Advertisement

ಡಾ. ಕಕ್ಕಿಲ್ಲಾಯರಿಂದ ಮುಖ್ಯಮಂತ್ರಿ ಗಳಿಗೊಂದು ಬಹಿರಂಗ ಪತ್ರ.

Advertisement

ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ರವರು ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿಗಳ ಕುರಿತಾಗಿ ಶ್ಲಾಘಿಸಿ, ಅದರ ಅಗತ್ಯತೆಯ ಕುರಿತಾಗಿ ಜನರಿಗೆ ಬಿಡಿಸಿ ಹೇಳುವಂತೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

(ಡಾ. ಶ್ರೀನಿವಾಸ ಕಕ್ಕಿಲ್ಲಾಯರವರು ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಬಿ.ವಿ ಕಕ್ಕಿಲ್ಲಾಯ ಅವರ ಪುತ್ರರಾಗಿದ್ದಾರೆ. ಬ್ರಿಟಿಷರ ವಿರುದ್ಧ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಬಿ.ವಿ ಕಕ್ಕಿಲ್ಲಾಯ ರವರು ಕಮ್ಯುನಿಸ್ಟ್ ಪಕ್ಷದ ನೇತೃತ್ವದ "ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್" ಸದಸ್ಯರಾಗಿದ್ದರು. 1942ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು. ಮದ್ರಾಸ್ ಅಸೆಂಬ್ಲಿಯಿಂದ ಸಿಪಿಐ ಪಕ್ಷ ಬಿ.ವಿ ಕಕ್ಕಿಲ್ಲಾಯ ಅವರನ್ನು ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಮಾಡಿತ್ತು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕೂಡ ಬಿ.ವಿ ಕಕ್ಕಿಲಾಯರವರು ಸಕ್ರಿಯರಾಗಿದ್ದರು. ಅವರು 1972ರಲ್ಲಿ ವಿಧಾನಸಭೆಗೆ ಬಂಟ್ವಾಳದಿಂದ ಆಯ್ಕೆಯಾಗಿದ್ದರು ಮತ್ತು
1978ರಲ್ಲಿ ವಿಧಾನಸಭೆಗೆ ವಿಟ್ಲದಿಂದ ಆಯ್ಕೆಯಾಗಿದ್ದರು.)

ಬಹಿರಂಗ ಪತ್ರದ ವಿವರ:

ಮಾನ್ಯ ಮುಖ್ಯಮಂತ್ರಿಗಳೇ,
ತಾವು ರಾಜ್ಯದ ಬಡಜನರಿಗೆ ನೀಡುತ್ತಿರುವ ಭಾಗ್ಯಗಳಿಗಾಗಿ ಸಂಪನ್ಮೂಲ ಕ್ರೂಡೀಕರಿಸಲು ಕಷ್ಟ ಪಡುತ್ತಿರುವುದು ಸ್ಪಷ್ಟವಾಗಿದೆ. ಆದರೆ ಇಷ್ಟು ಕಷ್ಟಪಟ್ಟು ಈ ಭಾಗ್ಯಗಳನ್ನು ಜನರಿಗೆ ಕೊಡಬೇಕಾದ ಅಗತ್ಯವೇನು, ಅಂಥ ಪರಿಸ್ಥಿತಿ ಹೇಗೆ ಉದ್ಭವಿಸಿತು ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಡವೇ?

ಮೋದಿ ಸರಕಾರವು ಕಳೆದ ಹತ್ತು ವರ್ಷಗಳಲ್ಲಿ ಒಂದರ ಹಿಂದೊಂದರಂತೆ ಮಾಡಿದ ನೋಟು ರದ್ದತಿ, ಜಿಎಸ್ ಟಿ, ಲಾಕ್ ಡೌನ್ ಮುಂತಾದ ಅವೈಜ್ಞಾನಿಕ, ಅಮಾನವೀಯ ಕೆಲಸಗಳು, ಆರ್ಥಿಕ - ಸಾಮಾಜಿಕ ಅಸ್ಥಿರತೆ, ಬೆಲೆಯೇರಿಕೆ, ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕವಾಗಿ ಹಿಂದುಳಿಯುವಿಕೆ, ಇವುಗಳಿಂದಾಗಿ ಹೂಡಿಕೆಗೆ ಹಿನ್ನಡೆ, ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡದಿರುವುದು, ಇವೆಲ್ಲವುಗಳಿಂದ ವಿಪರೀತ ನಿರುದ್ಯೋಗ, ಇವೇ ಕಾರಣಗಳಿಂದ ಜನರು ಅತೀವ ಕಷ್ಟಗಳನ್ನು ಅನುಭವಿಸುತ್ತಿರುವುದು ಮತ್ತು ಮೋದಿ ಸರಕಾರದ ತಪ್ಪು ನೀತಿಗಳಿಂದ ಜನರಿಗಾಗಿರುವ ಕಷ್ಟಗಳನ್ನು ನೀಗಿಸುವುದಕ್ಕಾಗಿಯೇ ನೀವು ಈ ಭಾಗ್ಯಗಳನ್ನು ಬಡವರಿಗೆ ನೀಡಿರುವುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ, ಗಟ್ಟಿಯಾಗಿ, ವ್ಯಾಪಕವಾಗಿ ಜನರಿಗೆ ತಿಳಿಸುವುದು ಅತ್ಯಗತ್ಯವಾಗಿದೆ. ಈ ಕೆಲಸ ಲೋಕಸಭಾ ಚುನಾವಣೆಗೆ ಮೊದಲೇ ರಾಜ್ಯದಾದ್ಯಂತ ಆಗಬೇಕಿತ್ತು, ಈಗಲಾದರೂ ಅದನ್ನು ಮಾಡಿ.

ನಮಸ್ಕಾರ.

Advertisement
Advertisement
Recent Posts
Advertisement