ಹಗರಿಬೊಮ್ಮನಹಳ್ಳಿ ಕಲ್ಯಾಣ ಕರ್ನಾಟಕಕ್ಕೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಯಾವ ಹೊಸ ಯೋಜನೆಗಳನ್ನು ನೀಡದೇ ಸುಳ್ಳು ಭರವಸೆಗಳ ಮೂಲಕ ಸಂಡೂರಿಗೆ ಬರುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ನೈತಿಕತೆ ಇದೆಯೇ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಪ್ರಶ್ನಿಸಿದ್ದಾರೆ.
ಬಳ್ಳಾರಿಯ ಬಿಜೆಪಿ ನಾಯಕರು ಅಕ್ರಮ ಗಣಿಗಾರಿಕೆಯಿಂದ ಗಣಿ ಕಾರ್ಮಿಕರು ಕೆಲಸವಿಲ್ಲದೆ ಉಪವಾಸವಿದ್ದಾಗ ಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಗೆ ಬಳ್ಳಾರಿ ನೆನಪಾಗಲಿಲ್ಲವೇ ಎಂದು ಪತ್ರೇಶ್ ಲೇವಡಿ ಮಾಡಿದ್ದಾರೆ
ಗಣಿಯನ್ನೇ ನಂಬಿರುವ ಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರಕ್ಕೆ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಒಂದು ಉತ್ತಮ ಆಸ್ಪತ್ರೆಯನ್ನು ಕಟ್ಟದೇ ಕೊನೆಗೆ ಖನಿಜ ನಿಧಿಯನ್ನು ಸಮರ್ಪಕವಾಗಿ ಬಳಸಿ ಈ ಭಾಗದ ಗಣಿಬಾಧಿತ ಜನರ ಸಂಕಷ್ಟವನ್ನು ಅರಿತುಕೊಳ್ಳದೇ ಕೇವಲ ಭಾಷಣಗಳ ಮೂಲಕ ಜನರ ಕಿವಿಗೆ ಹೂವು ಇಡುವ ಬಿಜೆಪಿ ನಾಯಕರ ಮಾತುಗಳನ್ನು ಜಿಲ್ಲೆಯ ಜನತೆ ನಂಬುವುದಿಲ್ಲ ಎಂದು ಪತ್ರೇಶ್ ಟೀಕಿಸಿದ್ದಾರೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ್ದರೆ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸಧೃಢತೆ ಹೊಂದುತ್ತಿದ್ದವು ಅದನ್ನು ಬಿಟ್ಟು ಇಡೀ ಗಣಿಗಾರಿಕೆಯನ್ನು ಜಿಂದಾಲ್ ಮಿತ್ತಲ್ ಅದಾನಿ ಅಂಬಾನಿ ಕಾರ್ಖಾನೆ ಮಾಲೀಕರ ಪಾದಗಳಿಗೆ ಒತ್ತೆಯಿಟ್ಟರೆ ಜಿಲ್ಲೆ ಮತ್ತು ಜನತೆ ಅಭಿವೃಧ್ಧಿಯಾಗುವುದಿಲ್ಲ ಕಾರ್ಖಾನೆ ಮಾಲೀಕರು ಉದ್ಧಾರವಾಗುತ್ತಾರೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪತ್ರೇಶ್ ಹಿರೇಮಠ್ ಪ್ರಶ್ನಿಸಿದ್ದಾರೆ.