Advertisement

ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ...

Advertisement

(ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಿಜೆಪಿಯ ಕಟ್ಟರ್ ಯುವ ಮುಖಂಡರೊಬ್ಬರು ಈ ಹಿಂದೆ ಹಂಚಿಕೊಂಡಿದ್ದ ಪೋಸ್ಟ್ ಇದು. ನಮ್ಮ ಓದುಗರಿಗಾಗಿ ಇಲ್ಲಿ ಪುನಃ ಪ್ರಕಟಿಸಲಾಗಿದೆ - ಚಂದ್ರಶೇಖರ ಶೆಟ್ಟಿ. ಸಂಪಾದಕರು. ಕನ್ನಡಮೀಡಿಯಾ ಡಾಟ್ ಕಾಂ)

ಜಯಪ್ರಕಾಶ್ ಹೆಗ್ಡೆಯವರನ್ನು ಕಮಲ ಪಕ್ಷಕ್ಕೆ ಕರೆ ತಂದು ಅನ್ಯಾಯ ಎಸಗಲಾಗುತ್ತಿದೆ ಎಂಬ ಕೂಗೊಂದು ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ಅದು ನಿಜವೂ ಕೂಡ... ಆ ಪಕ್ಷ ಈ ಪಕ್ಷ ಅನ್ನುವ ಸಿದ್ದಾಂತಗಳನ್ನ ಗಾಳಿಗೆ ತೂರಿಸಿ ರಾಜಕೀಯದ ತೂಕ ಕಂಡಾಗ ಜೆ.ಪಿ ಹೆಗ್ಡೆ ಒಬ್ಬ ಜನಪರ ಜನನಾಯಕ ಎಂಬುದು ಅವಿಭಜಿತ ಮಂಗಳೂರು (Udupi+ SouthCanara) ಒಪ್ಪಿಕೊಳ್ಳಲೆಬೇಕಾದ ಸತ್ಯ. ಅಧಿಕಾರ ಇರಲಿ ಇಲ್ಲದೆ ಇರಲಿ ಜನರ ಪರ ಏರು ಧ್ವನಿಯಾಗುವ ನಾಯಕನ್ನೊಬ್ಬನಿದ್ದರೆ ಅದು ಹೆಗ್ಡೆ ಅವರು ಮಾತ್ರ. ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಾರ್ಯಕರ್ತರಿಗಾಗಲಿ, ಮತದಾರರಿಗಾಗಲಿ ಸಮಸ್ಯೆ ಬಂದಾಗ ಕುಂದಾಪುರದಿಂದ ಡೆಲ್ಲಿಗೆ ತನ್ನದೆ ರಾಜಕೀಯ ಮಾರ್ಗದಲ್ಲಿ ಡೈರೆಕ್ಟ್ ಕನೆಕ್ಟ್ ಮಾಡುವ, ಸ್ಪಂದಿಸುವ ದಳವಾಯಿ ರಾಜಕಾರಣಿ ಒಬ್ಬರಿದ್ದರೆ ಅವರೆ ಕರಾವಳಿ ರಾಜಕೀಯದ ಹೈ ಎನರ್ಜಿ ಕೊರ್ಗಿ ಜಯಪ್ರಕಾಶ್ ಹೆಗ್ಡೆ.

ನಮ್ಮ ಕರ್ನಾಟಕದ ಬಿಜೆಪಿಯಲ್ಲೀಗ ಹೊಳೆವ ನಕ್ಷತ್ರಗಳನ್ನ ಗುರುತಿಸುವ ಪ್ರಕ್ರಿಯೆ ವಿರಳವಾಗಿದೆ, ಬರಿಯ ಮೊಳೆ ಹೊಡೆಯುವವರನ್ನ ಹೆಕ್ಕಿ ಲೀಡರ್ ಮಾಡಲು ಹೊರಟಂತಿದೆ. ಯಾಕೆ ಹೆಗ್ಡೆ ಬಿಜೆಪಿಯಲ್ಲಿ ನಾಯಕನಾಗಬಾರದು‌‌..? ನಮ್ಮ ಬಿಜೆಪಿಗರು ಇವರಿಗೊಂದು ಸೀಟ್ ಕೊಡಲು ತೇವಲಾಡುತ್ತಿರುವುದಾದರು ಯಾಕೆ..? ಇಲ್ಲಿ ಹೆಚ್ಚಿನವರಾರು ಸ್ವಂತ ಬಲದಲ್ಲಿ ಗೆದ್ದಿಲ್ಲಾ ಸ್ವಾಮಿ.! ಬೆರಳೆಣಿಕೆಯಷ್ಟು ಮಂದಿಯನ್ನು ಬಿಟ್ಟು ಮತ್ತೆಲ್ಲರು ಮೋದಿಜಿ ನಾಮ ನಾರಾಯಣ ಪಠಿಸಿಯೆ ಗೆದ್ದಿದ್ದು.! ಇನ್ಯಾವುದೊ ಪಕ್ಷದಿಂದ ಬಂದ ಎಬಲ್ ರಾಜಕಾರಣಿಗಳು ಇಲ್ಲಿ ಮಿನಿಸ್ಟರ್ ಆಗಿಲ್ವ..? ಮುಂದೆ ನಡೆಯುವ ಚುನಾವಣೆಯಲ್ಲಿ ಹೆಗ್ಡೆಯವರಿಗೊಂದು ಅವಕಾಶ ಕೊಡುದರಲ್ಲಿ ಏನು ತಪ್ಪಿದೆ.. ಅವರೊಬ್ಬ ಪಕ್ವತೆಯ, ಪ್ರಬುದ್ಧ, ಪಾರ್ಲಿಮೆಂಟನಲ್ಲು ತಲೆಯತ್ತಿ ಪಲಾಯನ ಇಲ್ಲದೆ ಯಾರ ಎದುರಾದರು ನೇರಾ ನೇರಾ ವಾದ ಮಾಡುವ ತಾಕತ್ತಿರುವ ರಾಜನೀತಿಜ್ಞ...!!
ಕರಾವಳಿಯಲ್ಲಿ ಮೀನುಗಾರರ ಅಭಿವೃದ್ದಿ ಎಂಬುದು ಡಬಲ್ ಕಾಟ್ ಮೇಲೆ ಹಾಯಾಗಿ ಮಲಗಿತ್ತು. 1994ರಲ್ಲಿ ಬಂದರು ಮತ್ತು ಮೀನುಗಾರಿಕೆ ಮಂತ್ರಿಯಾದ ಹೆಗ್ಡೆಯವರು ನಡು ಸಮುದ್ರದಲ್ಲಿ ಮೀನು ಹಿಡಿವ ಫಿಶರ್‌ಮ್ಯಾನ್ ಗಳ ಜೀವಗಳಿಗೂ ಒಂದು ಬೆಲೆ ಇದೆ ಎಂದು ತೋರಿಸಿಕೊಟ್ಟರು‌. ಗಂಗೊಳ್ಳಿಯಲ್ಲಾದ ಬೋಟು ದುರಂತದಲ್ಲಿ ಕೋಟ ಪಡುಕರೆ ಸುತ್ತಮತ್ತಲಿನ 11 ಜನ ದುರ್ಮರಣಗೊಂಡಾಗ ಅಲ್ಲೆ ಪೊಸ್ಟ್ ಮಾರ್ಟ್‌ಮ್ ಮಾಡಿಸಿ ಸತ್ತವರ ಮನೆಗೆ ಆ ಕಾಲದಲ್ಲೆ 5 ರಿಂದ 6 ಲಕ್ಷ ಹಣವನ್ನ ಸರ್ಕಾರಕ್ಕೆ ಒತ್ತಾಯಿಸಿ ತಂದು ಅವರ ಮನೆಯವರಿಗೆ ಮನೆಬಾಗಿಲಿಗೆ ತಂದು ಕೊಟ್ಟರು. ಮೊದಲ ಭಾರಿಗೆ ಸರ್ಕಾರ ಮೀನುಗಾರರ ಪರ ಇದೆ ಎಂದು ನಿರೂಪಿಸಿದರು. ಈಗಲು ನಮ್ಮ ಜನ ಅದನ್ನ ಮರೆತಿಲ್ಲ.‌ ಮಲ್ಪೆಯ ಹೂಡೆಯಿಂದ ಕುಂದಾಪುರ ಕೊಡಿ ತನಕ ಕಡಲ ಕೊರೆತದ ಸಂಧರ್ಭದಲ್ಲಿ ಮೊಟ್ಟ ಮೊದಲನೆಯದಾಗಿ ಸಮುದ್ರಕ್ಕೆ ತಡೆಗೊಡೆ ನಿರ್ಮಾಣ ಮಾಡಿಸಿದ್ದು ಇದೆ ಹೆಗ್ಡೆಯವರು. ಸಮುದ್ರದಿಂದ 25 ಮೀಟರ್ ದೂರ ಇರುವ ನಮ್ಮ ಮನೆಯವರಿಗೂ ಅದಾದ ನಂತರವೆ ರಾತ್ರಿಯ ಸುಖನಿದ್ರೆ.. ಮಳೆಗಾಲದಲ್ಲಿ ನಮ್ಮನ್ನ ಕಾಯುವ ಕಡಲದಂಡೆಯ ಆ ಕಲ್ಲುಗಳು ಜಯಪ್ರಕಾಶ್ ಹಗ್ಡೆಯವರ ಯಶೋಗಾಥೆ ಹೇಳುತ್ತದೆ.

ಬೈಂದೂರು, ಕುಂದಾಪುರ ಜನತೆಗೆ ಮಂಗಳೂರಿಗೆ ಹೋಗುವುದು ದೂರ ಆಗುತ್ತದೆ ಎನ್ನುವ ಕಾರಣಕ್ಕೆ ದಕ್ಷಿಣ ಕನ್ನಡವನ್ನ ಎರಡು ಮಾಡಿ ಉಡುಪಿ ಎಂಬ ಸುಂದರ ಜಿಲ್ಲೆಯ ನಿರ್ಮಾಣ ಮಾಡಿದರು. ನಮ್ಮ ಕೆಲಸಗಳು ಹತ್ತಿರವಾದವು. ಇಲ್ಲವಾದಲ್ಲಿ ಈಗಲು ರಜಾತಾದ್ರಿಯ ಬದಲು ಮತ್ತೆ ಆರವತ್ತು ಕಿಲೋ ಮೀಟರ್ ದೂರ ಹೊಗಿ ಸರ್ಕಾರಿ ಕಛೇರಿಗಳಲ್ಲೆ ಪರದಾಡಬೇಕಿತ್ತು. ಆ ಅಲ್ಪವಧಿಯಲ್ಲೆ ಅವರು ಅದೆಷ್ಟೋ ಸೇತುವೆಗಳನ್ನ ನಿರ್ಮಿಸಿದರು, ಕೆಲವೊಂದಕ್ಕೆ ನೀಲಿ ನಕ್ಷೆ ರೂಪಿಸಿದರು,
ಅದಕ್ಕೆ ಅವರನ್ನ ಬ್ರಿಡ್ಜ್ ಮ್ಯಾನ್ ಅನ್ನುವುದು. ಕುಂದಾಪುರ ಇಬ್ಬಾಗ ಆಗಬಾರದೆಂಬ ಕಾರಣಕ್ಕೆ ವಿರೋಧದ ನಡುವೆಯು ಪ್ಲೈ ಒವರ್ ರೂಪುರೇಶೆ ರಚಿಸಿದ ಕರಾವಳಿಯ ಸಂಪರ್ಕ ಕ್ರಾಂತಿಯ ಹರಿಕಾರ ನಮ್ಮ ಜೆ.ಪಿ ಹೆಗ್ಡೆಯವರು..

ಇನ್ನೆಷ್ಟು ಹೇಳುವುದು.. ಹೆಗ್ಡೆವರದ್ದು ಸಾಧನೆಯ ಸಾಗರ. ನಾನು ಹೇಳಿದ್ದು ಬೊಗಸೆಯಷ್ಟು‌. ನಾವು ಕೊನೆಯ ಭಾರಿಯ ಲೋಕಸಭೆ ಚುನಾವಣೆಯಲ್ಲು ಕೂಡ ಬೊಬ್ಬೆ ಹೊಡೆದು ಜಾಲಾತಾಣದಲ್ಲಿ ಸಂಚಲನ ಮೂಡಿಸಿ ಹೆಗ್ಡೆಯವರಿಗೆ ಟಿಕೇಟ್ ಸಿಗಲೆ ಬೇಕು ಎಂಬ ಹೊರಾಟ ಕೊಟ್ಟರು ಅದು ಐದು ಪೈಸೆಗೂ ಪ್ರಯೋಜನ ಬರಲಿಲ್ಲ. ನನ್ನ ಮಿತ್ರರ ಮೇಲೊಂದು ಕೇಸು ಬಿತ್ತು ಬಿಟ್ಟರೆ ಸೀಟು ಸಿಗಲಿಲ್ಲ. ಈಗ ಮತ್ತೊಂದು ಸುತ್ತಿನ ಅಭಿಮಾನ ಸಮರ ಶುರುವಾಗಿದೆ. ಮಾಯಾವಾಗುವ ರಾಜಕಾರಣಿಗಳ ಬದಲು ಈ ಭಾರಿಯಾದರು ನಮ್ಮ ಪಕ್ಷ ಹೆಗ್ಡೆ ಅಂತ ಜನಸ್ನೇಹಿ ನಾಯಕನಿಗೆ ಮಣೆಹಾಕುತ್ತದೆ ಎಂಬ ವಿಶ್ವಾಸವಿದೆ.

Advertisement
Advertisement
Recent Posts
Advertisement