https://twitter.com/KotasBJP/status/1539291814502359040?t=nCrOLoAFjJr0ra5fk7HQzw&s=19
"ಬಿಜೆಪಿಯವರೆಲ್ಲರೂ ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳು, ಅದೇ ಅವರ ಜ್ಞಾನದ ಮೂಲ! ಕೋಟಾ ಶ್ರೀನಿವಾಸ ಪೂಜಾರಿಯವರೆ, ವಾಟ್ಸಾಪ್ ಬಿಟ್ಟು ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಿ. ನೀವು ಮೊದಲಲ್ಲ, ಇವರೆಲ್ಲ ಮೊದಲೇ ರಾಷ್ಟ್ರಪತಿಗಳಾಗಿದ್ದಾರೆ
ಜಾಕಿರ್ ಹುಸೇನ್ (ಮುಸ್ಲಿಂ), ಆರ್.ಕೆ ನಾರಾಯಣ್(ದಲಿತ), ಪ್ರತಿಭಾ ಪಾಟೀಲ್ (ಮಹಿಳೆ)" ಎಂದು ಕಾಂಗ್ರೆಸ್ ಪಕ್ಷದ ಹುಬ್ಬಳ್ಳಿ- ಧಾರವಾಡ ವಿಭಾಗದ ಟ್ವಿಟರ್ ಹ್ಯಾಂಡಲ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದೆ"
"ಸರ್ ನಿಮಗೆ ಎಲ್ಲಾ ವಾಟ್ಸಾಪ್ ಯೂನಿವರ್ಸಿಟಿ ಇಂದಲೇ ಬರೋದ,ಅಲ್ಲಿಂದ ಬಂದ ಮೇಲೆ ಟ್ವೀಟ್ ಮಾಡೋದ" ಎಂದು ಶಶಾಂಕ್ ಪಟೇಲ್ ಹೇಳಿದ್ದಾರೆ.
"ಅದಕ್ಕೆ ನಿಮ್ಮನ್ನು ವಾಟ್ಸಾಪ್ ಯೂನಿವರ್ಸಿಟಿಯವರು ಅಂತ ಹೇಳೋದಲ್ವೇ?" ಎಂದು ಕಾರ್ಕಳದ ಪ್ರದೀಪ್ ಶೆಟ್ಟಿ ನಲ್ಲೂರು ಕೇಳಿದ್ದಾರೆ.
"ಒಬ್ಬ ಸಚಿವರು ವಾಟ್ಸಾಪ್ ನಲ್ಲಿ ಬಂದಿದ್ದನ್ನು ಟ್ಟಿಟ್ ಮಾಡುವಷ್ಟು ಗತಿಗೇಡಾ ಕೋಟ ಶ್ರೀನಿವಾಸ್ ಪೂಜಾರಿಯವರೇ ? ನೀವು ಕಾಪಿ ಪೇಸ್ಟ್ ಮಾಡಿದ್ದು ನೋಡುವಾಗ ಪುರೋಹಿತ ಚಕ್ರವರ್ತ ಕಾಪಿ ಪೇಸ್ಟ್ ಮಾಡಿದ್ದು ದೊಡ್ಡ ವಿಷಯ ಅಲ್ಲ ಬಿಡಿ" ಎಂದು ಕಾಂಗ್ರೆಸ್ ಪಕ್ಷದ ಪಾಣೆಮಂಗಳೂರು ಘಟಕ ಹೇಳಿದೆ.
"ಕೋಟ ಅವರೇ ನೀವು ಸಚಿವರಾಗಿದ್ದೀರಿ. ನಿಮಗೆ ತಲೆ ಇದ್ದರೆ ಟ್ವೀಟ್ ಮಾಡುವ ಮೊದಲು ಬುದ್ಧಿ ಉಪಯೋಗಿಸಿ.
ಹಿಂದೆ ರಾಷ್ಟ್ರಪತಿಯಾಗಿದ್ದ ಝಕೀರ್ ಹುಸೈನ್ ರವರು ಯಾರು? ಕೆ. ಆರ್ ನಾರಾಯಣ್ ರವರು ಯಾರು? ದಲಿತ ರಲ್ಲವೇ. ಜೈಲ್ ಸಿಂಗ್ ರವರು ಯಾರು? ಸಿಖ್ ಧರ್ಮದವರಲ್ಲವೇ. ಶ್ರೀಮತಿ ಪ್ರತಿಭಾ ಪಾಟೀಲ್ ಯಾರು ಮಹಿಳೆಯಲ್ಲವೇ?
ಕೋಟ ಬಿಟ್ಟು ನೋಟ ಸರಿಯಾಗಿರಲಿ" ಎಸ್. ಸಿದ್ದಪ್ಪಾಜಿ ಪ್ರತಿಕ್ರಿಯಿಸಿದ್ದಾರೆ.
"ರೋಬೋಟ್ ಕೆಲಸ ರಿಮೋಟ್ ಮಾತ್ರ ಸಂಘಪರಿವಾರದವರ ಕೈಯಲ್ಲಿ ನೀವು ರಾಷ್ಟ್ರಪತಿ.ಪ್ರಧಾನಿ. ಮುಖ್ಯಮಂತ್ರಿ ಹುದ್ದೆ ಯಾವುದೂ ಬೇಡ ಸಂವಿಧಾನದಲ್ಲಿ sc/st ಜನಾಂಗದ ಉದ್ದಾರಕ್ಕಾಗಿ ರೂಪಿಸಿರುವುದನ್ನು ಯಥಾವತ್ತಾಗಿ ಜಾರಿಗೆ ತನ್ನಿ ಅವಾಗ ನಿಮ್ಮ ಸಾಧನೆ ಅಂತ ಹೇಳಿ ಅವಾಗ ನಿಮ್ಮ ಮತ್ತು ನಿಮ್ಮ ಪಕ್ಷದ ಜಾತ್ಯತೀತತೆ. ಗೊತ್ತಾಗುತ್ತೆ" ಎಂದು ರೇಣುಕಾ ಲೋಕೇಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
"ದೇಶದ ಮೊದಲ ಮುಸ್ಲಿಂ ರಾಷ್ಟ್ರಪತಿ ಜಾಕೀರ್ ಹುಸೇನ್ ಮೊದಲ ಸಿಖ್ ಧರ್ಮದ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಮೊದಲದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣ್ ಮೊದಲಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರೆಲ್ಲರನ್ನೂ ಆಯ್ಕೆಮಾಡಿಇತಿಹಾಸ ಸೃಷ್ಟಿಸಿದ್ದುಕಾಂಗ್ರೆಸ್ ಇದು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದಇತಿಹಾಸ ಅಲ್ಲ ಪ್ರಚಾರ ಕೂಡ ಪಡೆಯಲ್ಲಿಲ್ಲ" ಎಂದು ಕಾಪುವಿನ ಬಾಲಕೃಷ್ಣ ಆರ್. ಕೋಟ್ಯಾನ್ ಪ್ರತಿಕ್ರಿಯಿಸಿದ್ದಾರೆ.
"ಈ ಮಂತ್ರಿ ಕೂಡ WhatsApp University ಯಲ್ಲೇ ಓದಿರೋದಾ… ಕರ್ಮ!" ಎಂದು ಎಂ.ಎಸ್ ಅಸೋಸಿಯೇಟ್ಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
''ಪಕ್ಷ ಏನೇನು ಸಾಧನೆ ಮಾಡಿದೆ ಅಂತ ತಿಳಿಯದ ಶಾಸಕರು ಇವರು.ಇವರ ಪಕ್ಷ ಮಾಡಿರುವ ಕೆಲಸದ ಬಗ್ಗೆಯೇ ಇವರಿಗೆ ತಿಳಿದಿಲ್ಲ ಇನ್ನ ಜನರ ಕಷ್ಟ ಇವರಿಗೇಗೆ ತಿಳಿಯುತ್ತೆ ಹೇಳಿ. ಇಂತವರನ್ನು ಚುನಾಯಿಸಿ ಜನಪ್ರತಿನಿಧಿ ಮಾಡುವ ಜನರೆ ಖುಷಿ ಪಡಬೇಕು ಇವರ ಶೈಲಿಗೆ. ವಾಟ್ಸಪ್ ಅಲ್ಲಿ ಬಂತಂತೆ. ಇವರು ಅದನ್ನು ಇಲ್ಲಿ ಪೋಸ್ಟ್ ಮಾಡಿದ್ರಂತೆ" ಎಂದು ನವೀನ್ ಕುಮಾರ್.ಕೆ.ವಿ ಹೇಳಿದ್ದಾರೆ.
"ವಿಧಾನ ಪರಿಷತ್ತಿನ ಸಭಾ ನಾಯಕ, ಪ್ರಸ್ತುತ ಸಚಿವರಾಗಿದ್ದೂ ವಾಟ್ಸ್ಆಪ್ ಯುನಿವರ್ಸಿಟಿಗೆ ಅವಲಂಬಿತರಾಗಿರುವ ನಿಮ್ಮನ್ನು ಹಾಗೂ ಅಂಧ ಭಕ್ತರನ್ನು ಕಂಡು ಅಯ್ಯೋ ಅನಿಸುತ್ತಿದೆ. ನೀವು ಮೊದಲಲ್ಲ, ಇವರೆಲ್ಲ ಮೊದಲೇ ರಾಷ್ಟ್ರಪತಿಗಳಾಗಿದ್ದಾರೆ.
ಜಾಕಿರ್ ಹುಸೇನ್ (ಮುಸ್ಲಿಂ), ಕೆ.ಆರ್ ನಾರಾಯಣ್(ದಲಿತ), ಪ್ರತಿಭಾ ಪಾಟೀಲ್ (ಮಹಿಳೆ)." ಎಂದು ಡಾ. ದಿವ್ಯಾಪ್ರಭಾ ಗೌಡ ಹೇಳಿದ್ದಾರೆ.
"ದಲಿತರಿಗೆ ಪುಕ್ಕಟೆ ಜಮೀನು ಸರಕಾರಿ ಜಮೀನು ಕೊಟ್ಟು ಕಾಡಿನಿಂದ ST ಗಳಿಗೆ ಊರಿನಲ್ಲಿ ನೆಲಸುವ ಹಾಗೆ ಎಲ್ಲರ ಸಮಾನ ಬದುಕುವ ಹಾಗೆ ಮಾಡಿದ್ದು ಕಾಂಗ್ರೆಸ್!
ಒಬ್ಬ ದಲಿತನನ್ನು ರಾಷ್ಟ್ರಪತಿ ಮಾಡಿದರೆ ಎಲ್ಲಾ ದಲಿತರು ಹೇಗೆ ಉದ್ದಾರ ಆಗುತ್ತಾರೆ?" ಎಂದು ಶ್ರೀ ರಾಮಚಂದ್ರ ಪ್ರತಿಕ್ರಿಯಿಸಿದ್ದಾರೆ.
"ಹೌದು, ಪೂಜಾರಿ ಯವರೇ
ಕಾಂಗ್ರೆಸ್ ಸಹ ಮುಸ್ಲಿಮ್, ದಲಿತ, ಶಿಖ್,ಮಹಿಳೆ, ಪ್ರಣಬ್ ಮುಖರ್ಜಿ ಸೇರಿದಂತೆ ಇತರರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ.ಅವರೇಲ್ಲ ವಿದ್ಯಾವಂತ ಹಾಗೂ ಏಕಮೇವ ಜಯತೆಯಲ್ಲಿ ನಂಬಿಕೆ ಇದ್ದವರು
ನೀವು ಮೀಸಲಾತಿ ತೆಗೆಯಲು ಮೀಸಲಾತಿ ಪಡೆಯುವವರನ್ನೇ ಅಯ್ಕೆಮಾಡುವ ಜಯಮಾನದವರು ಆರ್ ಎಸ್ ಎಸ್ ಅಜೆಂಡವೇ ಇದುತಾನೇ ?" ಎಂದು ರಾಜು ಪಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
"ಮಂತ್ರಿಯಾಗಿ ಮಾಡೋ ಕೆಲ್ಸ ಮಾಡೋದ್ ಬಿಟ್ಟು, ಟೈಂಪಾಸ್ ಟ್ವೀಟ್ ಹಾಕೋದು ಹೊಣೆಗೇಡಿತನದ ಪರಮಾವಧಿಯಲ್ಲದೇ ಮತ್ತೇನು!" ಎಂದು ಸಮರ್ಥ್ ಕೆರೂರು ಕಾಮೆಂಟ್ ಮಾಡಿದ್ದಾರೆ.
"ಇವರೆಲ್ಲ ಸಾಧಕರು ಆಗಿರುವುದಕ್ಕೆ ರಾಷ್ಟ್ರಪತಿಗಳಾಗಿದ್ದಾರೆ ಮುಸ್ಲಿಂ, ದಲಿತ, ಆದಿವಾಸಿ ಅಂತ ಜಾತಿ ನೋಡಿ ಮಾಡಿಲ್ಲ! ದಾರಿಲಿ ಹೋಗೊರನ್ನು ಕರ್ಕೋಂಡ್ ಹೋಗಿ ರಾಷ್ಟ್ರಪತಿ ಮಾಡಿಲ್ಲ ಯಾರನ್ನು. ಹೆಸರಲ್ಲೇ ಕೋಟ ಇದೆ ನಿಮಗೆ ಒರಿಜಿನಲ್ ಹೇಗೆ ಗೊತ್ತಾಗುತ್ತೆ." ಎಂದು ರಾಘವೇಂದ್ರ ರೆಡ್ಡಿ ಎಂಬುವವರು ಹೇಳಿದ್ದಾರೆ.
"ವಾಟ್ಸಪ್ ಯೂನಿವರ್ಸಿಟಿ ಅಂತ ಕಿಂಡಲ್ ಮಾಡ್ತಿರಲಿಲ್ಲ ಸಾರ್, ಅದು ನಿಜವಾಗಿ ಮೂರ್ಖರ ಪ್ರಪಂಚ. ಬಿಜೆಪಿಯ ವಾಟ್ಸಪ್ ಗುಂಪುಗಳು ಇದೇ ತರ ಧರದ ನಂಜು, fake news ಗಳ ಅಡ್ಡ ಆಗಿದೆ. ಬುದ್ದಿವಂತರು ಬಿಜೆಪಿಗೆ ಓಟ್ ಹಾಕಲ್ಲ ಅನ್ನೋ ಮಾತು ಕೂಡ ಜನರಲ್ಲಿ ಇದೆ." ಎಂದು ಮಹೇಶ್ ಎಸ್.ಆರ್ ಮೇಡಾಳ ಹೇಳಿದ್ದಾರೆ.
"ಕೋಟಾ ಶ್ರೀನಿವಾಸ್ ಪೂಜಾರಿ ಅವರೇ, ವಾಟ್ಸಾಪ್ ಬಿಟ್ಟು ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಿ,ಇವರೆಲ್ಲ ಮೊದಲೇ ರಾಷ್ಟ್ರಪತಿಗಳಾಗಿದ್ದಾರೆ ೧)
ಜಾಕಿರ್ ಹುಸೇನ್ (ಮುಸ್ಲಿಂ),
೨) ಆರ್.ಕೆ ನಾರಾಯಣ್(ದಲಿತ),
೩) ಪ್ರತಿಭಾ ಪಾಟೀಲ್ (ಮಹಿಳೆ).." ಎಂದು ಶಿವಶಂಕರ್ ಕಾಮೆಂಟ್ ಮಾಡಿದ್ದಾರೆ.
"ಇವೆಲ್ಲ ಏನೂ ಇಲ್ಲ! ಮುಖ್ಯವಾಗಿ ದಲಿತರು ಉದ್ದಾರ ಆಗಿರೋದು reservation ನಿಂದ
ಅದನ್ನೆ ನೀವುಗಳು oppose ಮಾಡ್ತಾ ಇದೀರಲ್ಲ" ಎಂದು ಶ್ರೀರಾಮಚಂದ್ರ ಹೇಳಿದ್ದಾರೆ.
"ಯಂಣ್ಣಾ ಸೀನಪ್ಪಣ್ಣಾ, ಇವಾಗ ರಮಾನಾಥ್ ಕೋವಿಂದ್ ಅವರಿಗೆ ಎಷ್ಟು ಗೌರವ ಕೊಟ್ಟಿದ್ದಾರೆ ಅಂತ ಇಡಿಜಗತ್ತಿಗೆ ಗೊತ್ತಾಗಿದೆ ಯಂಣ್ಣಾ ರಾಮ ಮಂದಿರ ಶಿಲಾನ್ಯಾಸಕ್ಕೆ ಕರೆಯಲಿಲ್ಲ ಪುರಿ ಜಗನ್ನಾಥ ದೇವಸ್ಥಾನಧಲ್ಲಿ ಪ್ರವೇಶ ಕೊಡಲಿಲ್ಲ ಸುಮ್ನೆ ಹೆಸರಿಗೆ ಅಷ್ಟೇ ದಲಿತರು. ಆದಿವಾಸಿಗಳು. ಮುಸಲ್ಮಾನರು.ಅಂತ. ಆಮೇಲೆ .ಇಡುವುದು ಭ…..ಗೊಟ ಇಡಿಜಗತ್ತಿಗೆ ಗೊತ್ತಾ" ಎಂದು ಗಂಗಾಧರ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
"ದಲಿತರನ್ನು ಸೊಂಟದ ಕೆಳ ಭಾಗ ಎಂದು ವರ್ಣಿಸುವ ನಿಮ್ಮ ಮನುಸ್ಮೃತಿಯನ್ನ ಧಿಕ್ಕರಿಸುತ್ತೇವೆ ಅಂತ ಒಂದು ಮಾತು ಹೇಳಿ ಸಾಕು. ನಿಮ್ಮನ್ನು ಒಪ್ಪುತ್ತೇವೆ. ಈ ಬೂಟಾಟಿಕೆ ಎಲ್ಲ ಬೇಡ" ಎಂದು ವಿಕಾಸ್ ಎನ್ನುವವರು ಹೇಳಿದ್ದಾರೆ.
"ಅವರೆಲ್ಲರೂ ಬಿಜಪಿಯಲ್ಲಿರುವ ನಾಯಕರು ಅವ್ರು ನೀವು ಹೇಳಿದ ಹಾಗೆ ಕೇಳುವ ನಾಯಕರು ಅದಕ್ಕೆ ನೀವು ಆಯ್ಕೆ ಮಾಡಿದ್ದೀರಿ" ಎಂದು ರಶೀದ್ ಜಗ್ಗು ಎಂಬುವವರು ಟ್ವೀಟ್ ಮಾಡಿದ್ದಾರೆ.
"ಅಯ್ಯೋ ಮೂರ್ಖರೇ ಈ ತಪ್ಪು ಮಾಹಿತಿಗೂ 1500 ಲೈಕ್ ಬರುತ್ತೇ ಅಂದ್ರೆ ಇವರ ಜ್ಞಾನದ ಅಭಾವ ಎಷ್ಟು ಕಾಡುತ್ತಿರಬಹುದು…ಅದೂ ಮಾಜಿ ಮಂತ್ರಿ ಗಳೂ ಸೇರಿದಂತೆ…" ಎಂದು ರಾಘವೇಂದ್ರ ಬಿ.ಕೆ ಹೇಳಿದ್ದಾರೆ.
ಎಲ್ಲವೂ ನೀವೇ ಮಾಡಿದ್ದು. ಸೂರ್ಯ, ಚಂದ್ರರು ಬೆಳಗುತ್ತಿರುವುದು ನಿಮ್ಮಿಂದಲೆ." ಎಂದು ಕೃಷ್ಣಂ ವಂದೇ ಜಗದ್ಗುರುಂ ಎಂಬುವವರು ಹೇಳಿದ್ದಾರೆ.