Advertisement

"ಭಾರತ ಜೋಡೋ ಯಾತ್ರೆ"ಯ ಯಶಸ್ಸು ಬಿಜೆಪಿಗರ ನಿದ್ದೆ ಕೆಡಿಸಿದೆ: ದಿನೇಶ್ ಗುಂಡೂರಾವ್

Advertisement

"ಕನ್ಯಾಕುಮಾರಿಯಿಂದ ಆರಂಭಗೊಂಡು ಕರ್ನಾಟಕ ರಾಜ್ಯದ ಮೂಲಕ ಸಾಗಿದ ಭಾರತ ಐಕ್ಯತಾ ಯಾತ್ರೆ ನಾವು ನಿರೀಕ್ಷಿಸದ್ದಕ್ಕಿಂತಲೂ ಹೆಚ್ಚಿನ ಮಟ್ಟಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಯಾತ್ರೆಗೆ ರಾಜ್ಯದ ಜನ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಅಭಾರಿಗಳು" ಎಂದು ತಮಿಳುನಾಡು, ಪುದುಚೇರಿ ಮತ್ತು ಗೋವಾ ರಾಜ್ಯಗಳ ರಾಷ್ಟ್ರೀಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

"ಕರ್ನಾಟಕದ ಜನರು ದ್ವೇಷದ ಆರಾಧಕರಲ್ಲ, ಪ್ರೀತಿಯ ಆರಾಧಕರು ಎಂಬುದು ಈ ಯಾತ್ರೆಗೆ ಸಿಕ್ಕ ಜನಬೆಂಬಲವೇ ಸಾಕ್ಷಿ" ಎಂದವರು ವ್ಯಾಖ್ಯಾನಿಸಿದ್ದಾರೆ.

"ಮೊದಲು ಅಪಮಾನಿಸುತ್ತಾರೆ, ನಂತರ ಅನುಮಾನಿಸುತ್ತಾರೆ, ಕೊನೆಗೆ ಸನ್ಮಾನಿಸುತ್ತಾರೆ ಎಂಬಂತೆ ಜೋಡೋ ಯಾತ್ರೆ ಪ್ರಾರಂಭದಲ್ಲಿ ಬಿಜೆಪಿಯವರು ಯಾತ್ರೆಯನ್ನು ಅಪಮಾನಿಸುವ ಕೆಲಸ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು ನಿಂದಿಸಿದ್ದರು. ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ ಬಿಜೆಪಿಯವರಿಗೆ ಕಷ್ಟವಾಗಿದೆ" ಎಂದವರು ಹೇಳಿದ್ದಾರೆ.

"ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ. ಈಗಾಗಲೇ ತಮಿಳುನಾಡು,ಕೇರಳ‌‌ ಮತ್ತು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ. ಯಾಕೆಂದರೆ ಇದು ಹೃದಯ ಬೆಸೆಯುವ ಯಾತ್ರೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

Advertisement
Advertisement
Recent Posts
Advertisement