Advertisement

ನಟ ಸುದೀಪ್‌ಗೆದುರಾಗಿದ್ದ ಕಷ್ಟವೇನು? ಬೊಮ್ಮಾಯಿ ಮಾಡಿದ್ದ ಸಹಾಯವೇನು?

Advertisement

ಚಲನಚಿತ್ರ ನಟ ಕಿಚ್ಚ ಸುದೀಪ್‌ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲವು ಆಯ್ದ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿರುವುದಾಗಿ ಬೆಂಗಳೂರಿನ ಅಶೋಕ ಹೊಟೇಲ್‌ನಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿರುವ ಕುರಿತು ವರದಿಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ್ದ ಸುದೀಪ್, ‘ನಾನು ಬಿಜೆಪಿ ಸೇರುತ್ತಿಲ್ಲ, ರಾಜಕೀಯವನ್ನು ಪ್ರವೇಶ ಮಾಡುತ್ತಿಲ್ಲ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಬಸವರಾಜ ಬೊಮ್ಮಾಯಿ ಅವರು ನನಗೆ ಚಿಕ್ಕಂದಿನಿಂದಲೂ ಪರಿಚಿತರು. ನಾನು ಚಿಕ್ಕವನಿದ್ದಾಗಿಂದಲೂ ಅವರನ್ನು ಮಾಮ ಎಂದೇ ಕರೆಯುತ್ತಿದ್ದೆ. ನಾನು ಕಡು ಕಷ್ಟದಲ್ಲಿ ಇದ್ದ ಸಂದರ್ಭದಲ್ಲಿ ನನ್ನ ಕೈ ಹಿಡಿದ ಬೆರಳೆಣಿಕೆಯ ಜನರಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಈಗ ಅವರು ನನ್ನ ಬೆಂಬಲ ಕೇಳಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನೆರವಾಗುವ ಮೂಲಕ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ. ಆದ್ದರಿಂದ ಅವರು ಎಲ್ಲಿ ಹೇಳುತ್ತಾರೆಯೋ ಅಲ್ಲಿ ಪ್ರಚಾರ ನಡೆಸುತ್ತೇನೆ. ಹಾಗೆಂದು ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವಷ್ಟು ಸಮಯವೂ ಇಲ್ಲ, ಮಾಡುವುದೂ ಇಲ್ಲ. ಕೆಲವು ಕಡೆಗಳಲ್ಲಿ ಮಾತ್ರ ಪ್ರಚಾರ ಮಾಡುತ್ತೇನೆ’ ಎಂದು ಹೇಳಿರುವ ಕುರಿತು ವರದಿಯಾಗಿದೆ.

ಸುದೀಪ್‌ರವರ ಈ ನಿಲುವು ಮತ್ತು ಅವರಾಡಿದ ಮಾತುಗಳ ಕುರಿತು ವಿಶ್ಲೇಷಣೆ ಆರಂಭಗೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ 'ಪುನೀತ್ ರಾಜಕುಮಾರವರ ಜೊತೆ ನಿಕಟ ಸಂಪರ್ಕ ಹೊಂದಿದ್ದರೂ ಕೂಡ ಬಡವರ ಪಾಲಿನ ಭಾಗ್ಯಗಳ ಸರದಾರ ಸಿದ್ದರಾಮಯ್ಯರವರು ರಾಜಕೀಯದ ಯಾವುದೇ ಸಂದಿಗ್ಧ ಸ್ಥಿತಿಯಲ್ಲೂ ಅಪ್ಪು ರವರನ್ನು ರಾಜಕೀಯ ಸೇರಿದಂತೆ ಯಾವುದೇ ಪ್ರಚಾರಕ್ಕೆ ಕರೆದಿರಲಿಲ್ಲ. ಏಕೆ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಸಿನೇಮಾ ನಟರನ್ನು ತಂದು ಪ್ರಚಾರ ಮಾಡುವ ಅವಶ್ಯಕತೆ ಇದ್ದಿರಲಿಲ್ಲ. ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಜನರ ಮುಂದೆ ಬಿಚ್ಚಿಟ್ಟರೆ ಅದುವೇ ಸಾಕಾಗುತ್ತಿತ್ತು ಆದರಿಂದು ಬಿಜೆಪಿ ಪಕ್ಷ ನಟ ಸುದೀಪ್ ರನ್ನು ಬಲವಂತವಾಗಿ ಚುನಾವಣಾ ಪ್ರಚಾರಕ್ಕೆ ಇಳಿಸಿದೆ. ಬಲವಂತವಾಗಿ ಎಂದು ಏಕೆ ಉಲ್ಲೇಖಿಸುತ್ತೇವೆಂದರೆ ಸ್ವತಃ ಸುದೀಪ್ ಹೇಳಿಕೊಂಡಿರುವ ಪ್ರಕಾರ ಒಂದೆಡೆ ಅವರು ಬಿಜೆಪಿ ಪಕ್ಷನ್ನು ಸೇರ್ಪಡೆಗೊಂಡಿಲ್ಲ ಎಂದು ಹೇಳಿಕೊಂಡಿದ್ದರೆ, ಇನ್ನೊಂದೆಡೆ ಕಷ್ಟಕಾಲದಲ್ಲಿ ನೆರವಾದ ಕಾರಣಕ್ಕಾಗಿ ತನ್ನ ಬ್ಯೂಸಿ ಸೆಡ್ಯೂಲ್ ನ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ ಕೆಲವೇ ಕೆಲವು ಕ್ಷೇತ್ರಗಳಲ್ಲಷ್ಟೇ ಪ್ರಚಾರ ನಡೆಸಲಿದ್ದಾರಂತೆ. ಅದ್ಯಾವ ಕಷ್ಟ ಕಾಲ ಮತ್ತು ಅದ್ಯಾವ ರೀತಿಯ ಸಹಾಯ ಸಿಕ್ಕಿದೆ ಎಂಬ ರಹಸ್ಯವನ್ನು ಅವರು ವಿವರಿಸಿ ಹೇಳಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಸುದೀಪ್ ರವರ ನಿಲುವನ್ನು ವಿರೋಧಿಸಿ ಹಲವರು ಕಾಮೆಂಟ್ ಮಾಡಿದ್ದಾರೆ.

'ಸುದೀಪ್ ಅವರಿಗೆದುರಾದ ಕಷ್ಟಗಳು ಏನು? ಬಸವರಾಜ ಬೊಮ್ಮಾಯಿಯವರು ಮಾಡಿದ್ದ ಸಹಾಯವೇನು? ಹಾಗೆ ಕಷ್ಟದಲ್ಲಿರುವವರಿಗೆ ಸಹಾಯವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಅಥವಾ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದಕ್ಕಾಗಿ ಈ ರೀತಿಯಲ್ಲಿ ಯಾರನ್ನಾದರೂ ದುರುಪಯೋಗ ಪಡಿಸಿಕೊಳ್ಳಬಹುದೇ ಅದಿರಲಿ ಇದೀಗ ವಿಷಯಕ್ಕೆ ಬರುವುದಾದರೆ, ಬೊಮ್ಮಾಯಿ ಸರ್ಕಾರ ಜನಪರ ಕೆಲಸ ಮಾಡಿದ್ದರೆ ಕಾಂಗ್ರೆಸ್ ಹೇಳಿದಂತೆ ತಮ್ಮ ಸಾಧನೆಗಳನ್ನು ಹೇಳಿಕೊಂಡು ಚುನಾವಣೆ ಎದುರಿಸಬಹುದಾಗಿತ್ತಲ್ಲವೇ? ಅದೇಕೆ ಚಿತ್ರನಟರ ಮೊರೆ ಹೋಗುತ್ತಿದ್ದಾರೆ?' ಎಂಬ ಪ್ರಶ್ನೆಗಳನ್ನು ಬಿಜೆಪಿಯೇತರ ಪಕ್ಷಗಳಲ್ಲಿನ ಅವರ ಅಭಿಮಾನಿಗಳು ಕೇಳಲಾರಂಬಿಸಿದ್ದಾರೆ.

Advertisement
Advertisement
Recent Posts
Advertisement