"ಕಾರ್ಟೂನು ಹಬ್ಬ ಬಳಗ, ಕುಂದಾಪುರ" ಇವರ ನೇತೃತ್ವದಲ್ಲಿ ನಿರಂತರವಾಗಿ ಕಳೆದ 9ವರ್ಷಗಳಿಂದ ನಡೆದು ಬರುತ್ತಿರುವ "ಕಾರ್ಟೂನು ಹಬ್ಬ"ವು ಈ ಬಾರಿ ನವೆಂಬರ್ 23ರಿಂದ 27ರ ತನಕ ಕುಂದಾಪುರದ ಕಲಾಮಂದಿರದಲ್ಲಿ ನಡೆದಿದ್ದು ಆ ಪ್ರಯುಕ್ತ ನವೆಂಬರ್ 26ರಂದು ಮಧ್ಯಾಹ್ನ 2ಗಂಟೆಗೆ "ಕಾರ್ಟೂನು ಸ್ಪರ್ಧೆ" ಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯು 4ರಿಂದ 7ನೇಯ ತರಗತಿಯ ವಿಧ್ಯಾರ್ಥಿಗಳಿಗೆ "ಕರಾವಳಿಯ ಜನಪದ ಕಲೆ" ಎಂಬ ವಿಷಯದಲ್ಲಿ, 8ರಿಂದ 10ನೇಯ ತರಗತಿಯ ವಿಧ್ಯಾರ್ಥಿಗಳಿಗೆ "ಧ್ವೇಷ ಬೇಡ, ಪ್ರೀತಿ ಇರಲಿ" ಎಂಬ ವಿಷಯದ ಮೇಲೆ ಮತ್ತು ಪಿಯುಸಿ ಹಾಗೂ ಮೇಲ್ಪಟ್ಟ ವಿಧ್ಯಾರ್ಥಿಗಳಿಗೆ "ಜಾತ್ಯತೀತ ಭಾರತ" ಎಂಬ ವಿಷಯದ ಮೇಲೆ.. ಹೀಗೆ, ಮೂರು ವಿಭಾಗಗಳಲ್ಲಿ ಸ್ಪರ್ದೆ ನಡೆದಿದ್ದು ಆ ಸ್ಪರ್ದೆಯಲ್ಲಿನ ವಿಜೇತರುಗಳ ವಿವರ ಇಂತಿದೆ:
4ರಿಂದ 7ನೇಯ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹಿರಿಯಡ್ಕದ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ನ ಸಿಂಚನಾ ಮೆಂಡನ್, ದ್ವಿತೀಯ ಬಹುಮಾನವನ್ನು ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೀತನ್ ಖಾರ್ವಿ, ತೃತೀಯ ಬಹುಮಾನವನ್ನು ಯಕ್ಷತ್ ಶೆಟ್ಟಿ ಪಡೆದಿದ್ದು, ಇದೇ ವಿಭಾಗದಲ್ಲಿ ಐದು ಸಮಾಧಾನಕರ ಬಹುಮಾನವನ್ನು ನೀಡಲಾಗಿದ್ದು ಅವುಗಳನ್ನು, ಬ್ರಹ್ಮಾವರ ಎಸ್.ಎಂ. ಎಸ್ ಶಾಲೆಯ ಸಾನ್ವಿ ವಿ.ಎನ್, ಕುಂದಾಪುರ ಸೈಂಟ್ ಮೇರಿಸ್ ಶಾಲೆಯ ಅದಿತಿ, ಬ್ರಹ್ಮಾವರ ಲಿಟಲ್ ರಾಕ್ ಶಾಲೆಯ ದೃತಿ, ಕುಂದಾಪುರ ಸೈಂಟ್ ಮೇರೀಸ್ ಶಾಲೆಯ ಶ್ರೈಯಸ್ ಹಾಗೂ ಕುಂದಾಪುರ ವೆಂಕಟರಮಣ ಶಾಲೆಯ ಮೀತ್ ರವರು ಪಡೆದಿರುತ್ತಾರೆ.
8ರಿಂದ 10ನೇಯ ತರಗತಿಯ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಲಿಟಲ್ ರಾಕ್ ಶಾಲೆಯ ಸೋಹನ್ ಆಚಾರ್ಯ, ದ್ವೀತಿಯ ಬಹುಮಾನವನ್ನು ಲಿಟಲ್ ರಾಕ್ ಶಾಲೆಯ ಅನಘಾ ಎಂ. ಭಂಡಾರಿ ಹಾಗೂ ತೃತೀಯ ಬಹುಮಾನವನ್ನು ಸೈಂಟ್ ಸಿಸಿಲಿಯಾ ಸ್ಕೂಲ್ ನ ದೀಪಿಕಾ ಭಟ್ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಎಸ್.ಎಂ.ಎಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಅಮೋಘ ಶೆಟ್ಟಿ, ರಕ್ಷಕ್, ಉಡುಪಿ ವಿದ್ಯಾಲಯ ಪಬ್ಲಿಕ್ ಸ್ಕೂಲ್‌ನ ಕೆ. ಪ್ರತಿಷ್ಠಾ ಶೇಟ್, ಕುಂದಾಪುರ ವೆಂಕಟರಮಣ ಶಾಲೆಯ ಧನುಶ್ ಖಾರ್ವಿ ಹಾಗೂ ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ ಲಿಯೋನಲ್ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.
ಪಿಯುಸಿ ಮತ್ತು ಅದಕ್ಕೂ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ರೋಹಿತ್ ಆಚಾರ್ಯ, ದ್ವಿತೀಯ ಬಹುಮಾನವನ್ನು ಮಂಗಳೂರಿನ ಬಿವಿಎ ಮಹಾಲಸಾ ಆರ್ಟ್ ಕಾಲೇಜಿನ ಅಮಿತ್ ರಾಜ್ ಹಾಗೂ ತೃತೀಯ ಬಹುಮಾನವನ್ನು ಉಡುಪಿ ಪಿಪಿಸಿ ಕಾಲೇಜಿನ ಆದರ್ಶ ಭಟ್ ಪಡೆದಿದ್ದಾರೆ ಮತ್ತು ಅದೇ ವಿಭಾಗದಲ್ಲಿ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗಿದ್ದು ಹಿರಿಯಡ್ಕ ಸರಕಾರಿ ಪಿ.ಯು ಕಾಲೇಜಿನ ಸೂರಜ್, ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನ ಸ್ವಸ್ತಿಕ್, ಕುಂದಾಪುರ ಆರ್‌ಎನ್ ಶೆಟ್ಟಿ ಪಿ.ಯು ಕಾಲೇಜಿನ ಅದ್ವೈತ್ ಆಚಾರ್ಯ, ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ಆದಿತ್ಯಾ ಎನ್ ದೇವಾಡಿಗ ಹಾಗೂ ಕೋಟ ವಿವೇಕ ಪಿಯು ಕಾಲೇಜಿನ ಶರಣ್ಯಾ ಭಟ್ ಪಡೆದಿರುತ್ತಾರೆ.
ಕಾರ್ಟೂನು ರಚನೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ, ಮಹಿಳೆಯರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಾಗದ ಮೂವರು ವಿಧ್ಯಾರ್ಥಿನಿಯರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗಿದ್ದು, ಅದರಲ್ಲಿ ಕುಂದಾಪುರ ಆರೆನ್ ಶೆಟ್ಟಿ ಪಿ.ಯು ಕಾಲೇಜಿನ ಸುಜನಾ ಮೊಗವೀರ, ಮೈಟ್ ಇಂಜಿನಿಯರಿಂಗ್ ಕಾಲೇಜಿನ ಸ್ಪೂರ್ತಿ. ಜಿ, ಕುಂದಾಪುರ ಯುಬಿಎಂಸಿಯ ಸುಸ್ಮಾ ಪೈ ಇವರಿಗೆ ಬಹುಮಾನ ವಿಜೇತರಾಗಿರುತ್ತಾರೆ ಎಂದು ಕಾರ್ಟೂನು ಹಬ್ಬ ಬಳಗದ ಪರವಾಗಿ ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.