ54) ಸಿ.ಬಸವಲಿಂಗಯ್ಯ55) ಸಿ.ಕೆ.ಗುಂಡಣ್ಣ56) ಬಿ.ಎಮ್.ಹನೀಫ್57) ಶಿವಸುಂದರ್58) ಡಿ.ಎಚ್.ಕಂಬ್ಳಿ59) ಶಶಿಕಲಾ ವಸ್ತ್ರದ60) ಮಲ್ಲಿಕಾರ್ಜುನ ಕಡಕೋಳ61) ಪ್ರೊ.ಜಿ.ಎನ್.ಮಲ್ಲಿಕಾರ್ಜುನಯ್ಯ ಚಿತ್ರದುರ್ಗ62) ಪ್ರೊ.ಮಲ್ಲಿಕಾರ್ಜುನ ಕಲಮರಹಳ್ಳಿ ದಾವಣಗೆರೆ63) ರಾಜಶೇಖರ ಕಿಗ್ಗ64) ಡಾ.ಎಚ್.ಎಸ್ ಅನುಪಮ65) ಜಿ.ವಿ.ಆನಂದ ಮೂರ್ತಿ66) ಸಿದ್ದಗಂಗಯ್ಯ ಹೊಲತಾಳು67) ಡಾ.ವಿನಯಾ68) ಲಕ್ಷ್ಮಿ ಚಂದ್ರಶೇಖರ್69) ಡಾ.ಪ್ರಭು ಖಾನಾಪುರೆ70) ಪ್ರೊ.ಆರ್.ಕೆ. ಹುಡ್ಗಿ71) ಡಾ.ಆರ್.ಪೂರ್ಣಿಮಾ72) ಪ್ರೊ.ಕೆ. ಫಣಿರಾಜ್73) ಪ್ರೊ.ಚಂದ್ರ ಪೂಜಾರಿ74) ಪ್ರೊ.ನರೇಂದ್ರ ನಾಯಕ್75) ಪ್ರೊ.ಪಟ್ಟಾಭಿರಾಮ ಸೋಮಯಾಜಿ76) ಫಕೀರ್ ಮಹ್ಮದ್ ಕಟ್ಪಾಡಿ77) ಪ್ರೊ.ಮಹಬಲೇಶ್ವರ ರಾವ್78) ಐ.ಕೆ. ಬೋಳುವಾರ79) ಗುಲಾಬಿ ಬಿಳಿಮಲೆ80) ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ81) ಶ್ಯಾಮಲಾ ಮಾಧವ 82) ಎಸ್. ಸತ್ಯಾ 83) ಪಿಚ್ಚಳ್ಳಿ ಶ್ರೀನಿವಾಸ್ Show Full Article Advertisement Next Read: ನಾಡಗೀತೆಯನ್ನು ಅವಮಾನಿಸಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಜಾ ಮಾಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ