Advertisement

ರಾಜ್ಯದ ದೇವಸ್ಥಾನಗಳ ಮುಖ್ಯಸ್ಥರು ಮಾಂಸಾಹಾರ- ಸಸ್ಯಾಹಾರದ ವಿವಾದವನ್ನು ಬಗೆಹರಿಸಬೇಕು: ದಿನೇಶ್ ಅಮಿನ್ ಮಟ್ಟು

Advertisement

"ರಾಜ್ಯದ ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನಗಳು ಸೇರಿದಂತೆ ಎಲ್ಲ ದೇವಸ್ಥಾನಗಳ ಮುಖ್ಯಸ್ಥರು ಒಂದು ಪತ್ರಿಕಾ ಹೇಳಿಕೆ ನೀಡಿ ಮಾಂಸಾಹಾರ-ಸಸ್ಯಾಹಾರದ ವಿವಾದವನ್ನು ಬಗೆಹರಿಸಬೇಕು" ಎಂದು ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮಿನ್ ಮಟ್ಟು ವಿನಂತಿಸಿದ್ದಾರೆ.

"ತಥಾಕಥಿತ ಹಿಂದೂ ಸಂಘಟನೆಗಳು ಮತ್ತು ಕೆಲವು ಬಿಜೆಪಿ ನಾಯಕರು ಹೇಳುತ್ತಿರುವಂತೆ ಮೀನು-ಮಾಂಸ ತಿಂದು ದೇವರ ದರ್ಶನ ಮಾಡಬಾರದು ಎನ್ನುವುದಾದರೆ ಆ ದೇವಸ್ಥಾನಗಳ ಮುಖ್ಯಸ್ಥರು ಬಹಿರಂಗವಾಗಿ ಈ ಷರತ್ತನ್ನು ಘೋಷಿಸಬೇಕು" ಎಂದವರು ಹೇಳಿದರು.

"ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿದ್ದಾರೆ ಎಂದು ಈ ಹಿಂದೆ ಬಿಜೆಪಿ ಗುಲ್ಲೆಬ್ಬಿಸಿದ್ದಾಗ ಆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೆ ಸ್ವತಃ ಪತ್ರಿಕಾ ಹೇಳಿಕೆ ನೀಡಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ಆಹಾರದ ವಿಷಯದಲ್ಲಿ ಷರತ್ತುಗಳಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು" ಎಂದವರು ನೆನಪಿಸಿದ್ದಾರೆ.

Advertisement
Advertisement
Recent Posts
Advertisement