ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದರ ವತಿಯಿಂದ
ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿಧ್ಯಾರ್ಥಿ ಪನ್ನಗ ಎಸ್. ಶೆಟ್ಟಿ ''78-82 ಕರಾಟೆ ಸ್ಪರ್ದೆ'' ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿ ಇದೀಗ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ. ಇವರು ಖ್ಯಾತ ಕರಾಟೆ ಶಿಕ್ಷಕ ಅಕ್ಷಯ್ ಹೆಮ್ಮಾಡಿ ಇವರ ಶಿಷ್ಯರಾಗಿರುತ್ತಾರೆ.