ಇದೀಗ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಅಬ್ಬರದ ತಯಾರಿ ನಡೆಸಿದೆ. ಬಿಜೆಪಿಗರಂತೂ ಮೋದಿ ಮೂರನೆಯ ಬಾರಿಗೆ ಪ್ರಧಾನಿ ಆಗಿಯೇ ಬಿಟ್ಟರು ಎಂಬಂತೆ ಮಾತನಾಡಲು ಆರಂಭಿಸಿದ್ದಾರೆ. ಬಿಜೆಪಿಯ ಚುಕ್ಕಾಣಿ ಹಿಡಿದಿರುವ ನಾಗ್ಪುರಿ ಮನುವಾದಿಗಳು "ಸಂವಿಧಾನವನ್ನು ಬದಲಾಯಿಸಲು ಬೇಕಾಗುವ 400 ಸೀಟು ಬಿಜೆಪಿ ಗೆಲ್ಲಲಿದೆ" ಎಂದು ಕೂಡ ಸಂಸದ ಅನಂತ ಹೆಗ್ಡೆಯವರ ಬಾಯಲ್ಲಿ ಹೇಳಿಸಿದ್ದಾರೆ. ಮನುವಾದಿಗಳು ಸಂವಿಧಾನವನ್ನು ಬದಲಾಯಿಸುವುದರಿಂದ ಅಹಿಂದ ವರ್ಗ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ದ ಹಕ್ಕುಗಳು ಕಸಿಯಲ್ಪಡುತ್ತವೆ. ಆ ಮೂಲಕ ನಮ್ಮ ಮುಂದಿನ ಜನಾಂಗದ ಬದುಕು ಶಿಲಾಯುಗದ ಜನರ ಮಟ್ಟಕ್ಕೆ ಕುಸಿಯಲಿದೆ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದ ಬಿಜೆಪಿಯ ಈ ಅಂಧಭಕ್ತರುಗಳು ಆ ಹೇಳಿಕೆಯನ್ನು ಕೂಡ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ದೇಶದಾದ್ಯಂತ ಕಾಂಗ್ರೆಸ್ ಅಬ್ಬರದ ಜನಪ್ರಿಯತೆಯ ಅಲೆಯನ್ನು ಸೃಷ್ಟಿಸಿದೆ. ರಾಹುಲ್ ಗಾಂಧಿಯವರು ಕರ್ನಾಟಕದ ಗ್ಯಾರಂಟಿ ಮಾದರಿಯಲ್ಲಿ ಕೇಂದ್ರದಲ್ಲಿ ಈಗಾಗಲೇ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆ ಗ್ಯಾರಂಟಿ ಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಮಾಡಿರುವ ಮೋಡಿಯನ್ನು ಕಣ್ಣಾರೆ ಕಂಡಿರುವ ದೇಶದ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಚಿತ್ತ ಹರಿಸುವ ಸಕಲ ಸಾಧ್ಯತೆಗಳೂ ಕಂಡುಬರುತ್ತಿದೆ.
ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣಾ ಸಂಧರ್ಭದಲ್ಲಿ "ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, 30ರೂಪಾಯಿಗೆ ಪೆಟ್ರೋಲ್, 300 ರೂಪಾಯಿಗೆ ಗ್ಯಾಸ್, ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15ಲಕ್ಷ ಹಾಕುವ ಆಶ್ವಾಸನೆ" ಗಳನ್ನು ನೀಡಿ, ನೋಟುಬ್ಯಾನ್- ಜಿಎಸ್‌ಟಿ ಮೂಲಕ ಅದೇ ಜನರ ಸುಲಿಗೆ ಮಾಡಿದ್ದನ್ನು ಈ ದೇಶದ ಮತದಾರ ಮರೆತಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಸಾಗಾಟ ವೆಚ್ಚ ಹೆಚ್ಚಳಗೊಂಡು ಎಣ್ಣೆ, ಬೇಳೆ, ಕಾಳು ಮುಂತಾದ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರಿದ್ದನ್ನು ಮರೆತಿಲ್ಲ. ಅಡುಗೆ ಗ್ಯಾಸ್ ಮೂರು ಪಟ್ಟು ಹೆಚ್ಚು ಮಾಡಿದ್ದನ್ನು ಕೂಡ ಮರೆತಿಲ್ಲ. ದೇಶದ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಚುನಾವಣಾ ಬಾಂಡ್ ಕೊಡುವ ಖಾಸಗಿ ಉಧ್ಯಮಿಗಳಿಗೆ ಮೂರುಕಾಸಿನ ಬೆಲೆಗೆ ಮಾಡಿದ್ದನ್ನು ಮರೆತಿಲ್ಲ. ಕೊರೊನಾ ಮುಂತಾದ ದೇಶದ ಗಂಡಾಂತರದ ಸಂಧರ್ಬಕ್ಕೆಂದು ಮೀಸಲಿಟ್ಟ ಆರ್ಬಿಐ ರಿಸರ್ವ್ ಫಂಡನ್ನು ಸರ್ಕಾರದ ವಶಕ್ಕೆ ಅದೇ ಖಾಸಗಿ ಉಧ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದನ್ನು ಜನ ಮರೆತಿಲ್ಲ. ಬಿಜೆಪಿಗರು ಬಹುಶಃ ಶ್ರೀರಾಮನ ಹೆಸರು ಹೇಳಿದೊಡನೆ, ಹಿಂದೂ ಮುಸ್ಲಿಂ ಪಾಕಿಸ್ತಾನ ಎಂದೊಡನೆ ಜನ ತಮಗೆ ಓಟು ಹಾಕುತ್ತಾರೆ ಎಂಬ ಹುಚ್ಚುಭ್ರಮೆಯಲ್ಲಿ ಈಗಲೂ ಇದ್ದಾರೆ.
ಆದರೆ ಈ ನಡುವೆ... ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ 135ಕ್ಕೂ ಹೆಚ್ಚು ಸೀಟು ಗಳಿಸಲಿದೆ ಎಂದು, ಕೊರೊನಾ ಮಹಾಮಾರಿ ಅಪ್ಪಳಿಸುವ ಕುರಿತು ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕುರಿತು ಕೂಡ ಭವಿಷ್ಯ ಹೇಳುವ ಮೂಲಕ ಪ್ರಖ್ಯಾತಿ ಪಡೆದಿದ್ದ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿಯವರು ಇದೀಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ಕೇಂದ್ರ ಸರ್ಕಾರದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ ಹಾಗೂ ಈ ಬಾರಿ ಈ ದೇಶದಲ್ಲಿ ಮಾಹಿಳಾ ಪ್ರಧಾನಿ ಪಟ್ಟಕ್ಕೆ ಏರಲಿದ್ದಾರೆ ಎಂದಿದ್ದಾರೆ. ಅಲ್ಲದೇ ಮಹಿಳಾ ಪ್ರಧಾನಿಯಾಗಿ ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕ ಪ್ರದಾನಿ ಹುದ್ದೆಗೆ ಏರಲಿದ್ದಾರೆ ಎಂದು ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ.
"ಈ ಬಾರಿ ಸ್ತ್ರೀಯೊಬ್ಬಳು, ಪುರುಷನ ಎದುರು ದುರ್ಗೆಯಾಗಿ ಸೆಟೆದು ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನ ಪಡೆಯುವಳು. ತಾಯಿ ಹೃದಯದಿಂದ ತನ್ನ ಅಧಿಕಾರವನ್ನು ಪುರುಷರಿಗೆ ಬಿಟ್ಟುಕೊಡುವಳು. ಹೀಗಂತಾ ಕಾಲಜ್ಞಾನದಲ್ಲಿ ಉಲ್ಲೇಖವಾಗಿದೆ" ಎಂದವರು ಭವಿಷ್ಯ ನುಡಿದಿರುವ ಕುರಿತು ವರದಿಯಾಗಿದೆ.
ಕಾಲಜ್ಞಾನದ ಪ್ರಕಾರ ಪ್ರಧಾನಿಯಾಗೋ ಯೋಗ ಹೊಂದಿರೋದು ಪ್ರಿಯಾಂಕ ಗಾಂಧಿಯವರು. ಆದರೆ ಆ ಬಳಿಕ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಅಥವಾ ರಾಹುಲ್ ಗಾಂಧಿಯವರಿಗೆ ಅಧಿಕಾರ ಬಿಟ್ಟು ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಿವರಾತ್ರಿಗೂ ಮೊದಲೇ ಚುನಾವಣೆ ನಡೆದಿದ್ದರೇ ಮೋದಿ ಅವರಿಗೆ ಪ್ರಧಾನಿಯಾಗೋ ಸಂಪೂರ್ಣ ಯೋಗವಿತ್ತು. ಆದರೇ ಈಗ ಮೋದಿ ಅವರಿಗೆ ಆ ಯೋಗ ಇಲ್ಲ. ಸದ್ಯ ಪ್ರಿಯಾಂಕ ಗಾಂಧಿಗೆ ಹಂಸಕ, ಚಂದ್ರಮಂಗಳ, ಬುಧಾಧಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗುವ ಅವಕಾಶ ಒದಗಿಬರಲಿದೆ. INDIA ಒಕ್ಕೂಟ ಪಕ್ಷಗಳ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಹ ಭವಿಷ್ಯ ಇದೆ ಎಂದು ಯಶ್ವಂತ ಗುರೂಜಿ ನೊಣವಿನಕೆರೆಯಲ್ಲಿ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದಿದ್ದ ಗುರೂಜಿ!
ಹೌದು, 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇಲ್ಲದ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ. 135 ಸ್ಥಾನಗಳಿಂದ ಈ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತ್ ಗುರೂಜಿ ಹೇಳಿದ್ದರು. ಆ ಭವಿಷ್ಯ ನಿಜವಾಗಿದೆ. ಅದರ ಜೊತೆ ಮುಖ್ಯಮಂತ್ರಿ ಆಯ್ಕೆ ಗೊಂದಲದ ವೇಳೆ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿ ಕೂಡ ನಿಜವಾಗಿದೆ.