ಶನಿವಾರ ಬೆಳಿಗ್ಗೆ 8 ಗಂಟೆಗೆ, ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಇಎಲ್ ಸರ್ಕಲ್ ಬಳಿ ರಸ್ತೆ ಗುಂಡಿಗೆ ಬಿದ್ದು ಜೆಸಿ ನಗರದ ನಿವಾಸಿ, ಬೈಕ್ ಸವಾರ ಬಾಲಾಜಿ ಎಂಬುವವರು ಕತ್ತು ಮತ್ತು ಭುಜದ ಮೂಳೆ ಮುರಿದುಕೊಂಡು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬೈಕ್ ನಿಂದ ಬಿದ್ದ ವೇಳೆ ಬಾಲಾಜಿ ಅವರ ಕತ್ತು ಹಾಗೂ ಬುಜದ ಭಾಗ ಹಾಗೂ ಕಾಲಿಗೆ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. "ನನ್ನ ಈ ಸ್ಥಿತಿಗೆ ಬಿಬಿಎಂಪಿ ಹಾಗು ರಾಜ್ಯ ಸರ್ಕಾರವೇ ಕಾರಣ ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ" ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು #40PercentSarkara ಹ್ಯಾಶ್‌ಟ್ಯಾಗ್ ನ ಅಡಿಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದ ರಾಜ್ಯ ಕಾಂಗ್ರೆಸ್, ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ,
"ಬಿಜೆಪಿ ಆಡಳಿತದ ಚಿನ್ನದ ರಸ್ತೆಗಳಲ್ಲಿ ಜನ ರಕ್ತ ಸುರಿಸುತ್ತಿದ್ದಾರೆ. ಚಿನ್ನದ ರಸ್ತೆಗಳಲ್ಲಿ ಆದ ಅಪಘಾತಗಳಿಗೆ ಸರ್ಕಾರವೇ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕು, ಸಾವುಗಳಿಗೆ 50 ಲಕ್ಷ ಪರಿಹಾರ ಒದಗಿಸಬೇಕು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡಬೇಕು. ಏಕೆಂದರೆ ಇವು ಸರ್ಕಾರಿ ಕೊಲೆ" ಎಂದು ವ್ಯಂಗ್ಯಭರಿತವಾಗಿ ಆಗ್ರಹಿಸಿದೆ.
(File photo)