ಮೋದಿಯವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಿಸಿದ ನಿರುದ್ಯೋಗಿ ಯುವಕರು!
ಮೋದಿಯವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಿಸಿದ ನಿರುದ್ಯೋಗಿ ಯುವಕರು!
Advertisement
ಇಂದು ಸೆಪ್ಟೆಂಬರ್ 17, ಪ್ರಧಾನಿ ಮೋದಿಯವರ ಜನ್ಮದಿನ. ಈ ಪ್ರಯುಕ್ತ ಅತ್ತ ಬಿಜೆಪಿ ಪಕ್ಷದ ನಾಯಕರುಗಳು ಮತ್ತು ಮೋದಿಭಕ್ತರು ಮೋದಿಯವರ ಹುಟ್ಟುಹಬ್ಬವನ್ನು ಕೋಟಿಗಟ್ಟಲೆ ರೂ. ಹಣ ಸುರಿದು ದೇಶದ ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ನೀಡಿ ಬಹು ವಿಜ್ರಂಭಣೆ ಯಿಂದ ಆಚರಿಸುವ ಕುರಿತು ಸಿದ್ದತೆ ಮಾಡಿಕೊಂಡಿದ್ದರೆ ಇತ್ತ ದೇಶದ ನಿರುದ್ಯೋಗಿ ಯುವಕರು ಸಾಮಾಜಿಕ ಜಾಲತಾಣದಲ್ಲಿ ನಿನ್ನೆ (ಸೆ.16) ಮದ್ಯ ರಾತ್ರಿಯಿಂದಲೇ ಪ್ರತಿಭಟನಾರ್ಥವಾಗಿ ಈ ದಿನವನ್ನು ಹ್ಯಾಷ್‌ಟ್ಯಾಗ್ ಬಳಸಿ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ ( #NationalUnemploymentDay #राष्ट्रीय_बेरोजगारी_दिवस ) ಆಚರಿಸುತ್ತಿದ್ದು ಹಾಗೂ ಅದು ಇಂದು ಇಡೀ ದಿನ ಟ್ರೆಂಡಿಂಗ್‌ನಲ್ಲಿ ಟಾಪ್‌ನಲ್ಲಿ ಇರುವುದು ಯುವಜನತೆಯ ಆಕ್ರೋಶವನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಈ ಟ್ರೇಡಿಂಗ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ದೇಶದ ಬಹುತೇಕ ವಿರೋಧ ಪಕ್ಷಗಳ ನಾಯಕರು ಭಾಗವಹಿಸುವ ಮೂಲಕ ಯುವಜನರ ಧ್ವನಿಯಾಗಿದ್ದಾರೆ.
ಹಾಗೆಯೇ ಈ ಟ್ರೆಂಡಿಂಗ್‌ನ ಕುರಿತು ಸಿದ್ದರಾಮಯ್ಯನವರು ಪತ್ರಿಕಾ ಹೇಳಿಕೆ ನೀಡಿದ್ದು ಅದು ಇಂತಿದೆ;
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಹಾರೈಸುತ್ತೇನೆ.
ಮೋದಿಯವರ ಜನ್ಮದಿನದ ಆಚರಣೆಯನ್ನು ಯಾರೂ ಬೇಡ ಅಂದಿಲ್ಲ, ಆದರೆ ಕೋಟ್ಯಂತರ ರೂಪಾಯಿ ಸುರಿದು ಜಾಹೀರಾತು ನೀಡಿ ಮಾಡದೇ ಇರುವ ಕೆಲಸಗಳನ್ನೆಲ್ಲಾ ಮೋದಿಯ ಸಾಧನೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿರುವುದಕ್ಕಷ್ಟೇ ನಮ್ಮ ವಿರೋಧ.
ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಸಾಧನೆಗಳೆಂದರೆ, ಭಾರತದ ಜಿಡಿಪಿಯನ್ನು ಮೈನಸ್ 23% ಗೆ ಇಳಿಸಿರುವುದು, ನಿರುದ್ಯೋಗ ಪ್ರಮಾಣವನ್ನು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿಸಿರುವುದು, ಪೆಟ್ರೋಲ್ ಡೀಸೆಲ್ ಬೆಲೆ ನೂರರ ಆಸುಪಾಸಿಗೆ ತಂದು ನಿಲ್ಲಿಸಿರುವುದು.
ದೇಶದ ಯುವಜನತೆ ಮೋದಿ ಅವರಲ್ಲಿ ಭರವಸೆಯಿಟ್ಟು ಮತ ನೀಡಿದ್ದರು, ಇಂದು ಅದೇ ಯುವಜನಾಂಗ ಉದ್ಯೋಗವಿಲ್ಲದೆ ಖಿನ್ನತೆ ಅನುಭವಿಸುತ್ತಿದೆ. ಕೃಷಿ ಕ್ಷೇತ್ರವೊಂದನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ವಲಯಗಳ ಪ್ರಗತಿ ಋಣಾತ್ಮಕವಾಗಿದೆ. ಇದರಿಂದ ರಾಷ್ಟ್ರದ ಭವಿಷ್ಯಕ್ಕೆ ಅಂಧಕಾರ ಆವರಿಸಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ ಇರುವ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ. ಇದರಿಂದ ನೊಂದಿರುವ ಉದ್ಯೋಗವಂಚಿತ ಯುವಜನತೆ ಈ ದಿನವನ್ನು #NationlUnemploymentDay ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ
ಮಾರ್ಚ್‌ನಲ್ಲಿ 564 ಇದ್ದ ದೇಶದ ಕೊರೊನಾ ಸೋಂಕಿತರ ಪ್ರಮಾಣವನ್ನು ಕೇವಲ ಆರೇ ತಿಂಗಳಲ್ಲಿ 51 ಲಕ್ಷಕ್ಕೆ ಮುಟ್ಟಿಸಿರುವುದೇ ನರೇಂದ್ರ ಮೋದಿ ಅವರ ಮಹತ್ತರ ಸಾಧನೆ. ಭಾರತವನ್ನು ವಿಶ್ವಗುರು ಮಾಡ್ತೀನಿ ಅಂತ ಹೇಳಿ, ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ.
ಸದ್ಯ ಸೋಂಕಿತರ ಏರಿಕೆ ಪ್ರಮಾಣದಲ್ಲಿ ಭಾರತವೇ ಮುಂದಿದೆ.
ಆರೋಗ್ಯ ಮಂತ್ರಿ ಶ್ರೀರಾಮುಲು ತನ್ನ ಕೈಯಲ್ಲಿ ಆರೋಗ್ಯ ಇಲಾಖೆಯನ್ನು ನಿಭಾಯಿಸೋಕೆ ಆಗ್ತಿಲ್ಲ, ಸ್ವಲ್ಪ ಸಹಾಯ ಮಾಡಿ ಅಂತ ಕೇಳಿರಬಹುದು. ಇಲ್ಲದಿದ್ದರೆ ಸಂವಿಧಾನಾತ್ಮಕ ಹುದ್ದೆಯೇ ಇಲ್ಲದ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳ ಸಭೆ ನಡೆಸೋಕೆ ಹೇಗೆ ಸಾಧ್ಯ? ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಾ? ಅಥವಾ ವಿಜಯೇಂದ್ರನಾ?
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಈಗಲೇ ಹೆಚ್ಚಿದೆ, ಇದಕ್ಕೆ ಇನ್ನಷ್ಟು ಗ್ರಾಮಗಳನ್ನು ಸೇರಿಸಿ, ಹುದ್ದೆಗಳ ಹೆಸರು ಬದಲಾಯಿಸಿದ್ರೆ ನಗರದ ಚಿತ್ರಣ ಬದಲಾಗುತ್ತಾ? ರಾಜಾಕಾಲುವೆಗಳ ದುರಸ್ತಿ, ರಸ್ತೆಗಳ ದುರಸ್ತಿ ಸೇರಿದಂತೆ ಇತರೆ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಲ್ಲಾ? ಸರ್ಕಾರದ ಬಳಿ ಹಣವಿಲ್ಲದೆ ಇವೆಲ್ಲ ಸಾಧ್ಯವಾ? ರಾಜ್ಯ ಬಿಜೆಪಿ ನಾಯಕರು ಬರೀ ಭಾಷಣದಿಂದ ಬದಲಾವಣೆ ಮಾಡೋಕೆ ಹೊರಟಿದ್ದಾರೆ ಎಂದವರು ಹೇಳಿದ್ದಾರೆ.