Advertisement

ಮೋದಿ ಸರಕಾರದ ಚಾಲಕರ ವಿರೋಧಿ ನೀತಿ: ಕುಂದಾಪುರದಲ್ಲಿ ಪ್ರತಿಭಟನೆ

Advertisement

ಕೇಂದ್ರ ಒಕ್ಕೂಟ ಸರ್ಕಾರವು ಇತ್ತೀಚೆಗೆ ಅಂಗೀಕರಿಸಿದ ಭಾರತೀಯ ನ್ಯಾಯ ಸಂಹಿತೆ 2023 ರ ಅನ್ವಯ ಹಿಟ್ ಅಂಡ್ ರನ್ ಪ್ರಕರಣವನ್ನು ಕ್ರಿವಿುನಲ್ ಕಾಯಿದೆ ಅಡಿ ತಂದು ಚಾಲಕರಿಗೆ 7 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿದಿಸುವ ಕಾನೂನನ್ನು ಹಾಗೂ ಚಾಲಕರಿಗೆ ಶಾಸನವಾಗಿರುವ ಈ ಕಾಯಿದೆಯನ್ನು ಕೇಂದ್ರದ ಒಕ್ಕೂಟ ಸರಕಾರ ಕೂಡಲೆ ಹಿಂಪಡೆಯ ಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ( CITU) ಇಂದು ಕುಂದಾಪುರ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ತಹಶಿಲ್ದಾರರಿಗೆ ಮನವಿ ಸಲ್ಲಿಸಿತು.

ಸಭೆಯನ್ನುದ್ದೇಶಿಸಿ CITU ತಾಲೂಕು ಸಂಚಾಲಕರು ಹಾಗೂ ನಮ್ಮ ಸಂಘದ ಸಂಘಟನ ಕಾರ್ಯದರ್ಶಿ ಚಂದ್ರಶೇಖರ ವಿ. ಮಾತನಾಡಿದರು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ್ ವಿ., ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಉಪಾಧ್ಯಕ್ಷರಾದ ಎನ್ ಉಮೇಶ್, ರವೀಂದ್ರ ಶೆಟ್ಟಿ, ಕೃಷ್ಣ ಪೂಜಾರಿ, ಗೋವಿಂದ ಗುಡಾರ ಹಕ್ಲು, ಅರುಣ ಕುಮಾರ್, ಜನಾರ್ದನ ಹಟ್ಟಿಯಂಗಡಿ, ಕೇಶವ ಪಾರಿಜಾತ. ಕೋಶಾಧಿಕಾರಿ ಸಂತೋಷ ಕಲ್ಲಾಗರ, ರವಿ ವಿ. ಎಂ ಉಪಸ್ಥಿತರಿದ್ದರು.

Advertisement
Advertisement
Recent Posts
Advertisement