Advertisement

ಬ್ರಿಟೀಷರಂತಹ ಬ್ರಿಟೀಷರನ್ನೇ ರಾತ್ರೋರಾತ್ರಿ ಚಡ್ಡಿಬಿಚ್ಚಿಸಿ ಓಡಿಸಿದ ನಾವು ಕಾಂಗ್ರೆಸಿಗರು, ಬ್ರಿಟೀಷರ ಬೂಟು ನೆಕ್ಕಿದವರಿಗೆ ಭಯಪಡಲಾರೆವು: ರಾಹುಲ್

Advertisement
"ಕಾಂಗ್ರೆಸ್ ಪಕ್ಷ ಈ ದೇಶದ ಸ್ವಾತಂತ್ರ್ಯ ಸಮರಕ್ಕಾಗಿ ಸಾವಿರಾರು ನಾಯಕರ ಪ್ರಾಣವನ್ನು ಬಲಿದಾನ ಮಾಡಿದಂತಹ ಪಕ್ಷ. ನಮ್ಮದು ಕನ್ಯಾಕುಮಾರಿ ಯಿಂದ ಕಾಶ್ಮೀರದ ತನಕದ ನವಭಾರತವನ್ನು ಸಧೃಢವಾಗಿ ನಿರ್ಮಿಸಿದ ಪಕ್ಷ. ನೆಹರೂ ಕುಟುಂಬ ತಮ್ಮ ಪೂರ್ವಜರ, ಇಂದಿನ ಬೆಲೆಯಲ್ಲಿ ಲಕ್ಷಾಂತರ ಕೋಟಿ ರೂ ಮೌಲ್ಯದ ಆಸ್ತಿಯನ್ನೆ ಅದೇ ಸ್ವಾತಂತ್ರ್ಯ ಸಮರಕ್ಕಾಗಿ ವ್ಯಯಿಸಿದ ಕುಟುಂಬ. ನಾನು ಸ್ವಾತಂತ್ರ್ಯ ಹೋರಾಟಕ್ಕಾಗಿ ‌ಸತತ ಒಂಭತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಚಾಚಾ ನೆಹರೂರವರ ಮರಿಮೊಮ್ಮಗ, ದೇಶದ ಐಕ್ಯತೆಗಾಗಿ ಹೋರಾಡಿ ಖಲಿಸ್ಥಾನ್ ಉಗ್ರರಿಂದ ಹತರಾದ ಇಂದಿರಾಗಾಂಧಿ ಯವರ ಮೊಮ್ಮಗ, ಎಲ್‍ಟಿಟಿಇ ಉಗ್ರರಿಂದ ಹತರಾದ ರಾಜೀವ್ ಗಾಂಧಿಯವರ ಮಗ, ತನ್ನ ಮನೆ ಬಾಗಿಲಿಗೆ ಬಂದಿದ್ದ ಪ್ರಧಾನಿ ಪದವಿಯನ್ನು ಎರಡೆರಡು ಬಾರಿ ತಿರಸ್ಕರಿಸಿ ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರನ್ನು ಪ್ರಧಾನಿ ಪದವಿಗೆ ಸೂಚಿಸಿದ ಸೋನಿಯಾ ಗಾಂಧಿಯವರ ಮಗ. ನಮ್ಮ ಪಕ್ಷ ಬ್ರಿಟೀಷರಂತಹ ಬ್ರೀಟೀಷರನ್ನೇ ರಾತ್ರೋರಾತ್ರಿ ಚಡ್ಡಿಬಿಚ್ಚಿಸಿ ಓಡಿಸಿದ ಪಕ್ಷ. ಇಂತಹ ಸಂಧರ್ಭದಲ್ಲಿ ಅದೇ ಬ್ರಿಟೀಷರ ಬೂಟು ನೆಕ್ಕಿದವರಿಗೆ ಭಯಪಡಲಾದೀತೇ? ಯಾವುದೇ ಆದಾರಗಳಿಲ್ಲದ ಹೆರಾಲ್ಡ್ ಪ್ರಕರಣದಂತಹ ಗೊಡ್ಡು ಬೆದರಿಕೆಗಳಿಗೆ ಯಾವುದೇ ಕಾರಣಕ್ಕೂ ಬಗ್ಗುವವರು ನಾವಲ್ಲ. ಕಾಂಗ್ರೆಸ್ ಪಕ್ಷ ತನ್ನ ಅರವತ್ತು ವರ್ಷಗಳ ಆಳ್ವಿಕೆಯಲ್ಲಿ ಈ ನಾಡಿನಲ್ಲಿ ಸ್ಥಾಪಿಸಿದ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಗಳನ್ನು ತನ್ನ ಉಧ್ಯಮಿ ಸ್ನೇಹಿತರಿಗೆ ಮೂರು ಕಾಸಿನ‌ಬೆಲೆಗೆ ಮಾರಾಟ ಮಾಡಿದಂತಹ ಈ ದೇಶದ ಪ್ರಧಾನಿ, ಪ್ರಾಮಾಣಿಕರೆ ಆಗಿದ್ದರೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ED ಯನ್ನು ಛೂ ಬಿಡುವ ಬದಲು, ನಾವು ಭಾಗಿಯಾಗಿರುವ ಯಾವುದಾದರೂ ಆಧಾರ ಸಹಿತವಾದ ಹಗರಣಗಳು ಇದ್ದರೆ ಕೂಡಲೇ ಇಲಾಖೆಗಳ ವತಿಯಿಂದ ಬಹಿರಂಗಪಡಿಸಲಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸವಾಲೆಸೆದಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಕುರಿತು ದಾಖಲಾಗಿರುವ ಪ್ರಕರಣದ ತನಿಖೆಗೆ ಹಾಜರಾಗಲು ತಾರೀಕು ಜೂನ್ 12 ಸೋಮವಾರದಂದು, ಅಧಿಕಾರಿಗಳ ಮುಂದೆ ತೆರಳುವ ವೇಳೆ ಅವರು ಈ ಮೇಲಿನ ವಿಚಾರಗಳನ್ನು ಪ್ರಸ್ತಾಪಿರುವ ಕುರಿತು ವರದಿಯಾಗಿದೆ.

"ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರಕಿದ ಮರುದಿನವೇ ರಫೆಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದಲ್ಲಿ ಈ ದೇಶದ ಖಜಾನೆಯ ಸಾವಿರಾರು ಕೋಟಿಗಳ ಹಣವನ್ನು ಲೂಟಿ ಹೊಡೆದು ಭಾರತ ದೇಶದ ಜನರಿಗೆ ಮಾಡಿದಂತಹ ಅನ್ಯಾಯಕ್ಕೆ ಇದೇ ಬಿಜೆಪಿಯ ಅಷ್ಟೂ ಭ್ರಷ್ಟಾಚಾರಿ ನಾಯಕರುಗಳು ಜೈಲಿನಲ್ಲಿ ಇರುತ್ತಾರೆ ಮತ್ತು ಪುಲ್ವಾಮ ದಾಳಿಯ ನೆಪದಲ್ಲಿ ಈ ದೇಶದ ಹೆಮ್ಮೆಯ ಸೈನಿಕರುಗಳಿಗೆ ಆದಂತಹ ಘನಘೋರ ಅನ್ಯಾಯದ ಪ್ರಕರಣದಲ್ಲಿ ಭಾಗಿಯಾದ ಅಷ್ಟೂ ಜನರು ಜೈಲು ಸೇರಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಈ ದೇಶದ ಬಡವರ ಬದುಕಿನಲ್ಲಿ ಚೆಲ್ಲಾಟವಾಡಿ ಕೊಳ್ಳೆಹೊಡೆದ ವಿಚಾರದಲ್ಲಿ ಅವರುಗಳು ಜೈಲು ಸೇರಲಿದ್ದಾರೆ, ನೋಡುತ್ತಿರಿ!" ಎಂದವರು ಹೇಳಿದ್ದಾರೆ.
Advertisement
Advertisement
Recent Posts
Advertisement