Advertisement

ಉಡುಪಿ: ಮೊಬೈಲ್ ಚಿತ್ರೀಕರಣ?; ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ!

Advertisement


"ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋವನ್ನು ಇತರ ವಿಧ್ಯಾರ್ಥಿನಿಯರಿಂದ ಮೊಬೈಲ್ ಮೂಲಕ ಚಿತ್ರೀಕರಣ ಮಾಡಲಾಗಿದೆ" ಎಂಬ ಆರೋಪದ ಕುರಿತು ಪ್ರಕರಣ ನಡೆದಿದೆ ಎನ್ನಲಾದ ಉಡುಪಿಯ ಕಾಲೇಜಿನ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿರುವ ಕುರಿತು ಮತ್ತು "ಸರಿಯಾದ ವಿಚಾರ ತಿಳಿಯದೆ ತಪ್ಪು ಮಾಹಿತಿಯನ್ನು ಯಾರೂ ಪಸರಿಸಬೇಡಿ ಮತ್ತು ಯಾವುದೇ ಕಾರಣಕ್ಕೂ ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ. ಇದರಿಂದ ಸಂತ್ರಸ್ಥ ವಿಧ್ಯಾರ್ಥಿನಿಯ ಭವಿಷ್ಯದ ಜೊತೆಗೆ ಕಾಲೇಜಿನ ಇತರ ವಿಧ್ಯಾರ್ಥಿಗಳ ಭವಿಷ್ಯ ಹಾಳಾಗುವುದಲ್ಲದೇ, ಸಮಾಜದ ಸ್ವಾಸ್ಥ್ಯ ಕೆಡುತ್ತದೆ‌. ಆ ಕುರಿತು ದಯವಿಟ್ಟು ಸಹಕರಿಸಿ" ಎಂದು ಮನವಿ ಮಾಡಿರುವ ಕುರಿತು ವರದಿಯಾಗಿದೆ.

ಆಡಳಿತ ಮಂಡಳಿಯ ಪ್ರಮುಖರು ಈ ಕುರಿತು ಪತ್ರಕರ್ತರಿಗೆ ವಿವರಗಳನ್ನು ಒದಗಿಸಿದ್ದು "ಪ್ರಕರಣದ ಮೂವರು ಹುಡುಗಿಯರು ಒಂದೇ ಕ್ಲಾಸ್‌ನವರಾಗಿದ್ದು, ಇನ್ನೊರ್ವ ಹುಡುಗಿ ಮತ್ತೊಂದು ಕ್ಲಾಸ್ ನವಳಾಗಿದ್ದು ಎಲ್ಲರೂ ಕಾಲೇಜ್ ಮೇಟ್ ಆಗಿರುವ ಕಾರಣ, ಯಾರ ಭವಿಷ್ಯವೂ ಹಾಳಾಗಬಾರದು ಎಂಬ ಕಾರಣಕ್ಕಾಗಿ ತಾನು ದೂರು ಕೊಡುವುದಿಲ್ಲ ಎಂದು ಸಂತ್ರಸ್ಥ ವಿಧ್ಯಾರ್ಥಿನಿ ಹೇಳಿದ್ದಾಳೆ" ಎಂದವರು ಹೇಳಿದ್ದಾರೆ.

ಹಾಗೆಯೇ ಆ ಸಂತ್ರಸ್ಥ ವಿಧ್ಯಾರ್ಥಿನಿ "ಇದು ತನ್ನದೇ ಕಾಲೇಜಿನ ವಿಧ್ಯಾರ್ಥಿನಿಯರು ಕೇವಲ ತಮಾಷೆಗಾಗಿ ಮಾಡಿರುವುದರಿಂದ ನನ್ನ ಭವಿಷ್ಯ ಮತ್ತು ಆ ಮೂವರ ಭವಿಷ್ಯವೂ ಮುಖ್ಯ ಆ ಕಾರಣಕ್ಕಾಗಿ ದೂರು ನೀಡುವುದಿಲ್ಲ" ಎಂದು ಬರೆದು ಕೊಟ್ಟಿದ್ದಾಳೆ ಎಂದು ವಿವರಿಸಿರುವ ಕುರಿತು ವರದಿ ಹೇಳಿದೆ.

"ಇಂತಹ ಘಟನೆಗಳು ನಡೆಯಬಾರದು ಎಂಬ ಮುಂದಾಲೋಚನೆಯಿಂದ ನಮ್ಮ ಕಾಲೇಜಿನಲ್ಲಿ ಮೊದಲಿನಿಂದಲೂ ಮೊಬೈಲ್ ಬ್ಯಾನ್ ಮಾಡಲಾಗಿತ್ತು ಮತ್ತು ನಮ್ಮ ವಿಧ್ಯಾರ್ಥಿಗಳ ಸುರಕ್ಷತೆ ಕೂಡ ನಮ್ಮ ಜವಾಬ್ದಾರಿಯಾಗಿದೆ." ಎಂದವರು ವಿವರಣೆ ನೀಡಿರುವ ಕುರಿತು ವರದಿಯಾಗಿದೆ.

"ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಮೊಬೈಲ್ ನಿಷೇಧದ ಹೊರತಾಗಿಯೂ ಇಲ್ಲಿಗೆ ಮೊಬೈಲ್ ತಂದದ್ದು ಮತ್ತು ಚಿತ್ರೀಕರಣ ಮಾಡಿದ್ದು ತಪ್ಪು" ಹಾಗಾಗಿ ತಪ್ಪಿತಸ್ಥರನ್ನು ತನಿಖೆ ಮಾಡಿ ಕೂಡಲೇ ಸಸ್ಪೆಂಡ್ ಮಾಡಿದ್ದೇವೆ.

"ಕಾಲೇಜಿನ ವಿಧ್ಯಾರ್ಥಿಗಳಲ್ಲಿ ನಾವು ಧರ್ಮವನ್ನು ನೋಡುವುದಿಲ್ಲ. ಇಲ್ಲಿ ಎಲ್ಲಾ ವಿಧ್ಯಾರ್ಥಿಗಳು ಧರ್ಮ ಮತ್ತು ಜಾತಿಯನ್ನು ಮರೆತು ವಿದ್ಯೆ ಕಲಿಯುತ್ತಿದ್ದಾರೆ. ಹಾಗೆಯೇ ಚಿತ್ರೀಕರಿಸಿದ ವಿಧ್ಯಾರ್ಥಿನಿಯರ ಧರ್ಮದವರೇ ಕಾಲೇಜಿನಲ್ಲಿ ನಡೆದ ಈ ಘಟನೆಯ ವಿರುದ್ಧ ಪ್ರತಿಭಟನೆ ಮಾಡಿದ್ದರು" ಎಂದು ಹೇಳಿದ್ದಾರೆ.

"ನೂರಾರು ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದಾಗಿದೆ. ಇಂತಹ ವದಂತಿ ಹರಡುವುದು ಸರಿಯಲ್ಲ, ಸತ್ಯ ವಿಚಾರಗಳನ್ನು ತಿಳಿಯದೆ ಯಾರೂ ತಪ್ಪು ಮಾಹಿತಿಗಳನ್ನು ಹರಡದಿರಿ, ಇದರಿಂದ ಕಾಲೇಜಿನ ಇತರ ವಿಧ್ಯಾರ್ಥಿನಿಯರ ಶೈಕ್ಷಣಿಕ- ಸಾಮಾಜಿಕ ಭವಿಷ್ಯ ಹಾಳಾಗುವುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವೂ ಕೆಡಲಿದೆ" ಎಂದವರು ಮನವಿ ಮಾಡಿರುವ ಕುರಿತು ವರದಿ ಹೇಳಿದೆ.

Advertisement
Advertisement
Recent Posts
Advertisement