Advertisement

ಸೊರಕೆ ಕುರಿತು ಬಿಜೆಪಿ ಹೇಳಿಕೆ: ಕೊಡವೂರು ಆಕ್ರೋಶ

Advertisement

ಮಾಜಿ ಸಂಸದ, ಸಚಿವ ವಿನಯ್ ಕುಮಾರ್ ಸೊರಕೆಯವರ ಕುರಿತಾಗಿ ಕೀಳುಮಟ್ಟದ ಹೇಳಿಕೆ ನೀಡಿದ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ರವರ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನಯ್ ಕುಮಾರ್ ಸೊರಕೆಯವರು ಸಚ್ಚಾರಿತ್ರ್ಯವಂತ ರಾಜಕಾರಣಿಯಾಗಿದ್ದು ಪುತ್ತೂರಿನಲ್ಲಿ ಎರಡು ಬಾರಿ ಶಾಸಕರಾಗಿ, ಉಡುಪಿ ಚಿಕ್ಕಮಗಳೂರು ಸಂಸದರಾಗಿ, ರಾಜ್ಯ ಸಚಿವರಾಗಿ ಜನಪರ ಕೆಲಸವನ್ನು ಮಾಡಿರುವ ನಾಯಕರಾಗಿದ್ದಾರೆ. ಅವರು ಸೋತ ಮೇಲೂ ಜನರ ಕೆಲಸ ಮಾಡಿಕೊಡುವುದರಲ್ಲಿ ಬಿಡುವಿಲ್ಲದ ನಾಯಕನಾಗಿದ್ದು ಅಂತಹ ರಾಜಕಾರಣಿಯ ಕುರಿತು "ಸೊರಕೆಯವರು ಚುನಾವಣೆಯಲ್ಲಿ ಸೋತಿದ್ದಾರೆ. ಅವರು ರಾಜಕೀಯ ನಿವೃತ್ತಿ ಘೋಷಿಸಬೇಕು" ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಖಂಡನೀಯ. ಹಾಗಾದರೆ ಬಿಜೆಪಿಯಲ್ಲಿ ಸೋತ ನಾಯಕರೆಲ್ಲರೂ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆಯೇ? ಸ್ವತಃ ಕಿಶೋರ್ ಕುಮಾರ್ ರವರು ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೆ ಸ್ಥಾನಕ್ಕೆ ಕುಸಿದು ಇಡಗಂಟು ಕೂಡ ಕಳೆದುಕೊಂಡಿದ್ದನ್ನು ಮರೆತಿದ್ದಾರೆಯೇ? ಅವರದ್ದೆ ಹೇಳಿಕೆಯ ಪ್ರಕಾರ ಕಿಶೋರ್ ಕೂಡ ರಾಜಕೀಯ ನಿವೃತ್ತಿ ಘೋಷಿಸಬೇಕಿತ್ತಲ್ಲವೇ ಎಂದು ಕೊಡವೂರು ಪ್ರಶ್ನಿಸಿದ್ದಾರೆ.

ಸೊರಕೆಯವರು ಸಚಿವರಾಗಿದ್ದಾಗ ಮಾಡಿದ್ದ ಜನಪರ ಕೆಲಸಗಳ ಒಂದಷ್ಟು ಕೂಡ ಬಿಜೆಪಿಯಿಂದ ಸಚಿವರಾದ ಅಷ್ಟೂ ನಾಯಕರು ಮಾಡಿಲ್ಲ. ಕೊರೋನಾ ಲಾಕ್‌ಡೌನ್ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿಯ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಜನಸಾಮಾನ್ಯರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡದೇ ಕೊರೋನಾ ಮಾರಿಯ ಭಯದಿಂದ ಮನೆಯೊಳಗೆ ಅಡಗಿ ಕುಳಿತಿದ್ದಾಗ ಹಗಲು ರಾತ್ರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದವರು ಕಾಂಗ್ರೆಸ್ ನಾಯಕರುಗಳು ಮತ್ತು ಮುಖ್ಯವಾಗಿ ಮಾಜಿ ಸಚಿವ ಸೊರಕೆಯವರು. ಅಂತಹ ನಾಯಕರ ಕುರಿತು ನೀಡಿರುವ ಹೇಳಿಕೆ ಖಂಡನೀಯ. ಅಧಿಕಾರ ಇದ್ದಾಗ ಯಾವುದೇ ಜನಪರ ಕೆಲಸಗಳನ್ನು ಮಾಡದೇ ಕೇವಲ ಭಾವನಾತ್ಮಕ ವಿಚಾರಗಳಿಂದ ಜನರ ದಿಕ್ಕುತಪ್ಪಿಸುವ ಕೆಲಸವನ್ನು ಬಿಜೆಪಿಗರು ಇನ್ನಾದರೂ ನಿಲ್ಲಿಸಲಿ. ಸದಾ ಕಪಟ ನಾಟಕವಾಡುವ ಇವರುಗಳಿಗೆ ಜನತೆ ರಾಜ್ಯದಲ್ಲಿ ಈಗಾಗಲೇ ಪಾಠಕಲಿಸಿದ್ದಾರೆ. ಇನ್ನಾದರೂ ಬಿಜೆಪಿಗರು ಮತ್ತದರ ಜಿಲ್ಲಾಧ್ಯಕ್ಷರು ಇನ್ನೊಂದು ಪಕ್ಷದ ನಾಯಕರುಗಳ ಕುರಿತು ಅವಹೇಳನ ಮಾಡುವ ಪರಿಪಾಠ ನಿಲ್ಲಿಸಿ ವಿಷಯಾಧಾರಿತ ಚರ್ಚೆಗೆ ಮುಂದಾಗಲಿ ಎಂದು ಕೊಡವೂರು ಕರೆನೀಡಿದ್ದಾರೆ.

Advertisement
Advertisement
Recent Posts
Advertisement