Advertisement

ಕಬ್ಬಿಣದ ಬೇಲಿ- ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿ: ಸದಸ್ಯರ ಆಕ್ರೋಶ

Advertisement

ಕುಂದಾಪುರ ಪುರಸಭೆಯ ಮುಖ್ಯರಸ್ತೆಯಲ್ಲಿರುವ ಪಾರಿಜಾತ ಹೋಟೆಲ್ ಪಕ್ಕದಲ್ಲಿರುವ ಖಾಸಗಿ ಕಟ್ಟಡದ ಎದುರು ಕಾನೂನು ಬಾಹಿರವಾಗಿ ರಸ್ತೆಯ ಬದಿಯಲ್ಲಿ ನಿರ್ಮಿಸುತ್ತಿರುವ ಕಬ್ಬಿಣದ ಗೇಟ್ ನ ಬಗ್ಗೆ ಪುರಸಭಾ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯತನ ಅಕ್ಷಮ್ಯವಾದುದು ಎಂದು ಪುರಸಭೆಯ ಸದಸ್ಯರು, ಮಾಜಿ ಅಧ್ಯಕ್ಷರಾದ ಶ್ರೀಮತಿ ಪಿ.ದೇವಕಿ ಸಣ್ಣಯ್ಯ ಹಾಗೂ ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭಾ ವ್ಯಾಪ್ತಿಯಲ್ಲಿ ವಾಹನ ಮಾಲಕರು ಈಗಾಗಲೇ ಪಾರ್ಕಿಂಗ್ ಗೇ ಸ್ಥಳವಿಲ್ಲದೆ ನಲುಗುತ್ತಿದ್ದು ಅಂತಹ ಸನ್ನಿವೇಶದ ನಡುವೆಯೂ ಯಾವುದೇ ಅಧಿಕೃತ ಪರ್ಮಿಶನ್ ಅಥವಾ ಪರವಾನಿಗೆ ಇಲ್ಲದೆ ಮತ್ತು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ್ದರೂ ಪುರಸಭೆಯ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿತನದಿಂದ ಮುಖ್ಯ ರಸ್ತೆಯ ಉದ್ದಕ್ಕೂ ಕಬ್ಬಿಣದ ಗೇಟ್ ಹಾಕಿರುವುದು ಮತ್ತು ಪುರಸಭೆಯ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತಾದ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಯಾರ ಒತ್ತಡಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದವರು ಪ್ರಶ್ನಿಸಿದ್ದಾರೆ.

ಸುಂದರ ಕುಂದಾಪುರದ ಕಲ್ಪನೆಯಲ್ಲಿ ಪುರಸಭೆಯ ಅನುದಾನದಿಂದ ಅಳವಡಿಸಲಾದ ಇಂಟರ್ ಲಾಕ್ ತೆಗೆದು ಕಬ್ಬಿಣದ ಬೇಲಿ ನಿರ್ಮಾಣ ಮಾಡಿರುವುದು ಊರಿನ ಪ್ರಜ್ಞಾವಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕಾರಣಕ್ಕಾಗಿ ಕೂಡಲೇ ಈ ಬೇಲಿಯನ್ನು ತೆರವುಗೊಳಿಸಬೇಕು. ಪುರಸಭಾ ಆಡಳಿತಾಧಿಕಾರಿಗಳು ಈ ಕಡೆ ಗಮನ ಹರಿಸಿಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement