Advertisement

ಅಕ್ಕಿ ನಿರಾಕರಣೆಯ ಹಿಂದೆ ರಾಜ್ಯ ಬಿಜೆಪಿ ಕೈವಾಡವಿದೆ: ಜಿಲ್ಲಾ ಕಾಂಗ್ರೆಸ್ ಆರೋಪ.

Advertisement

"ಅನ್ನ ಭಾಗ್ಯದ ಅಕ್ಕಿ ಕೊಡಲು ಸಾಧ್ಯ ವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ" ಎಂಬ ಮಾಜಿ ಮುಖ್ಯಮಂತ್ರಿ ಆದಿಯಾಗಿ ಬಿಜೆಪಿ ನಾಯಕರ ಹೇಳಿಕೆಗಳು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ. ತಮ್ಮ ಆಡಳಿತದ ಅವದಿಯಲ್ಲಿ ಅನ್ನ ಭಾಗ್ಯದ ಅಕ್ಕಿಗೆ ಕೊಕ್ಕೆ ಹಾಕಿದ್ದ ಇವರ ಹೇಳಿಕೆಗಳ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಭಾರತ ವಿಶ್ವದ 2ನೇ ಅತಿದೊಡ್ಡ ಅಕ್ಕಿ ಉತ್ಪಾದನೆ ಹಾಗೂ ರಫ್ತುದಾರ ರಾಷ್ಟ್ರ. ವಾರ್ಷಿಕ ಸುಮಾರು 1200 ಲಕ್ಷ ಟನ್ ಅಕ್ಕಿ ಉತ್ಪಾದನೆಯಾದರೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಸುಮಾರು 220 ಲಕ್ಷ ಟನ್ ರಪ್ತು ಆಗುತ್ತದೆ. ಭಾರತೀಯ ಆಹಾರ ನಿಗಮದ ಅಕ್ಕಿ ಸಂಗ್ರಹದ ನಿರ್ದಿಷ್ಟ ಮಿತಿ 210ಲಕ್ಷ ಟನ್ನಿನ ಹೊರತಾಗಿಯೂ ನಿಗಮದಲ್ಲಿ 600 ಲಕ್ಷ ಟನ್ ಅಕ್ಕಿ ಸಂಗ್ರಹವಿದೆ ಎನ್ನಲಾಗಿದೆ. ಅಂದರೆ ನಿಗಮದಲ್ಲಿ 390 ಲಕ್ಷ ಟನ್ ಹೆಚ್ಚುವರಿ ಸ್ಡಾಕ್ ಇದೆ. ಅದರೊಂದಿಗೆ ನಿಗಮದಲ್ಲಿ ಈಗಾಗಲೆ 240 ಲಕ್ಷ ಟನ್ ಭತ್ತ ಸಂಗ್ರಹವಿದ್ದು ಇದರಿಂದ 140ಲಕ್ಷ ಟನ್ ಅಕ್ಕಿಯನ್ನು ನಿರೀಕ್ಷಿಸಬಹುದಾಗಿದೆ. ಅಂದರೆ ಕೇಂದ್ರ ಸರಕಾರದ ಅಧೀನದ ಸಂಸ್ಥೆ 'ಭಾರತೀಯ ಆಹಾರ‌ ನಿಗಮ' ಬಳಿ ಇರುವ ಪರೋಕ್ಷ ಅಕ್ಕಿ ಸಂಗ್ರಹ ಸುಮಾರು 740 ಲಕ್ಷ ಟನ್ ಆಗಿದೆ. ಇಂತಹ ಬೃಹತ್ ಉತ್ಪಾದನೆ ಮತ್ತು ಸಂಗ್ರಹದ ಹೊರತಾಗಿಯೂ ಕೇಂದ್ರ ಸರಕಾರ ರಾಜ್ಯದ ಅನ್ನ ಭಾಗ್ಯದ ಯೋಜನೆಗಾಗಿ 30 ಲಕ್ಷ ಟನ್ ಅಕ್ಕಿ ಬೇಡಿಕೆಯನ್ನು ತಿರಸ್ಕರಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡಿದ ಮಹಾಮೋಸ ಎಂದು ಕಾಂಗ್ರೆಸ್ ಹೇಳಿದೆ.

ಕೇಂದ್ರ ಸರಕಾರ ರಾಜ್ಯದ ಈ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವುದರ ಹಿಂದೆ ರಾಜ್ಯ ಬಿಜೆಪಿ ನಾಯಕರ ಸ್ಪಷ್ಟ ಕೈವಾಡ ಇದೆ. ರಾಜ್ಯ ಸರಕಾರವನ್ನು ವಚನ ಭ್ರಷ್ಟ ಎಂಬ ಅಪಾದನೆ ಹೊರಿಸಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಮಸಿ ಬಳಿಯುವ ಹುನ್ನಾರ ಇದರ ಹಿಂದಿದ್ದು ಬಿಜೆಪಿ ನಾಯಕರ ಈ ದ್ವಿಮುಖ ನಡೆಯನ್ನು ರಾಜ್ಯದ ಜನತೆ ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಭಾರತೀಯ ಆಹಾರ‌ ನಿಗಮದಿಂದ ಕೇಂದ್ರ ಸರಕಾರ ನಿಗದಿ ಪಡಿಸಿದ ಮಾರುಕಟ್ಟೆ ಬೆಲೆಯಲ್ಲಿ ಅಕ್ಕಿ ಗೋದಿ ಹಾಗೂ ಇತರೇ ಧಾನ್ಯಗಳನ್ನು ಖರೀದಿಸುವುದು ರಾಜ್ಯದ ಹಕ್ಕು. ಆದ್ಯತೆಯ ಮೇಲೆ ಕೊಡುವುದು ಕೇಂದ್ರದ ಕರ್ತವ್ಯ. ಕೇಂದ್ರ ಸರಕಾರದ ಈ ನಿರಾಕರಣೆ ಸಂವಿಧಾನ ವಿರೋಧಿಯಾಗಿದೆ. ಅಧಿಕಾರದ ಹಪಾಹಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಂಹತವರು ಇದನ್ನು ಪ್ರತಿಪಾದಿಸುವುದು ಪ್ರಜಾತಂತ್ರದ ಆರೋಗ್ಯಪೂರ್ಣ ನಡೆಯಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement